Kannada News: ದಿಡೀರ್ ಎಂದು ವಿಶೇಷ ಬಿರಿಯಾನಿ ತಿಂದು ಮೃತ ಪಟ್ಟ ಯುವತಿ: ಷಾಕಿಂಗ್ ಮಾಹಿತಿ ಹೊರಹಾಕಿದ ಸಹೋದರಿ
Kannada News: ಕಾಸರಗೋಡಿನಲ್ಲಿ ಯಾರು ಊಹಿಸಲಾರದ ಘಟನೇ ಒಂದು ಹೊಸ ವರ್ಷದ ಸಮಯದಲ್ಲಿ ನಡೆದಿದೆ. ಅದೇನೆಂದರೆ, 19 ವರ್ಷದ ಅಂಜುಶ್ರೀ ಎನ್ನುವ ಹುಡುಗಿಯೊಬ್ಬಳು
ಹೊಸ ವರ್ಷದ ಸಮಯಕ್ಕೆ ಬಿರಿಯಾನಿ ಆರ್ಡರ್ ಮಾಡಿ, ಸ್ನೇಹಿತರ ಜೊತೆಗೆ ತಿಂದಿದ್ದು, ಮರುದಿನ ಅಸ್ವಸ್ಥಳಾಗಿದ್ದಾಳೆ. ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಿದ್ದು, ಮತ್ತೆ ಆಕೆಗೆ ಆರೋಗ್ಯ ತಪ್ಪಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ನೀಡಿದ ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಹೊಸ ವರ್ಷಕ್ಕಾಗಿ ಅಂಜುಶ್ರೀ ಹಾಗೂ ಅವರ 4 ಸ್ನೇಹಿತರು ಉದುಮದಲ್ಲಿರುವ ಅಲ್ ರೊಮ್ಯಾನ್ಸಿಯಾ ಎನ್ನುವ ಹೋಟೆಲ್ ಇಂದ ಸ್ಪೆಷಲ್ ಕುಜಿಮಂತಿ ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದಾರೆ. ಅಂಜುಶ್ರೀ ಮರುದಿನ ಕೂಡ ಅದನ್ನೇ ತಿಂದಿದ್ದು, ಮರುದಿನ ಅಸ್ವಸ್ಥಗೊಂಡಿದ್ದಾಳೆ, ತಕ್ಷಣವೇ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಕೊನೆಗೆ ಕಳೆದ ಶುಕ್ರವಾರ ಮೃತಪಟ್ಟಿದ್ದಾಳೆ ಅಂಜುಶ್ರೀ. ಬಿರಿಯಾನಿ ತಿಂದ ಅಂಜುಶ್ರೀಗೆ ಮಾತ್ರವಲ್ಲದೆ, ಇನ್ನು ಇಬ್ಬರಿಗೆ ವಾಂತಿ, ಹೊಟ್ಟೆನೋವು ಮತ್ತು ಬೇರೆ ಸಮಸ್ಯೆ ಆಗಿತ್ತು ಎಂದು ಅಂಜುಶ್ರಿ ತಂಗಿ ಅನುಶ್ರೀ ತಿಳಿಸಿದ್ದಾರೆ. ಇದನ್ನು ಓದಿ..Kannada News: ವೈದ್ಯರನ್ನು ದೇವರು ಎಂದು ಕೊಳ್ಳುವ ಜನರು, ಆಪರೇಷನ್ ಮಾಡಿಸಿಕೊಳ್ಳಲು ಹೋದಾದ ಆ ಡಾಕ್ಟರ್ ಏನು ಮಾಡಿದ ಗೊತ್ತೇ? ಮಹಿಳೆ ಶಾಕ್.

ಅನ್ಯಾಯವಾಗಿ ತಮ್ಮ ಮಗಳ ಪ್ರಾಣ ಹೋಗಿದ್ದಕ್ಕೆ ಅಂಜುಶ್ರೀ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಆಹಾರ ಸುರಕ್ಷತಾ ಇಲಾಖೆ ಹೋಟೆಲ್ ಮುಚ್ಚಿಸಿದೆ, ಹಾಗೆಯೇ ಪೊಲೀಸರು ಹೋಟೇಲ್ ಮಾಲೀಕರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಂಜುಶ್ರೀ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ, ಎಲ್ಲಾ ವಿಷಯವು ಸ್ಪಷ್ಟವಾಗಿ ಗೊತ್ತಾಗಲಿದೆ. ಒಟ್ಟಿನಲ್ಲಿ ಬಿರಿಯಾನಿ ತಿಂದು ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಅಂಜುಶ್ರೀ ಅವರ ಸಾವು ಎಲ್ಲರಿಗೂ ಬಹಳ ನೋವನ್ನುಂಟು ಮಾಡಿದೆ. ಇದನ್ನು ಓದಿ.. Kannada News: ವರ್ಷಗಳ ಕಾಲ ಪ್ರೀತಿ ಮಾಡಿ ಸುಂದರಿ ಯುವತಿಯನ್ನು ಮದುವೆಯಾದ. ಕೊನೆಗೆ ಆತನ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಏನಾಯಿತು ಗೊತ್ತೇ??