Business Idea: ವಿದ್ಯಾರ್ಥಿಗಳಿಂದ ಹಿಡಿದು, ವಯಸ್ಸಾದವರು ಕೂಡ ಮನೆಯಲ್ಲಿ ಕುಳಿತು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೆ?

24

Get real time updates directly on you device, subscribe now.

Business Idea: ಈಗಷ್ಟೇ ಹೊಸ ವರ್ಷ ಶುರುವಾಗಿದೆ, ಹೊಸ ವರ್ಷ ಎಂದರೆ ಎಲ್ಲರಿಗೂ ಹೊಸದಾಗಿ ಏನನ್ನಾದರು ಮಾಡಿ, ಜೀವನಕ್ಕೆ ಬದಲಾವಣೆ ತರಬೇಕು ಎನ್ನುವ ಆಸೆ ಇರುತ್ತದೆ. ಈ ಸಮಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪಾರ್ಟೈಂ ಕೆಲಸ ಮಾಡಿ, ಹಣ ಸಂಪಾದನೆ ಮಾಡಿ ತಮ್ಮ ಖರ್ಚನ್ನು ತಾವು ನೋಡಿಕೊಳ್ಳಬೇಕು ಎಂದು ಬಯಸಿದರೆ, ಇಂದು ನಾವು ನಿಮಗೆ ಕೆಲವು ಐಡಿಯಾಗಳನ್ನು ತಿಳಿಸುತ್ತೇವೆ. ನಿಮಗಾಗಿ ಹಣ ಸಂಪಾದನೆ ಮಾಡಲು ಸಾಕಷ್ಟು ಐಡಿಯಾಗಳಿವೆ, ಅವುಗಳ ಬಗ್ಗೆ ಈಗ ತಿಳಿಸುತ್ತೇವೆ ನೋಡಿ..

ಪಾರ್ಟೈಂ ಜಾಬ್ :- ನೀವು ಸ್ಟುಡೆಂಟ್ ಆಗಿದ್ದರೆ, ನಿಮ್ಮ ಕಾಲೇಜಿನ ಕ್ಯಾಂಪಸ್ ನಲ್ಲಿ ಲೈಬ್ರರಿ ಅಥವಾ ಡೈನಿಂಗ್ ಹಾಲ್ ಗಳಲ್ಲಿ ಪಾರ್ಟೈಂ ಕೆಲಸಕ್ಕೆ ಟ್ರೈ ಮಾಡಬಹುದು. ಕ್ಯಾಂಪಸ್ ನ ಹೊರಗಡೆ ಕೂಡ, ಕಾಫಿ ಶಾಪ್ ಗಳಲ್ಲಿ ಅಥವಾ ರೆಸ್ಟೋರೆಂಟ್ ಗಳಲ್ಲಿ ನಿಮಗೆ ಪಾರ್ಟೈಂ ಕೆಲಸ ಸಿಗುತ್ತದೆ.
ಫ್ರೀಲ್ಯಾನ್ಸಿಂಗ್ :- ಈಗ ಫ್ರೀ ಲ್ಯಾನ್ಸರ್ ಗಳಿಗೆ ಬಹಳ ಡಿಮ್ಯಾಂಡ್ ಇದೆ. ನಿಮಗೆ ಬರವಣಿಗೆ ಗೊತ್ತಿದ್ದರೆ, ಅಥವಾ ಗ್ರಾಫಿಕ್ ಡಿಸೈನಿಂಗ್, ಪ್ರೋಗ್ರಾಮಿಂಗ್ ಗೊತ್ತಿದ್ದರೆ, ನೀವು ಫ್ರೀಲ್ಯಾನ್ಸಿಂಗ್ ಕೆಲಸ ಮಾಡಬಹುದು. ಇದರಲ್ಲಿ ಒಳ್ಳೆಯ ಸಂಬಳ ಸಿಗುತ್ತದೆ, ಹಾಗೆಯೇ ಹಲವು ವೆಬ್ಸೈಟ್ ಗಳಿಗೆ ಫ್ರೀಲ್ಯಾನ್ಸರ್ ಗಳ ಅಗತ್ಯವಿದೆ.
ವಸ್ತುಗಳನ್ನು ಬಾಡಿಗೆಗೆ ನೀಡಿ :- ಒಂದು ವೇಳೆ ನಿಮ್ಮ ಬಳಿ ಕ್ಯಾಮೆರಾ, ಬೈಕ್, ಕಾರ್ ಇಂಥಹ ವಸ್ತುಗಳಿದ್ದರೆ, ಅವುಗಳನ್ನು ನೀವು ನಿರಂತರವಾಗಿ ಬಳಸದೆ ಇದ್ದರೆ, ಅವುಗಳನ್ನು ಬಾಡಿಗೆಗೆ ನೀಡಿ ಹಣ ಸಂಪಾದನೆ ಮಾಡಬಹುದು.

ಟ್ಯೂಷನ್ಸ್ :- ಈಗ ಟ್ಯುಟರ್ ಗಳಿಗೂ ಒಳ್ಳೆಯ ಡಿಮ್ಯಾಂಡ್ ಇದೆ. ನಿಮಗೆ ಟೀಚಿಂಗ್ ನಲ್ಲಿ ಆಸಕ್ತಿ ಇದ್ದರೆ, ನಿಮಗೆ ಚೆನ್ನಾಗಿ ಗೊತ್ತಿರುವ ಸಬ್ಜೆಕ್ಟ್ ಟ್ಯೂಷನ್ಸ್ ಹೇಳಿಕೊಡಲು ಶುರು ಮಾಡಬಹುದು. ಟ್ಯೂಷನ್ಸ್ ಗಳನ್ನು ಮನೆಯಲ್ಲಿಯೇ ಮಾಡಬಹುದು, ಅಥವಾ ಪ್ರತ್ಯೇಕವಾಗಿ ಅವರ ಮನೆಗೆ ಹೋಗಿ ಕಲಿಸಬಹುದು, ಅಥವಾ ಆನ್ಲೈನ್ ಮೂಲಕ ಕೂಡ ಟ್ಯೂಷನ್ಸ್ ಹೇಳಿಕೊಡಬಹುದು. ಈ ಮೂಲಕ ಹೆಚ್ಚು ಹಣ ಸಂಪಾದನೆ ಮಾಡಬಹುದು.
ಆನ್ಲೈನ್ ಮಾರಾಟ :- ನಿಮಗೆ ಉಪಯೋಗಕ್ಕೆ ಬರದ ವಸ್ತುಗಳು ಮನೆಯಲ್ಲಿ ಇದ್ದರೆ, ಅವುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ಇನ್ನು ಬೇರೆ ವಸ್ತುಗಳನ್ನು ಕೂಡ ಮಾರಾಟ ಮಾಡಬಹುದು.

Get real time updates directly on you device, subscribe now.