Kannada news: ಪುನೀತ್ ರವರ ದಾಖಲೆಯನ್ನು ಮೀರಿಸಿಬಿಟ್ಟ ಸಿದ್ದೇಶ್ವರ ಸ್ವಾಮೀಜಿ: ಅಂಕಿ ಅಂಶಗಳಲ್ಲಿ ಸಿದ್ದವಾದ ವಿಶೇಷ ದಾಖಲೆ ಏನು ಗೊತ್ತೇ??
Kannada News: ನಡೆದಾಡುವ ಸಂತ, ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಶ್ರೀಗಳು ಕರ್ನಾಟಕದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಇವರಿಗೆ 84 ವರ್ಷ ವಯಸ್ಸಾಗಿತ್ತು, ವಯೋಸಹಜ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದ ಶ್ರೀಗಳಿಗೆ ಆಶ್ರಮದಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲ ನೀಡದೆ ಶ್ರೀಗಳು ಕೊನೆಯುಸಿರೆಳೆದರು. ಶ್ರೀಗಳ ಅಂತ್ಯ ಕ್ರಿಯೆ ಸರ್ಕಾರ ಗೌರವಗಳ ಜೊತೆಗೆ ನೆರವೇರಿತು.
ಶ್ರೀಗಳು 2014ರಲ್ಲಿ ತಾವು ಮರಣ ಹೊಂದಿದ ನಂತರ ಎಲ್ಲವೂ ಜೆಗೆ ನಡೆಯಬೇಕು ಎಂದು ವಿಲ್ ಮಾಡಿಸಿದ್ದರು. ತಮ್ಮನ್ನು ಮಣ್ಣು ಮಾಡುವ ಹಾಗಿಲ್ಲ, ಅಗ್ನಿಸ್ಪರ್ಷ ಮಾಡಬೇಕು, ತಮಗಾಗಿ ಯವಿದೆ ಸ್ಮಾರಕಗಳನ್ನು ಕಟ್ಟುವ ಹಾಗಿಲ್ಲ ಎಂದು ಶ್ರೀಗಳು ವಿಲ್ ನಲ್ಲಿ ಬರೆಸಿದ್ದ ಹಾಗೆಯೇ, ಎಲ್ಲವೂ ನಡೆದಿದೆ. ಜ್ಞಾನಯೋಗಾಶ್ರಮದಲ್ಲೇ ಶ್ರೀಗಳ ಅಂತ ವಿಧಿ ವಿಧಾನಗಳು ನಡೆದಿದೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕೊಡಲಾಗಿತ್ತು, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಂಜೆ 5:30ರ ನಂತರ ಶ್ರೀಗಳಿಗೆ ಸರ್ಕಾರದ ಗೌರವ ಸಲ್ಲಿಸಿದ ನಂತರ, ಎಲ್ಲಾ ವಿಧಿ ವಿಧಾನಗಳನ್ನು ಮಾಡಲಾಯಿತು. ಇದನ್ನು ಓದಿ..Kannada News: ಈ ಬಾರಿ ಗಾಂಧಿ ಹಾಗೂ ನೆಹರು ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಚೇತನ್ ಅಹಿಂಸೆ. ಹೇಳಿದ್ದೇನು ಗೊತ್ತೇ??

ಶ್ರೀಗಳ ಅಂತಿಮ ದರ್ಶನ ಪಡೆಯಲು ಸುಮಾರು 22 ಲಕ್ಷ ಜನ ಬಂದಿದ್ದರು ಎಂದು ಮಾಹಿತಿ ಸಿಕ್ಕಿದೆ. ಎಲ್ಲ ಮೆಚ್ಚಿನ ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಸುಮಾರು 20 ಲಕ್ಷ ಬಂದಿದ್ದರು ಎನ್ನುವ ವಿಚಾರ ನಮಗೆ ಗೊತ್ತಿತ್ತು, ಅದುವರೆಗೂ ಅಷ್ಟು ಜನರು ಬಂದು ಯಾರ ಅಂತಿಮ ದರ್ಶನವನ್ನು ಪಡೆದಿರಲಿಲ್ಲ. ಇದೀಗ ಸಿದ್ದೇಶ್ವರ ಶ್ರೀಗಳು ಪುನೀತ್ ರಾಜ್ ಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಪ್ಪು ಅವರಿಗಿಂತ ಹೆಚ್ಚು ಜನರು ಬಂದು, ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಪಾತ್ರ ಮುಗಿಸಿ ಕಣ್ಮರೆಯಾಗಿದ್ದ ಕನ್ನಡತಿ ರತ್ನಮಾಲಾ ರವರು ಕಾಣಿಸಿಕೊಂಡದ್ದು ಎಲ್ಲಿ ಗೊತ್ತೇ??