Kannada News: 20 ವರ್ಷದ ನಟಿಯ ಮರಣೋತರ ಪರೀಕ್ಷೆಯಲ್ಲಿ ಬಯಲಾಯ್ತು ಕಹಿ ಸತ್ಯ: ಕಾರಣ ಏನು ಅಂತೇ ಗೊತ್ತೇ??

36

Get real time updates directly on you device, subscribe now.

Kannada News: ಹಿಂದಿ ಕಿರುತೆರೆಯಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಕಿರುತೆರೆ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಕಳೆದ ಶನಿವಾರ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ನಲ್ಲಿಯೇ ನಟಿ ತುನಿಷಾ ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸ್ಥಳದಲ್ಲಿಯೇ ಆ ರೀತಿ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣ ಏನು ಎನ್ನುವ ಕುತೂಹಲ ಶುರುವಾಗಿದ್ದು, ನಟಿಯ ಮರಣೋತ್ತರ ಪರೀಕ್ಷೆಯ ಬಳಿಕ ಅನೇಕ ವಿಚಾರಗಳು ಬಹಿರಂಗವಾಗಿದೆ. ಅಲಿ ಬಾಬಾ ದಾಸ್ತಾನ್ ಎ ಕಾಬೂಲ್ ಎನ್ನುವ ಹಿಂದಿ ಧಾರವಾಹಿಯಲ್ಲಿ ನಟಿ ತುನಿಷಾ ಅಭಿನಯಿಸುತ್ತಿದ್ದರು.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ವಸಾಯಿಯಲ್ಲಿ ಇದ್ದ ಧಾರವಾಹಿ ಸೆಟ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದ್ದು, ನಟಿ ತುನಿಷಾ ಬಾತ್ ರೂಮ್ ಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದವರು, ಎಷ್ಟು ಹೊತ್ತಾದರು ಬರದ ಕಾರಣ, ಸೆಟ್ ನಲ್ಲಿದ್ದವರು ಹೋಗಿ ನೋಡಿ, ಬಾಗಿಲು ಮುರಿದಾಗ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದ್ದಕ್ಕಿದ್ದ ಹಾಗೆ ನಡೆದ ಈ ಘಟನೆ ಹಿಂದಿ ಕಿರುತೆರೆ ಲೋಕಕ್ಕೆ ದೊಡ್ಡ ಶಾಕ್ ನೀಡಿದೆ. ಮುಂಬೈ ಜೇಜೆ ಹಾಸ್ಪಿಟಲ್ ನಲ್ಲಿ ತುನಿಷಾ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ರಿಪೋರ್ಟ್ ನಲ್ಲಿ ತಿಳಿದುಬಂದಿರುವ ವಿಚಾರ ಏನೆಂದರೆ.. ಇದನ್ನು ಓದಿ..Kannada News: ತೆಲುಗಿನಲ್ಲಿ ಕನ್ನಡತಿ ಕೃತಿ-ಶ್ರೀ ಲೀಲಾ ಗೆ ಫುಲ್ ಡಿಮ್ಯಾಂಡ್: ಆ ಪಾರ್ಟ್ ಗಾಗಿ, ಯುವ ಹೀರೋ ಗಳು ನಟಿಯರ ಹಿಂದೆ ಬೀಳುತ್ತಿದ್ದಾರೆ. .

ನೇಣು ಬಿಗಿದುಕೊಂಡ ನಂತರ ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಾರೆ ಎಂದು ಬಂದಿದೆ. ದೇಹದ ಮೇಲೆ ಯಾವುದೇ ಹಿಂಸೆಯ ಮಾರ್ಕ್ ಇಲ್ಲ ಎಂದು ಹೇಳಲಾಗಿದೆ. ಈ ವಿಚಾರದ ನಡುವೆ ತುನಿಷಾ ಅವರಿಗೆ ಸಹನಟ ಶೀನಾಜ್ ಖಾನ್ ಅವರೊಡನೆ ಪ್ರೀತಿ ಇತ್ತು, ಆತ ಪ್ರಾಮಾಣಿಕವಾಗಿ ಇರಲಿಲ್ಲ, ಅದೇ ಕಾರಣದಿಂದಲೇ ತುನಿಷಾ ಈ ರೀತಿ ಮಾಡಿಕೊಂಡಿದ್ದಾರೆ , ಆತನಿಂದ ತುನಿಷಾ ಡಿಪ್ರೆಷನ್ ಗೆ ಒಳಗಾಗಿದ್ದರು ಎಂದು ತುನಿಷಾ ಅವರ ಮನೆಯವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಶೀನಾಜ್ ಖಾನ್ ಅವರನ್ನು ಬಂಧಿಸಿದ್ದು, 4 ದಿನಗಳಿಂದ ಆತ ಪೊಲೀಸ್ ಕಸ್ಟಡಿಯಲ್ಲೇ ಇದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಸಿನೆಮಾಗೆ ಬರುವ ಮುನ್ನ ಚೆಂದುಳ್ಳಿ ಚೆಲುವೆಗೆ ಆಗಿತ್ತು ಕಾಸ್ಟಿಂಗ್ ಕೌಚ್: ಪ್ಯಾಂಟ್ ಬಿಚ್ಚು ಎಂದಿದ್ದ ನಿರ್ಮಾಪಕ: ತೆಲುಗು ಚಿತ್ರರಂಗದ ಮತ್ತೊಂದು ಕರಾಳ ಮುಖ.

Get real time updates directly on you device, subscribe now.