ವೈರಲ್ ವಿಡಿಯೋ : ಕೇರಳದ ವಧು ಡಿಜೆ ಹಾಡಿಗೆ ಮಾಸ್ ಸ್ಟೆಪ್ ಹಾಕುತ್ತಾ ಮದುವೆ ಮಂಟಪಕ್ಕೆ ಎಂಟ್ರಿ… ವಿಡಿಯೋ ವೈರಲ್
ಈಗಿನ ಕಾಲದಲ್ಲಿ ಮದುವೆ ಆಗುತ್ತಿರುವ ವಧು ಮಾಡುವ ಡ್ಯಾನ್ಸ್ ಟ್ರೆಂಡ್ ಆಗಿವೆ. ಇದನ್ನು ಈಗ ಬಹುತೇಕ ಎಲ್ಲಾ ಮದುವೆಯಲ್ಲಿ ಕಾಣಬಹುದು. ಹಿಂದಿನ ದಿನಗಳಲ್ಲಿ ವಧು ನಾಚಿಕೆಯಿಂದ ಮದುವೆ ಮಂಟಪಕ್ಕೆ ಪ್ರವೇಶಿಸುತ್ತಿದ್ದಳು, ಆದರೆ ಈಗಿನ ಕಾಲದಲ್ಲಿ ಡಿಜೆ ಹಾಡುಗಳಿಗೆ ಕುಣಿಯುತ್ತಾ ಮದುವೆ ಮಂಟಪ ಪ್ರವೇಶಿಸುತ್ತಾಳೆ. ಹೀಗೆ ಮದುವೆ ಮಂಟಪಕ್ಕೆ ಎಂಟ್ರಿ ಕೊಡುವಾಗ, ಹುಡುಗಿ ಡ್ಯಾನ್ಸ್ ಮಾಡುತ್ತಿರುವ, ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾ ಬಗ್ಗೆ ನಮಗೆಲ್ಲ ತಿಳಿದಿದೆ, ಇಲ್ಲಿ ಏನಾದರೂ ಸ್ವಲ್ಪ ವಿಭಿನ್ನವಾಗಿ ಕಂಡುಬಂದರೆ, ಅಂತಹ ವಿಡಿಯೋಗಳು ವೈರಲ್ ಆಗುತ್ತದೆ. ಅದೇ ರೀತಿ ಈ ವಧು ಹಾಕಿದ ಮಾಸ್ ಸ್ಟೆಪ್ಸ್ ವಿಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಅರೇಬಿಕ್ ಹಾಡೊಂದು ಬಿಡುಗಡೆಯಾಗಿದ್ದು, ಸುಮಾರು 20 ಕೋಟಿ ವೀಕ್ಷಣೆ ಪಡೆದಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗಲೂ ಅಷ್ಟೇ ಟ್ರೆಂಡ್ ಆಗಿದೆ. ಅಲ್ಲದೇ ಈ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಯೂಟ್ಯೂಬರ್ ಮಾತ್ರವಲ್ಲ, ಸಿನಿಮಾ ತಾರೆಯರೂ ಕುಣಿದು ಕುಪ್ಪಳಿಸಿದ್ದಾರೆ. ಟಾಪ್ ಹೀರೋಯಿನ್ ಗಳಾದ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಪೂರ್ಣಾ ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿ ಈ ಹಾಡನ್ನು ಹೆಚ್ಚು ವೈರಲ್ ಮಾಡಿದ್ದಾರೆ.
ಈ ಹೀರೋಯಿನ್ ಗಳನ್ನು ಬಿಟ್ಟು, ಅನೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಇದೇ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಭಾರೀ ಸದ್ದು ಮಾಡುತ್ತಿದೆ. ಆದರೆ ಕೇರಳದ ಯುವತಿಯೊಬ್ಬಳು ತನ್ನ ಮದುವೆಯ ಸಂದರ್ಭದಲ್ಲಿ ವರನನ್ನು ತನ್ನ ಮುಂದೆ ಕೂರಿಸಿ ತಾನು ಡ್ಯಾನ್ಸ್ ಮಾಡಿದ್ದಾಳೆ. ಕೇರಳ ಸ್ಟೈಲ್ ನಲ್ಲಿ ಸೀರೆ ಉಟ್ಟು, ಆಭರಣಗಳನ್ನು ಧರಿಸಿ ಮಾಸ್ ಸ್ಟೆಪ್ಸ್ ಹಾಕಿರುವ ಈ ವಧುವನ್ನು ನೋಡಿ ಎಲ್ಲರು ಆಶ್ಚರ್ಯ ಪಡುತ್ತಿದ್ದಾರೆ. ಈ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಸುಮಾರು ಒಂದು ಲಕ್ಷ ವೀಕ್ಷಣೆ ಪಡೆದಿದೆ.