Rashmika: ಕರ್ನಾಟಕದ ಕ್ರಶ್ ಆಗಿರುವ ರಶ್ಮಿಕಾ ರವರಿಗೆ ಗಂಡು ಹುಡುಕಿದ ರವಿ ಚಂದ್ರನ್, ಕರ್ನಾಟಕದ ಸೊಸೆ ಮಾಡಲು ಹುಡುಕಿದ ಗಂಡು ಯಾರು ಗೊತ್ತೇ?

27

Get real time updates directly on you device, subscribe now.

RAshmika: ನ್ಯಾಷನಲ್ ಕ್ರಶ್ ಎಂದೇ ಖ್ಯಾತಿಯಾಗಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಕನ್ನಡ ಚಿತ್ರರಂಗದಿಂದ ನಟನೆ ಶುರುಮಾಡಿ ಇಂದು ಈ ಎತ್ತರಕ್ಕೆ ಬೆಳೆದಿದ್ದಾರೆ ನಟಿ ರಶ್ಮಿಕಾ. ಇವರ ನಟನೆಯ ವಿಚಾರದ ಬಗ್ಗೆ ಹೆಚ್ಚು ಮಾತನಾಡುವ ಹಾಗಿಲ್ಲ ಆದರೆ ರಶ್ಮಿಕಾ ಮಂದಣ್ಣ ಅವರು ವೈಯಕ್ತಿಕ ಜೀವನದ ಹಲವು ವಿಚಾರಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಕನ್ನಡದ ಬಗ್ಗೆ ಗೌರವ ಇಲ್ಲ ಎನ್ನುವ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಅವರು ಟ್ರೋಲ್ ಆಗುವುದು ಹೆಚ್ಚು.

ಕೊಡಗಿನವರಾದ ರಶ್ಮಿಕಾ, ಪದವಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ಇಲ್ಲಿ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಮಾಡೆಲಿಂಗ್ ಮಾಡುವಾಗ, ಕಿರಿಕ್ ಪಾರ್ಟಿ ಸಿನಿಮಾ ಅವಕಾಶ ಸಿಕ್ಕಿತು. ಈಗ ರಶ್ಮಿಕಾ ನಟನೆಯಲ್ಲಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಡೇಟ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿದೆ. ಆದರೆ ಈಗ ರಶ್ಮಿಕಾ ಮದುವೆ ವಿಚಾರದಲ್ಲಿ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (Ravichandran) ಅವರು ರಶ್ಮಿಕಾ ಅವರನ್ನು ಸೊಸೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದರಂತೆ.

ಈ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಮಾತನಾಡಿದ್ದಾರೆ. ರಶ್ಮಿಕಾ ಮತ್ತು ರವಿಚಂದ್ರನ್ ಅವರು ಒಂದೇ ಕಾರ್ಯಕ್ರಮದಲ್ಲಿ ಭೇಟಿಯಾದಾಗ, ರವಿಚಂದ್ರನ್ ಅವರು ಈ ವಿಚಾರ ತಿಳಿಸಿದ್ದಾರೆ, ಒಮ್ಮೆ ರವಿಚಂದ್ರನ್ ಅವರ ಮಗ ರಶ್ಮಿಕಾ ನಮ್ಮ ಜಿಮ್ ಗೆ ಬರುತ್ತಾರೆ ಎಂದು ಹಳಿದಾಗ, ಚಾನ್ಸ್ ಮಿಸ್ ಮಾಡ್ಕೊಂಡ್ ಬಿಟ್ಟಲ್ಲೋ ಅಂದಿದ್ರಂತೆ ನಟ ರವಿಚಂದ್ರನ್, ಈ ಮೂಲಕ ರಶ್ಮಿಕಾ ಅವರನ್ನು ತಮ್ಮ ಮನೆಗೆ ಸೊಸೆ ಮಾಡಿಕೊಳ್ಳುವ ಆಸೆ ಇತ್ತು ಎನ್ನುವುದನ್ನು ರವಿಚಂದ್ರನ್ ಅವರು ತಿಳಿಸಿದ್ದಾರೆ. ಆದರೆ ಇದೆಲ್ಲವೂ ತಮಾಷೆಗಾಗಿ ಮಾತ್ರ ಎನ್ನಲಾಗಿದೆ.

Get real time updates directly on you device, subscribe now.