Kannada News: ಅಸಲಿಗೆ ನರೇಶ್ ರವರು ಪವಿತ್ರ ರವರನ್ನು ಮದುವೆಯಾಗಿ ಸಂಸಾರ ಮಾಡಲು ನಿರ್ಧಾರ ಮಾಡಿದ್ದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಯಾರು ಗೊತ್ತೇ??
Kannada News: ಸೋಷಿಯಲ್ ಮೀಡಿಯಾದಲ್ಲಿ ತೆಲುಗಿನ ಖ್ಯಾತ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಬಗೆಗಿನ ಸುದ್ದಿಗಳು ಸದ್ದು ಮಾಡುತ್ತಿದ್ದವು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಭಾರಿ ಸದ್ದು ಮಾಡಿತ್ತು, ಇವರಿಬ್ಬರ ವಿಚಾರ ಭಾರಿ ಹೈಡ್ರಾಮಾ ಕ್ರಿಯೇಟ್ ಮಾಡಿದರು ಸಹ, ಕೆಲವು ದಿನಗಳಿಂದ ಇವರ ವಿಚಾರ ಸ್ವಲ್ಪ ಸೈಲೆಂಟ್ ಆಗಿತ್ತು, ಆದರೆ ಇದೀಗ ದಿಢೀರ್ ಎಂದು ಈ ಜೋಡಿ ತಾವಿಬ್ಬರು ಮದುವೆ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. 63 ವರ್ಷದ ನರೇಶ್ ಅವರ ಜೊತೆಗೆ 42 ವರ್ಷದ ಪವಿತ್ರಾ ಲೋಕೇಶ್ ಅವರು ಡೇಟ್ ಮಾಡುತ್ತಿದ್ದ ವಿಷಯ, ಎಲ್ಲರಿಗು ಶಾಕ್ ನೀಡಿತ್ತು.
ನರೇಶ್ ಹಾಗು ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಜೊತೆಯಾಗಿದ್ದಾಗ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದರು, ಆ ಘಟನೆ ಬಳಿಕ ಇವರಿಬ್ಬರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸೂಪರ್ ಸ್ಟಾರ್ ಕೃಷ್ಣ ಅವರು ಕೂಡ ಇವರಿಬ್ಬರ ಸಂಬಂಧದ ಬಗ್ಗೆ ಬಹಳ ಗಂಭೀರವಾಗಿ ಪರಿಗಣಿಸಿದ್ದರು, ಕುಟುಂಬದ ಮರಿಯಾದೆಗೆ ಧಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಅದರೆ ನರೇಶ್ ಅವರು ಪವಿತ್ರಾ ಲೋಕೇಶ್ ಅವರನ್ನು ಬಿಡಲಿಲ್ಲ. ಕೃಷ್ಣ ಅವರು ನಿಧನರಾದಾಗ, ಇವರಿಬ್ಬರು ಕೈ ಕೈ ಹಿಡಿದು ಓಡಾಡಿದ್ದು ಭಾರಿ ಟ್ರೋಲ್ ಗೆ ಒಳಗಾಗಿತ್ತು. ಇದನ್ನು ಓದಿ..Biggboss Kannada: ಇಷ್ಟು ದಿನ ತಾಳ್ಮೆ ಇಂದ ಇದ್ದು, ರನ್ನರ್ ಅಪ್ ಆದ ನಿಜವಾದ ವಿನ್ನರ್ ರಾಕೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ? ಇದು ನಿಜಕ್ಕೂ ಮೋಸ ಎಂದ ಫ್ಯಾನ್ಸ್.

ಇನ್ನು ನಟ ಮಹೇಶ್ ಬಾಬು ಅವರು ಕೂಡ ಈ ವಿಷಯದಲ್ಲಿ ಬಹಳ ಸೀರಿಯಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅವರು ಈ ವಿಚಾರದ ಬಗ್ಗೆ ಮಾತನಾಡಿ, ಇಬ್ಬರು ಹೀಗೆ ಇದ್ದರೆ, ಕುಟುಂಬದ ಬಗ್ಗೆ ಸಮಾಜ ಕೆಟ್ಟದಾಗಿ ಮಾತನಾಡುತ್ತದೆ, ಈ ರೀತಿ ಇರೋದಕ್ಕಿಂತ ಇಬ್ಬರು ಮದುವೆಯಾಗಿ ಜೊತೆಯಲ್ಲಿರಿ ಎಂದು ಮಹೇಶ್ ಬಾಬು ಅವರು ಹೇಳಿದ್ದಾರಂತೆ. ಹಾಗಾಗಿ ನರೇಶ್ ಅವರು ಕೂಡ ಈ ವಿಚಾರದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಇದೀಗ ಹೊಸ ವರ್ಷದ ಸಮಯಕ್ಕೆ ಈ ಜೋಡಿ, ಮದುವೆ ವಿಚಾರವನ್ನು ಮಾಧ್ಯಮದ ಎದುರು ಘೋಷಣೆ ಮಾಡಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಗೆ ಬಿಗ್ ಶಾಕ್; ಕ್ರಾಂತಿ ಸಿನಿಮಾ ಬಿಡುಗಡೆನೇ ಆಗಲ್ವೆ?? ದರ್ಶನ್ ಕ್ಷಮೆ ಕೇಳದಿದ್ರೆ ಏನಾಗುತ್ತದೆ?? ಫಿಲ್ಮ್ ಚೇಂಬರ್ ಖಡಕ್ ಆಗಿ ಹೇಳಿದ್ದೇನು?