Useful Tips: ಪುರುಷರು ನಿಜಕ್ಕೂ ತಂದೆಯಾಗಲು ಬೆಸ್ಟ್ ವಯಸ್ಸು ಯಾವುದು ಗೊತ್ತೇ?? ಈ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಳ್ಳಲು ಮುಂದಾಗಿ, ಅದೇ ಬೆಸ್ಟ್.
Useful Tips: ಜೀವನದಲ್ಲಿ ಸರಿಯಾದ ಸಮಯಕ್ಕೆ ಮಗು ಮಾಡಿಕೊಳ್ಳುವುದು ಬಹಳ ಮುಖ್ಯ ಎನ್ನುವ ಬಗ್ಗೆ ಮನೆಯವರು ಮತ್ತು ವೈದ್ಯರು ಸಲಹೆ ನೀಡುತ್ತಾರೆ. ಮಹಿಳೆಯರಿಗೆ ಸರಿಯಾದ ವಯಸ್ಸಿನಲ್ಲಿ ಸಮಯದಲ್ಲಿ ಆಗುವುದು ಹೇಗೆ ಮುಖ್ಯವೋ, ಅದೇ ರೀತಿ ಪುರುಷರ ವಿಚಾರದಲ್ಲಿ ಕೂಡ ಇದು ಬಹಳ ಮುಖ್ಯ ಆಗುತ್ತದೆ.
ಯಾವ ಮಹಿಳೆಯ ಪತಿಯ ವಯಸ್ಸು 40 ದಾಟಿರುತ್ತೋ, ಅವರು ಗರ್ಭಿಣಿ ಆಗುವುದಕ್ಕೆ ಕಷ್ಟ ಪಡಬೇಕಾಗುತ್ತದೆ. ಇನ್ನು 25 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪತಿ ಹೊಂದಿರುವ ಮಹಿಳೆಯರು ಬೇಗ ಗರ್ಭಿಣಿ ಆಗುತ್ತಾರೆ, ಈ ರೀತಿ ಆಗಲು ಕಾರಣ ಟೆಸ್ಟೋಸ್ಟಿರೋನ್ ಹಾರ್ಮೋನ್ ಗಳು. ಪುರುಷರ ವಯಸ್ಸು 30 ದಾಟಿದ ಮೇಲೆ, ಅವರ ಟೆಸ್ಟೋಸ್ಟಿರೋನ್ ಹಾರ್ಮೋನ್ ಮಟ್ಟ ಪ್ರತಿವರ್ಷ 1% ಅಷ್ಟು ಕಡಿಮೆ ಆಗುತ್ತದೆ, ಇದರಿಂದ ವೀರ್ಯಾಣು ಉತ್ಪಾದನೆ ಕೂಡ ಕಡಿಮೆ ಆಗಬಹುದು.
ವೀರ್ಯಾಣು ಗುಣಮಟ್ಟ :- ವಯಸ್ಸಾದ ಹಾಗೆ ಇವುಗಳ ಗುಣಮಟ್ಟ ಕಡಿಮೆ ಆಗುತ್ತದೆ. 35 ವರ್ಷ ದಾಟಿದ ಬಳಿಕ ಇನ್ನು ಕಡಿಮೆ ಆಗುತ್ತಲೇ ಇರುತ್ತದೆ. ಗುಣಮಟ್ಟ ಕಡಿಮೆ ಆಗುವುದು ಮಾತ್ರವಲ್ಲದೆ, ಅವುಗಳ ವೇಗ ಕೂಡ ಕಡಿಮೆ ಆಗುತ್ತದೆ.
ವೀರ್ಯಗಳ ಚಲನೆ :- ಪುರುಷರ ವಯಸ್ಸು 30 ದಾಟಿದ ಬಳಿಕ ವೀರ್ಯದ ಚಲನಶೀಲತೆ ಕಡಿಮೆ ಆಗುತ್ತದೆ. 25 ವರ್ಷಗಳ ವರೆಗು ಇದು ಒಳ್ಳೆಯದೇ ಆಗಿರುತ್ತದೆ. ಬಳಿಕ ಕಡಿಮೆ ಆಗುತ್ತದೆ..ಈ ರೀತಿ ಆದಾಗ ವೀರ್ಯವು ನಿಮ್ಮ ಪಾರ್ಟ್ನರ್ ಅನ್ನು ತಲುಪಲು ಕಷ್ಟ ಆಗುತ್ತದೆ.
ಒಳ್ಳೆಯ ಜೀವನ ಶೈಲಿಯ :- ಪುರುಷರಲ್ಲಿ ವೀರ್ಯದ ಗುಣಮಟ್ಟ ವಯಸ್ಸಿನ ಮೇಲೆ ಮಾತ್ರ ಅವಲಂಬಿಸಿರುವುದಿಲ್ಲ, ಉತ್ತಮವಾದ ಜೀವನಶೈಲಿ ಕೂಡ ಮುಖ್ಯವಾಗುತ್ತದೆ. ಧೂಮಪಾನ ಮಾಡುವುದು ಮತ್ತು ಇನ್ನಿತರ ದುರಭ್ಯಾಸ ಇರುವವರಿಗೆ ವೀರ್ಯದ ಗುಣಮಟ್ಟ ಚೆನ್ನಾಗಿರುವುದಿಲ್ಲ, ಇದರಿಂದ ಪುರುಷರ ಫಲವತ್ತದ ಮಟ್ಟ ಕಡಿಮೆ ಆಗುತ್ತದೆ.
ಸರಿಯಾದ ವಯಸ್ಸು :- ತಂದೆ ಆಗುವುದಕ್ಕೆ ಸರಿಯಾದ ವಯಸ್ಸು 22 ರಿಂದ 25 ವರ್ಷಗಳ, ಆದರೆ ಈಗ ಯಾರು ಕೂಡ ಇಷ್ಟು ಬೇಗ ಮದುವೆ ಆಗುವುದಿಲ್ಲ. ಹಾಗಾಗಿ 28 ರಿಂದ 30 ವರ್ಷಗಳ ಒಳಗೆ ಮದುವೆಯಾಗಿ ತಂದೆ ಆಗುವುದು ಒಳ್ಳೆಯದು, ಒಂದು ವೇಳೆ 30 ವರ್ಷ ಮೇಲ್ಪಟ್ಟರೆ, ದೇಹದ ಸಾಮರ್ಥ್ಯ ಕಡಿಮೆ ಆಗುತ್ತದೆ.
ಹದಿಹರೆಯ :- ಹುಡುಗರಿಗೆ ವೀರ್ಯಾಣು ಉತ್ಪಾದನೆ ಶುರುವಾಗುವುದು 15 ರಿಂದ 19 ವರ್ಷದ ಸಮಯದಲ್ಲಿ, ಆಗ ಅವರು ಯಾವ ಮಹಿಳೆಯನ್ನಾದರು ಗರ್ಭಿಣಿ ಆಗುವ ಹಾಗೆ ಮಾಡಬಹುದು. ಆದರೆ ಇದು ಸರಿಯಾದ ವಯಸ್ಸಲ್ಲ..
ಡಿ.ಎನ್.ಎ :- ವಯಸ್ಸು 30 ದಾಟಿದ ನಂತರ ದೇಹದಲ್ಲಿ ವೀರ್ಯಾಣು ಮಟ್ಟ ಕುಸಿಯುತ್ತದೆ. ಪ್ರತಿವರ್ಷ ಕಡಿಮೆ ಆಗುತ್ತದೆ. 35 ವರ್ಷಗಳ ನಂತರ ರೂಪಾಂತರ ಆಗುವುದು ಇಲ್ಲ. ಹಾಗಾಗಿ ಆ ವಯಸ್ಸಿನಲ್ಲಿ ಮಗು ಪಡೆಯುವುದು ಕಷ್ಟವಾಗುತ್ತದೆ.