Biggboss Kannada: ಸಾನಿಯಾ ಮನೆಯಿಂದ ಹೊರಹೋದಮೇಲೆ ಏನಾಯ್ತು ಎಂಬುವುದರ ಅಸಲಿ ಸತ್ಯವನ್ನು ಬಿಚ್ಚಿಟ್ಟ ದೀಪಿಕಾ; ರೂಪೇಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??

96

Get real time updates directly on you device, subscribe now.

Biggboss Kannada: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಇಂದ ಟಿವಿ ಸೀಸನ್ ವರೆಗು ಜೊತೆಯಾಗಿ ಬಂದು ಫ್ರೆಂಡ್ಸ್ ಆಗಿ ಬಹಳ ಹಚ್ಚಿಕೊಂಡಿದ್ದವರು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್. ಇವರಿಬ್ಬರ ಫ್ರೆಂಡ್ಶಿಪ್ ಬಹಳ ಗಾಢವಾದದ್ದು, ರೂಪೇಶ್ ಮತ್ತು ಸಾನ್ಯಾ ಹೆಚ್ಚಾಗಿ ಸಮಯ ಕಳೆಯುತ್ತಿದ್ದರು, ರೂಪೇಶ್ ಅವರಿಗೆ ದೊಡ್ಡ ಸಪೋರ್ಟ್ ಆಗಿ ನಿಂತಿದ್ದರು ಸಾನ್ಯಾ ಅಯ್ಯರ್. ರೂಪೇಶ್ ಸಹ ಸಾನ್ಯಾ ಅವರಿಗೆ ಎಲ್ಲಾ ವಿಚಾರದಲ್ಲೂ ಜೊತೆಗಿದ್ದರು. ಇದೀಗ ರೂಪೇಶ್ ಶೆಟ್ಟಿ, ಓಟಿಟಿ ಸೀಸನ್ ಇಂದ ಟಿವಿ ಸೀಸನ್ ಗೆ ಆಯ್ಕೆಯಾದ ನಂತರ, ಕೆಲವು ವಾರಗಳಲ್ಲಿ ಸಾನ್ಯಾ ಅಯ್ಯರ್ ಎಲಿಮಿನೇಟ್ ಆದರು.

ಸಾನ್ಯಾ ಹೊರಹೋದ ಬಳಿಕ ಏನಾಯಿತು ಎಂದು ಟಿವಿಯಲ್ಲಿ ಎಲ್ಲರೂ ನೋಡಿದ್ದೇವೆ, ರೂಪೇಶ್ ಶೆಟ್ಟಿ ತುಂಬಾ ಬೇಸರದಲ್ಲಿದ್ದರು, ಅಳುತ್ತಿದ್ದರು.. ಆದರೆ ನಿಜಕ್ಕೂ ಆ ಸಮಯದಲ್ಲಿ ಏನಾಯಿತು, ರೂಪೇಶ್ ಶೆಟ್ಟಿ ಅವರು ಬದಲಾಗಿದ್ದು ಹೇಗೆ? ಇದೆಲ್ಲವನ್ನು ದೀಪಿಕಾ ದಾಸ್ ಅವರು ರಿವೀಲ್ ಮಾಡಿದ್ದಾರೆ. ದೀಪಿಕಾ ದಾಸ್ ಅವರು ಹೇಳಿರುವ ಹಾಗೆ, “ಅವರಿಬ್ಬರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಫ್ರೆಂಡ್ಸ್ ಅಂತ ಹೇಳಿಕೊಂಡಿದ್ದರು. ಅದೇ ರೀತಿ ಇದ್ರು, ಆಗಾಗ ಜಗಳ ಮನಸ್ತಾಪ ಎಲ್ಲವೂ ಆಗ್ತಾ ಇತ್ತು. ಆದರೆ ಅದನ್ನ ಅಲ್ಲೇ ಸರಿ ಮಾಡಿಕೊಂಡು, ಚೆನ್ನಾಗಿರ್ತಿದ್ರು. ಸಾನ್ಯಾ ಮನೆಯಿಂದ ಎಲಿಮಿನೇಟ್ ಆಗಿ ಹೋದಮೇಲೆ.. ಇದನ್ನು ಓದಿ.. Kannada News: ಯಪ್ಪಾ ನರೇಶ್ ಏನ್ ಕಡಿಮೆ ಅಲ್ಲ ಸ್ವಾಮಿ: ಮುಗ್ದನಂತೆ ಕಾಣಿಸಿದ್ದ ನರೇಶ್, ಮೂರನೇ ಹೆಂಡತಿಗೆ ಇರುವ ವ್ಯತ್ಯಾಸ ಕೇಳಿದರೆ ಈತನ ಬಗ್ಗೆ ಗೊತ್ತಾಗಿ ಬಿಡುತ್ತದೆ.

ರೂಪಿ ತುಂಬಾ ಬೇಜಾರ್ ಮಾಡ್ಕೊಂಡಿದ್ರು.. ಸಾನ್ಯಾಗೆ ಜಾಸ್ತಿ ಟೈಮ್ ಕೊಡಲಿಲ್ಲ ಅಂತ ಹೇಳಿ ಬೇಜಾರ್ ಮಾಡಿಕೊಳ್ತಾ ಇದ್ರು. ಒಂದು ವಾರ ಆದಮೇಲೆ ನಾವು ಹೊಸ ರೂಪೇಶ್ ಶೆಟ್ಟಿಯನ್ನ ನೋಡಿದ್ವಿ..” ಎಂದು ಹೇಳಿದ್ದಾರೆ ದೀಪಿಕಾ ದಾಸ್. ಇನ್ನು ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಿದ್ದಾರೆ. ದೀಪಿಕಾ ದಾಸ್ ಅವರು ಕೂಡ ಫಿನಾಲೆ ತಲುಪಿ, 3ನೇ ಸ್ಥಾನದಲ್ಲಿದ್ದರು. ಸಾನ್ಯಾ ರೂಪೇಶ್ ಜೋಡಿ ಬಿಗ್ ಬಾಸ್ ಶೋ ಮುಗಿದ ಮೇಲೆ ಕೂಡ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಕನ್ನಡಿಗ ರಿಷಬ್ ಶೆಟ್ಟಿ ಮೇಲೆ ಕಣ್ಣು ಹಾಕಿದ ಬಾಲಿವುಡ್ ಅಪ್ಸರೆ, ಜಾನ್ವಿ ಹೇಳಿದ್ದೇನು ಗೊತ್ತೇ??

Get real time updates directly on you device, subscribe now.