Kannada News: ದರ್ಶನ್ ಗೆ ಬಿಗ್ ಶಾಕ್; ಕ್ರಾಂತಿ ಸಿನಿಮಾ ಬಿಡುಗಡೆನೇ ಆಗಲ್ವೆ?? ದರ್ಶನ್ ಕ್ಷಮೆ ಕೇಳದಿದ್ರೆ ಏನಾಗುತ್ತದೆ?? ಫಿಲ್ಮ್ ಚೇಂಬರ್ ಖಡಕ್ ಆಗಿ ಹೇಳಿದ್ದೇನು?
Kannada News: ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಯದಲ್ಲಿ ಹೊಸಪೇಟೆಯಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದರು. ಆ ಘಟನೆ ಭಾರಿ ದೊಡ್ಡದಾಗಿ ಸುದ್ದಿಯಾಗಿತ್ತು.. ಈ ರೀತಿ ಆಗಿದ್ದಕ್ಕೆ, ಚಂದನವನದ ಎಲ್ಲಾ ಕಲಾವಿದರು ಕೂಡ ದರ್ಶನ್ ಅವರ ಪರವಾಗಿ ನಿಂತಿದ್ದರು. ದರ್ಶನ್ ಅವರ ಅಭಿಮಾನಿಗಳು ತಮ್ಮ ನಟನಿಗೆ ಸಪೋರ್ಟ್ ಮಾಡುವ ಭರದಲ್ಲಿ, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಮೇಲೆ ಬಯ್ಯಲು ಶುರು ಮಾಡಿದರು. ಅಷ್ಟೇ ಅಲ್ಲದೆ, ದೊಡ್ಮನೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದರು.
ಅದರ ಬಗ್ಗೆ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಕೋಪ ಬಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರು ಪ್ರತಿಭಟನೆ ಮಾಡಿ, ದರ್ಶನ್ ಅವರ ಅಭಿಮಾನಿಗಳು ಡಾ.ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ, ಅದರಿಂದ ಅವರ ಮರಿಯಾದೆಗೆ ಕುತ್ತು ತರುವ ಕೆಲಸ ಮಾಡಿದ್ದಾರೆ ಎಂದು ದರ್ಶನ್ ಅವರ ಅಭಿಮಾಮಿಗಳ ವಿರುದ್ಧ ದೂರು ನೀಡಿದ್ದರು. ಈ ವಿಚಾರವಾಗಿ ಈಗ ವಾಣಿಜ್ಯ ಮಂಡಳಿಯ ಭಾಮಾ ಹರೀಶ್ ಅವರು ಮಾತನಾಡಿದ್ದಾರೆ, “ವಾಣಿಜ್ಯ ಮಂಡಳಿ ಎದುರು ಅಪ್ಪು ಅವರ ಅಭಿಮಾನಿಗಳು, ಕನ್ನಡಪರ ಸಂಘಟನೆಯವರು ಬಂದು ಘೋಷಣೆ ಕೂಗಿ ಕಿಡಿ ಕಾರಿದ್ದರು. ಇದನ್ನು ಓದಿ.. Biggboss Kannada: ಇಷ್ಟು ದಿನ ತಾಳ್ಮೆ ಇಂದ ಇದ್ದು, ರನ್ನರ್ ಅಪ್ ಆದ ನಿಜವಾದ ವಿನ್ನರ್ ರಾಕೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ? ಇದು ನಿಜಕ್ಕೂ ಮೋಸ ಎಂದ ಫ್ಯಾನ್ಸ್.
ಅಣ್ಣಾವ್ರು ಮತ್ತು ಅಪ್ಪು ಅವರ ವಿರುದ್ಧ ಕೆಟ್ಟ ಪದಗಳನ್ನು ಬಳಸಿ, ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದ್ದರು, ದರ್ಶನ್ ಅವರನ್ನು ಕರೆಸಿ ಅಭಿಮಾನಿಗಳಿಗೆ ಸಂದೇಶ ಕೊಡಿಸಬೇಕು ಎಂದು ಆಕ್ರೋಶ ಹೊರ ಹಾಕಿ, ಪಟ್ಟು ಹಿಡಿದಿದ್ದರು. ನಾಲ್ಕು ಜನ ಅವರ ಜೊತೆಯಲ್ಲೇ ಇರೋರು ಇದ್ದಾರೆ ಎಂದರು, ಈಗ ಏನು ಮಾಡಬೇಕು ಎಂದರೆ, ದರ್ಶನ್ ಅವರನ್ನು ಇಲ್ಲಿಗೆ ಕರೆಸಿ, ಅಭಿಮಾನಿಗಳಿಗೆ ಅವರ ಮೂಲಕ ಸಂದೇಶ ಕೊಡಿಸಬೇಕು ಅಷ್ಟೇ ಎಂದರು. ಅಪ್ಪು ಅವರ ಅಭಿಮಾನಿಗಳ ಬೇಡಿಕೆಯನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿದೆ, ದರ್ಶನ್ ಅವರನ್ನು ಸಂಪರ್ಕ ಮಾಡಿ ಮಾತನಾಡುತ್ತೇವೆ..” ಎಂದು ಭಾಮ ಹರೀಶ್ ಅವರು ಮಾತನಾಡಿದ್ದಾರೆ. ಇದನ್ನು ಓದಿ..Kannada News: ಸಮಂತಾ ಗೆ ಭರ್ಜರಿ ಶಾಕ್ ಕೊಟ್ಟು: ರಶ್ಮಿಕಾ ರವರನ್ನು ಅಖಾಡಕ್ಕೆ ಇಳಿಸಿದ ನಾಗ ಚೈತನ್ಯ: ರಶ್ಮಿಕಾ – ನಾಗ ಸೇರಿ ಮಾಡುತ್ತಿರುವುದೇನು ಗೊತ್ತೇ??