ಗೃಹಿಣಿಯರಿಗಿಂತ ಹಣ ಉಳಿಸೋರು ಯಾರು ಇಲ್ಲ, ಆದರೆ ಗೃಹಿಣಿಯರು ಕೂಡ ಹಣ ಮತ್ತಷ್ಟು ಹಣ ಉಳಿಸಲು ಏನು ಮಾಡಬೇಕು ಗೊತ್ತೇ??

14

Get real time updates directly on you device, subscribe now.

ಈಗಿನ ಕಾಲದಲ್ಲಿ ಜೀವನ ನಡೆಸುವುದು ಬಹಳ ಕಷ್ಟ, ಎಲ್ಲದರ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಹೀಗಿದ್ದಾಗ ಹಣ ಉಳಿಸುವುದು ಬಹಳ ಕಷ್ಟ, ಆದರೂ ಮನೆಯಲ್ಲಿ ಗೃಹಿಣಿಯರು ಸಣ್ಣ ಪ್ರಮಾಣದಲ್ಲಿ ಹಣ ಉಳಿಸುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಮನೆಯಲ್ಲಿ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ. ಇಲ್ಲಿ ನೀವು ದೊಡ್ಡ ಮಟ್ಟದಲ್ಲಿ ಹಣ ಉಳಿಸಿ ಬ್ಯಾಂಕ್ ಖಾತೆಗೆ ಹಾಕಬೇಕು ಎಂದಲ್ಲ, ಮನೆಯ ಖರ್ಚಿನಲ್ಲೇ ಅಲ್ಪ ಸ್ವಲ್ಪ ಉಳಿಸಬಹುದು. ಉಳಿತಾಯ ಮಾಡಲು ಕೆಲವು ಟಿಪ್ಸ್ ಗಳನ್ನು ಇಂದು ನಿಮಗೆ ತಿಳಿಸುತ್ತೇವೆ..

*ಅಡುಗೆ ಮನೆ ಉಳಿತಾಯ :- ಮನೆಯಲ್ಲಿ ಅಡುಗೆ ಮಾಡುವಾಗ ಹೆಚ್ಚಾಗಿ ಅಡುಗೆ ಮಾಡಿ ಅದನ್ನು ಎಸೆಯುವುದಕ್ಕಿಂತ, ಅಳತೆಗೆ ಅಡುಗೆ ಮಾಡಿ ಉಳಿಸಿ. ಹಾಗೆಯೇ ಮನೆಗೆ ತರುವ ಕೆಲವು ಪದಾರ್ಥಗಳನ್ನು ನಾವು ಹೆಚ್ಚಾಗಿ ಬಳಸುವುದಿಲ್ಲ. ಅಂಥ ಪದಾರ್ಥಗಳು ಕೆಲವು ದಿನಗಳ ಬಳಿಕ ಹಾಳಾಗಿ ಹೋಗುತ್ತದೆ. ಹಾಗಾಗಿ ಅಂಥಹ ಪದಾರ್ಥಗಳನ್ನು ವ್ಯರ್ಥವಾಗಿ ತಂದು ಹಾಳು ಮಾಡುವುದಕ್ಕಿಂತ, ಬೇಕಿರುವ ಪದಾರ್ಥಗಳನ್ನು ಮಾತ್ರ ಮನೆಗೆ ತನ್ನಿ. ಇದರಿಂದ ಹಣ ಉಳಿಸಬಹುದು.
*ಶಾಪಿಂಗ್ ನಲ್ಲಿ ಉಳಿತಾಯ :- ಮನೆಗೆ ತರಕಾರಿ ಅಥವಾ ಇನ್ನಿತರ ವಸ್ತುಗಳನ್ನು ತರುವಾಗ, ಕಡಿಮೆ ಬೆಲೆಗೆ ಸಿಗುವ ಮಾರುಕಟ್ಟೆಗೆ ಹೋಗಿ ಖರೀದಿ ಮಾಡಿ. ಅಥವಾ ಸೂಪರ್ ಮಾರ್ಕೆಟ್ ನಲ್ಲಿ ಬೈ ಒನ್ ಗೆಟ್ ಒನ್ ಫ್ರೀ ಆಫರ್ ಇರುವಂಥಾ ಕಡೆ ಖರೀದಿ ಮಾಡಿದರೆ, ನಿಮಗೆ ಉಳಿತಾಯ ಆಗುತ್ತದೆ. ತರಕಾರಿಗಳನ್ನು ಬೇಕಾದಷ್ಟು ಮಾತ್ರ ಖರೀದಿ ಮಾಸಿ, ಹೆಚ್ಚು ತರಕಾರಿಗಳನ್ನು ಖರೀದಿ ಮಾಡಿ, ವ್ಯರ್ಥ ಮಾಡಬೇಡಿ. ಇದನ್ನು ಓದಿ.. Kannad News: ಪಾರ್ಲೆಜಿ ಬಿಸ್ಕೆಟ್ ಗಾಗಿ ನಟನೆ ಬಿಟ್ಟು ಹೋಗಿದ್ದ ಮೇಘ ಶೆಟ್ಟಿ: ಇನ್ಸ್ಟಾಗ್ರಾಮ್ ಮೂಲಕ ಹುಡುಕಿಕೊಂಡು ಬಂತು ಆಫರ್.

*ಸಣ್ಣ ಪುಟ್ಟ ಉಳಿತಾಯ :- ಮನೆಯಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಮ್ಮೆ ಖರ್ಚುಗಳು ಆಗಿಹೋಗುತ್ತದೆ. ಅನಗತ್ಯವಾಗಿ ಬಟ್ಟೆ ಖರೀದಿ ಮಾಡುವುದು, ಮನೆಯಲ್ಲಿ ಎಲ್ಲಾ ಕಡೆ ದೀಪಗಳನ್ನು ಉರಿಸಿ ಕರೆಂಟ್ ವೇಸ್ಟ್ ಮಾಡುವುದು, ಇಂಥವುಗಳು ನಡೆಯುತ್ತದೆ. ಹಾಗಾಗಿ ಇಂಥಹ ಸಣ್ಣ ಪುಟ್ಟ ಖರ್ಚುಗಳನ್ನು ಉಳಿತಾಯ ಮಾಡಿ.
*ಸಣ್ಣ ಉಳಿತಾಯ :- ಮಹಿಳೆಯರು ಎಂದ ಮೇಲೆ ಹಣವನ್ನು ಉಳಿತಾಯ ಮಾಡಿಯೇ ಇರುತ್ತಾರೆ. ಅವರು ಉಳಿತಾಯ ಮಾಡಿರುವ ಹಣವನ್ನು, ಪೋಸ್ಟ್ ಆಫೀಸ್ ಕಚೇರಿಯಲ್ಲಿ ಅಕೌಂಟ್ ಓಪನ್ ಮಾಡಿ ಉಳಿಸಬಹುದು. ಇದನ್ನು ಓದಿ.. Kannada News: ಎಲ್ಲರೂ ಬಾಯ್ಬಿಟ್ಟು ನೋಡುವ ಹಾಗೆ ಫೋಟೋಶೂಟ್ ಮಾಡಿಸಿದ ಮುಂಗಾರು ಮಳೆ ನೇಹಾಶೆಟ್ಟಿ. ಹೇಗಿದೆ ಗೊತ್ತೇ ಫೋಟೋಶೂಟ್?

Get real time updates directly on you device, subscribe now.