ತೆಲುಗಿನಲ್ಲಿ ಮತ್ತೊಂದು ಟ್ವಿಸ್ಟ್: ದಿನಕ್ಕೊಂದು ಕರ್ಮಕಾಂಡ: ಹಿರಿಯ ನಟಿ ಹಾಗೂ ನಟ ಏನು ಮಾಡಿದ್ದಾರೆ ಗೊತ್ತೇ??

51

Get real time updates directly on you device, subscribe now.

ಸಿನಿಮಾ ಇಂಡಸ್ಟ್ರಿ ಒಂದು ಸುಂದರವಾದ ಕಲರ್ ಫುಲ್ ಪ್ರಪಂಚ, ಹೊರಗಿಂದ ನೋಡಿದಾಗ ಎಲ್ಲವು ಸುಂದರವಾಗಿ ಇರುತ್ತದೆ. ಆದರೆ ಅದರ ಒಳಗೆ ಹಲವು ಸಮಸ್ಯೆಗಳಿವೆ, ಸಂಕಟಗಳು ಇದೆ ಎಂದು ಗೊತ್ತಾಗುತ್ತದೆ. ಕಲಾವಿದರು ಯಾವುದೇ ಗಾಸಿಪ್ ಗಳು ಬೇಡ ಎಂದುಕೊಂಡರು ಕೂಡ, ಅವರ ಸುತ್ತ ಕಥೆಗಳನ್ನು ಸೃಷ್ಟಿಸಿ ಗಾಸಿಪ್ ಗಳು ಕೇಳಿ ಬರುತ್ತಲೇ ಇರುತ್ತದೆ. ತೆಲುಗು ಇಂಡಸ್ಟ್ರಿಯಲ್ಲಿ ಒಬ್ಬ ಹಿರಿಯ ಕ್ಯಾರೆಕ್ಟರ್ ಆರ್ಟಿಸ್ಟ್ ಮತ್ತು ಹಿರಿಯ ಕಲಾವಿದನ ಆಪ್ತವಾಗಿರುವ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಈ ಪ್ರಶ್ನೆ ಬರಲು ಕಾರಣ, ಆಲಿ ತೋ ಸರದಾಗ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಹಲವು ಅತಿಥಿಗಳು ಬರುತ್ತಾರೆ, ಕೆಲವೊಮ್ಮೆ ಕಾಂಬಿನೇಷನ್ ನಲ್ಲಿ ಕಲಾವಿದರನ್ನು ಕರೆಸುತ್ತಾರೆ. ಕಾರ್ಯಕ್ರಮದಲ್ಲಿ ಆಲಿ ಅವರು ಬರುವ ಅತಿಥಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ.

ಇತ್ತೀಚೆಗೆ, ಖ್ಯಾತ ಹಿರಿಯ ನಟಿ ತುಳಸಿ ಅವರು ಈ ಶೋಗೆ ಬಂದಿದ್ದರು. ಇವರು ಈಗ ತಾಯಿ ಪಾತ್ರಗಳಲ್ಲಿ ನಟಿಸುತ್ತಾರೆ, ಇವರು ನಟ ಪ್ರಭಾಸ್ ಅವರ ಸಹಾಯಕರಾಗಿ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಕ್ಯಾರೆಕ್ಟರ್ ಆರ್ಟಿಸ್ಟ್ ಪ್ರಭಾಸ್ ಶ್ರೀನು ಅವರ ಜೊತೆಗೆ ಈ ಶೋನಲ್ಲಿ ಕಾಣಿಸಿಕೊಂಡರು. ಇವರಿಬ್ಬರು ಶೋ ಗೆ ಬಂದಿದ್ದು ಒಂದು ರೀತಿ ಆಕರ್ಷಣೆಯಾಗಿದ್ದು. ತುಳಸಿ ಅವರ ವಯಸ್ಸು 55, ಪ್ರಭಾಸ್ ಶ್ರೀನು ಅವರ ವಯಸ್ಸು 43. ಡಾರ್ಲಿಂಗ್ ಸಿನಿಮಾ ಮಾಡಿದಾಗ, ಇವರು ಸಿಕ್ಕಿದ್ರು ಎಂದು ಶ್ರೀನು ಅವರು ಹೇಳಿದ ಮಾತು ಹಾಟ್ ಟಾಪಿಕ್ ಆಗಿದೆ. ಈ ಮಾತಿನಿಂದ ಇವರಿಬ್ಬರು ಸ್ನೇಹಿತರೇ, ಇನ್ನೇನಾದಾದರು ಸಂಬಂಧ ಇದೆಯೇ, ಎನ್ನುವ ಅನುಮಾನ ಹಲವರಿಗೆ ಕಾಡುತ್ತಿದೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ಅಷ್ಟೇ ಅಲ್ಲದೆ, ಆಲಿ ಅವರು ಇಬ್ಬರನ್ನು ಒಟ್ಟಿಗೆ ಏಕೆ ಸಂದರ್ಶನಕ್ಕೆ ಕರೆದರು ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಅದೇನೇ ಇರಲಿ, ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಿಲ್ಳ. ನಟಿ ತುಳಸಿ ಮೂರು ತಿಂಗಳ ಮಗುವಾಗಿದ್ದಾಗ ಚಿತ್ರರಂಗ ಪ್ರವೇಶಿಸಿದರು.

ಮೂರು ತಿಂಗಳ ಮಗುವಾಗಿದ್ದಾಗ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೂರು ವರ್ಷದಲ್ಲಿ ಡೈಲಾಗ್ ಹೇಳಿದ್ದೆ, 56ನೇ ವಯಸ್ಸಿನಲ್ಲಿ ನೂರು ವರ್ಷಗಳಷ್ಟು ಹಳೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ ಎಂದು ತುಳಸಿ ಅವರು ಹೇಳಿದ್ದಾರೆ. ಚಿಕ್ಕವಳಿದ್ದಾಗ ಆಲಿ ಜೊತೆ ನಟಿಸಿದ್ದೆ ಎಂದಿರುವ ತುಳಸಿ ಅವರು, ಸಿನಿಮಾ ಸೆಟ್‌ ಒಂದರಲ್ಲಿ ಆಲಿ ಅವರು ಮಾಡಿದ ತಮಾಷೆಯ ಬಗ್ಗೆ ಹೇಳಿಕೊಂಡಿದ್ದಾರೆ. “ನಾಲುಗು ಸ್ಥಂಭಲಾಟ ಸಿನಿಮಾ ಸೆಟ್‌ ನಲ್ಲಿ ಆಲಿ ನನಗೆ ಲೈನ್ ಹೊಡೀತಿದ್ರು.. ಆಗ ಅವರು ತುಂಬಾ ಚಿಕ್ಕವರು.. ಆಗ ಬಹಳ ತರ್ಲೆ. ನಾನು ನಿಕ್ಕರ್ ಧರಿಸಿದ್ದೆ ಆದರೆ, ಆದರೆ ಬಟನ್ ಅಪ್ ಆಗಿರಲಿಲ್ಲ. ಆಗ ಅವರು ನೋಡಿ, ಹೇಯ್.. ಬಟನ್ ಹಾಕಿಲ್ಲ ಎಂದು ಹೇಳಿ ನಕ್ಕರು.. ತಕ್ಷಣ ನಾನು ಜೋರಾಗಿ ಅತ್ತಿದ್ದೆ..” ಎಂದಿದ್ದಾರೆ. ಶೋನ ಈ ಪ್ರೋಮೋ ಈಗ ವೈರಲ್ ಆಗಿದೆ.

Get real time updates directly on you device, subscribe now.