Kannada News: ಅಸಲಿಗೆ ಬಂಧನ ಸಿನೆಮಾಗೆ ವಿಷ್ಣುವರ್ಧನ್ ಮೊದಲನೇ ಆಯ್ಕೆಯೇ ಅಲ್ಲ, ಮತ್ಯಾರು ಆಗಿದ್ದರು ಗೊತ್ತೇ??
Kannada News: 1984ರಲ್ಲಿ ತೆರೆಕಂಡ ಬಂಧನ ಸಿನಿಮಾ ಯಾರಿಗೆ ತಾನೇ ಇಷ್ಟವಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅವರು ಮತ್ತು ಬಹುಭಾಷಾ ನಟಿ ಸುಹಾಸಿನಿ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ಇಂದಿಗು ಕನ್ನಡದ ಕ್ಲಾಸಿಕ್ ಆಗಿ ಉಳಿದಿದೆ. ಬಂಧನ ಸಿನಿಮಾ ನೋಡಿದವರಿಗೆ ಈಗಲೂ ಆ ಸಿನಿಮಾ ಫ್ರೆಶ್ ಎಂದು ಅನ್ನಿಸುವುದು ಪಕ್ಕಾ. ಈ ಸಿನಿಮಾದ ಹಾಡುಗಳು ಇಂದಿಗು ಎಲ್ಲರ ಫೇವರೆಟ್, ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಅದ್ಭುತ ಎಂದೇ ಹೇಳಬಹುದು. ಆದರೆ ಈ ಸಿನಿಮಾಗೆ ವಿಷ್ಣುವರ್ಧನ್ ಅವರು ಮೊದಲ ಆಯ್ಕೆ ಆಗಿರಲಿಲ್ಲ. ಹಾಗಿದ್ದರೆ ಬಂಧನ ಸಿನಿಮಾ ಮಾಡಬೇಕಿದ್ದದ್ದು ಯಾರು ಗೊತ್ತಾ?
ಹೌದು.. ಇದು ನಿಜವಾದ ವಿಚಾರ.. ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಬಂಧನ ಸಿನಿಮಾಗೆ ಅವರು ಮೊದಲು ಆಯ್ಕೆ ಮಾಡಿದ್ದು ಬೇರೆ ಒಬ್ಬ ನಟನನ್ನು. ರಾಜೇಂದ್ರ ಸಿಂಗ್ ಬಾಬು ಅವರು ಬಂಧನ ಸಿನಿಮಾಗೆ ಕಥೆ ಬರೆದ ನಂತರ ಅವರ ಮನಸ್ಸಲ್ಲಿ ಮೊದಲು ಇದ್ದಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರು, ಅಂಬರೀಶ್ ಅವರಿಗೆ ಕಥೆ ಹೇಳಿ, ನೀನೇ ಈ ಸಿನಿಮಾ ನಾಯಕ ಎಂದು ಹೇಳಿದರಂತೆ. ಅಂಬರೀಶ್ ಅವರಿಗೆ ಕಥೆ ಏನೋ ತುಂಬಾ ಇಷ್ಟವಾಯಿತು. ಆದರೆ ತಾವು ಆ ಪಾತ್ರಕ್ಕೆ ಸೂಟ್ ಆಗುವುದಿಲ್ಲ ಎಂದು ಅನ್ನಿಸಿತಂತೆ. ಇದನ್ನು ಓದಿ..Kannada News: 20 ವರ್ಷದ ನಟಿಯ ಮರಣೋತರ ಪರೀಕ್ಷೆಯಲ್ಲಿ ಬಯಲಾಯ್ತು ಕಹಿ ಸತ್ಯ: ಕಾರಣ ಏನು ಅಂತೇ ಗೊತ್ತೇ??
ಆಗ ಅಂಬರೀಶ್ ಅವರೇ ವಿಷ್ಣುವರ್ಧನ್ ಅವರನ್ನ ಹಾಕೊಂಡು ಈ ಸಿನಿಮಾ ಮಾಡಿ ಅಂತ ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಲಹೆ ಕೊಟ್ಟಿದ್ದರಂತೆ. ಅಂಬರೀಶ್ ಅವರ ಸಲಹೆ ಇಂದ ರಾಜೇಂದ್ರ ಸಿಂಫ್ ಬಾಬು ಅವರು ವಿಷ್ಣುವರ್ಧನ್ ಅವರಿಗೆ ಕಥೆ ಹೇಳಿ, ವಿಷ್ಣುವರ್ಧನ್ ಅವರು ಸಿನಿಮಾ ಒಪ್ಪಿಕೊಂಡು ಮಾಡಿದರು, ಆ ಪಾತ್ರ ವಿಷ್ಣುವರ್ಧನ್ ಅವರಿಗಾಗಿಯೇ ಬರೆದಿದೆ ಎನ್ನುವ ರೀತಿಯಲ್ಲಿ ಅದ್ಭುತವಾಗಿತ್ತು ಅವರ ಅಭಿನಯ. ಪ್ರೊಪೋಸ್ ಮಾಡುವ ದೃಶ್ಯ, ಕ್ಲೈಮ್ಯಾಕ್ಸ್, ಈ ಎಲ್ಲಾ ದೃಶ್ಯಗಳಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಅಮೋಘ. ಆ ಕಾರಣದಿಂದಲೇ ಬಂಧನ ಸಿನಿಮಾ ಇಂದಿಗು ಕ್ಲಾಸಿಕ್ ಆಗಿ ಉಳಿದಿದೆ. ಇದನ್ನು ಓದಿ.. Kannada News: ಸಿನೆಮಾಗೆ ಬರುವ ಮುನ್ನ ಚೆಂದುಳ್ಳಿ ಚೆಲುವೆಗೆ ಆಗಿತ್ತು ಕಾಸ್ಟಿಂಗ್ ಕೌಚ್: ಪ್ಯಾಂಟ್ ಬಿಚ್ಚು ಎಂದಿದ್ದ ನಿರ್ಮಾಪಕ: ತೆಲುಗು ಚಿತ್ರರಂಗದ ಮತ್ತೊಂದು ಕರಾಳ ಮುಖ.