Kannada News: ದರ್ಶನ್ ರವರ ಫ್ಯಾನ್ಸ್ ನಿಜಕ್ಕೂ ಗೆದ್ರ? ಅಂದುಕೊಂಡದ್ದು ಮಾಡಲು ಸಾಧ್ಯವಾಯಿತೇ? ಟ್ರೈಲರ್ 24 ಗಂಟೆಗಳಲ್ಲಿ ಪಡೆದ ವೀಕ್ಷಣೆ ಎಷ್ಟು ಗೊತ್ತೇ??
Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಯೂಟ್ಯೂಬ್ ನಲ್ಲಿ 7ಮಿಲಿಯನ್ ವೀಕ್ಷಣೆ ದಾಟಿ ಮುನ್ನುಗ್ಗುತ್ತಿದೆ. ಡಿಬಾಸ್ ದರ್ಶನ್ ಅವರ ಅಭಿಮಾನಿಗಳು, ಕ್ರಾಂತಿ ಟ್ರೈಲರ್ ಬಿಡುಗಡೆ ಆಗುತ್ತಿದ್ದ ಹಾಗೆ, ಯೂಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಬೇಕು ಎಂದು ಕಾದು ಕುಳಿತಿದ್ದರು. ಅಂದುಕೊಂಡಿದ್ದನ್ನ ಡಿಬಾಸ್ ಅಭಿಮಾನಿಗಳು ಸಾಧಿಸಿದ್ದಾರಾ? ಹೇಗಿದೆ ಕ್ರಾಂತಿ ಟ್ರೈಲರ್ ರೆಸ್ಪಾನ್ಸ್ ? ತಿಳಿಸುತ್ತೇವೆ ನೋಡಿ..
ಕ್ರಾಂತಿ ಟ್ರೈಲರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ, ದರ್ಶನ್ ಅವರು ಕ್ರಾಂತಿ ರಾಯಣ್ಣ ಎನ್ನುವ ಬ್ಯುಸಿನೆಸ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ. ಟ್ರೈಲರ್ ನೋಡಿದರೆ ಸಿನಿಮಾ ಬೆಳ್ಳಿತೆರೆಗೆ ಬಂದ ನಂತರ ದೊಡ್ಡದಾಗಿ ಯಶಸ್ಸು ಗಳಿಸುವುದು ಪಕ್ಕಾ. ಕ್ರಾಂತಿ ಟ್ರೈಲರ್ ಬಿಡುಗಡೆಯಾಗಿ ಈಗಾಗಲೇ ಒಂದು ದಿನಕ್ಕಿಂತ ಹೆಚ್ಚಿನ ಸಮಯ ಆಗಿದ್ದು, ದರ್ಶನ್ ಅವರ ಅಭಿಮಾನಿಗಳು, ದಾಖಲೆ ಬರೆಯುವಲ್ಲಿ ಒಂದು ಮಟ್ಟಕ್ಕೆ ಸಕ್ಸಸ್ ಕಂಡಿದ್ದಾರೆ. ಇದನ್ನು ಓದಿ..Kannada news: ಪುನೀತ್ ರವರ ದಾಖಲೆಯನ್ನು ಮೀರಿಸಿಬಿಟ್ಟ ಸಿದ್ದೇಶ್ವರ ಸ್ವಾಮೀಜಿ: ಅಂಕಿ ಅಂಶಗಳಲ್ಲಿ ಸಿದ್ದವಾದ ವಿಶೇಷ ದಾಖಲೆ ಏನು ಗೊತ್ತೇ??
24 ಗಂಟೆಗಳಲ್ಲಿ 7.8 ಮಿಲಿಯನ್ಸ್ ವೀಕ್ಷಣೆ ಪಡೆದಿದೆ, 24 ಗಂಟೆಗಳಲ್ಲಿ 70 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಸಿ, ವ್ಯುಸ್ ವಿಚಾರದಲ್ಲಿ ಕ್ರಾಂತಿ ಟ್ರೈಲರ್ 4ನೇ ಸ್ಥಾನದಲ್ಲಿದೆ. ಲೈಕ್ಸ್ ವಿಚಾರಕ್ಕೆ ಬರುವುದಾದರೆ, 7 ನಿಮಿಷದಲ್ಲಿ 50ಸಾವಿರ ಲೈಕ್ಸ್, 20 ನಿಮಿಷಕ್ಕೆ 1 ಲಕ್ಷ ಲೈಕ್ಸ್, 45 ನಿಮಿಷಕ್ಕೆ ಒಂದೂವರೆ ಲಕ್ಷ ಲೈಕ್ಸ್, ಹೀಗೆ 24 ಗಂಟೆಗಳಲ್ಲಿ 3 ಲಕ್ಷದ 94 ಸಾವಿರ ಲೈಕ್ಸ್ ಪಡೆದು, 2ನೇ ಸ್ಥಾನದಲ್ಲಿದೆ ಕ್ರಾಂತಿ. ಕೆಜಿಎಫ್2 ದಾಖಲೆಯನ್ನು ಕ್ರಾಂತಿ ಮುರಿದಿಲ್ಲ. ಕೆಜಿಎಫ್1 ಸೀಕ್ವೆಲ್ ಆಗಿದ್ದ ಕಾರಣ ಆ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ಕ್ರಾಂತಿ ಎರಡನೇ ಸ್ಥಾನದಲ್ಲಿ ಇರುವುದು ಒಳ್ಳೆಯ ವಿಚಾರವೇ ಆಗಿದೆ. ಇದನ್ನು ಓದಿ.. Biggboss Kannada: ಸಾನಿಯಾ ಮನೆಯಿಂದ ಹೊರಹೋದಮೇಲೆ ಏನಾಯ್ತು ಎಂಬುವುದರ ಅಸಲಿ ಸತ್ಯವನ್ನು ಬಿಚ್ಚಿಟ್ಟ ದೀಪಿಕಾ; ರೂಪೇಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??