Kannad News: ಪಾರ್ಲೆಜಿ ಬಿಸ್ಕೆಟ್ ಗಾಗಿ ನಟನೆ ಬಿಟ್ಟು ಹೋಗಿದ್ದ ಮೇಘ ಶೆಟ್ಟಿ: ಇನ್ಸ್ಟಾಗ್ರಾಮ್ ಮೂಲಕ ಹುಡುಕಿಕೊಂಡು ಬಂತು ಆಫರ್.

25

Get real time updates directly on you device, subscribe now.

Kannada News: ಜೊತೆ ಜೊತೆಯಲಿ (Jothe Jotheyali) ಧಾರವಾಹಿ ಮೂಲಕ ಅನು ಆಗಿ ಎಲ್ಲರಿಗೂ ಪರಿಚಯ ಆಗಿರುವವರು ನಟಿ ಮೇಘಾ ಶೆಟ್ಟಿ (Megha Shetty). ಜೊತೆ ಜೊತೆಯಲಿ ಧಾರವಾಹಿಯ ಮುಗ್ಧ ಪಾತ್ರದಿಂದ ಎಲ್ಲರೂ ಇವರನ್ನು ಅನು ಎಂದೇ ಗುರುತಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅನು (Anu) ಪಾತ್ರ ಎಲ್ಲರಿಗೂ ಇಷ್ಟವಾಗಿ ಹೋಗಿದೆ. ಪ್ರಸ್ಯುತ ಮೇಘಾ ಶೆಟ್ಟಿಯವರು ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ಈಗಷ್ಟೇ ಮೇಘಾ ಶೆಟ್ಟಿ ಅವರು ಡಾರ್ಲಿಂಗ್ ಕೃಷ್ಣ (Darling Krishna) ಅವರೊಡನೆ ನಟಿಸಿರುವ ದಿಲ್ ಪಸಂದ್ (Dilpasand) ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನೇನು ತ್ರಿಬಲ್ ರೈಡಿಂಗ್ ಸಿನಿಮಾ ಕೂಡ ಬಿಡುಗಡೆ ಆಗಲಿದೆ.

ಒಂದು ಕಡೆ ಸಿನಿಮಾ ಒಂದು ಕಡೆ ಧಾರವಾಹಿ ಎಲ್ಲವನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಮೇಘಾ ಶೆಟ್ಟಿ. ಅಷ್ಟಕ್ಕೂ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರ ಹಿಂದೆ ಒಂದು ಕಥೆಯಿದೆ. ಅವರ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ನೋಡಿದ ರಾಘವೇಂದ್ರ ಹುಣಸೂರು (Raghavendra Hunsur) ಅವರು, ಕಾಲ್ ಮಾಡಿ ತಮ್ಮ ಸೀರಿಯಲ್ ನಲ್ಲಿ ಮೇಘಾ ಅವರೇ ನಟಿಸಬೇಕು ಎಂದು ಕೇಳಿಕೊಂಡರಂತೆ. ಆದರೆ ಮೇಘಾ ಅವರು ಆಗ ಎಂಬಿಎ ಕೊನೆಯ ವರ್ಷದ ಎಕ್ಸಾಂ ನಲ್ಲಿ ಬ್ಯುಸಿ ಆಗಿದ್ದರು, ಹಾಗಾಗಿ ಎಕ್ಸಾಂ ಇದೆ, ನಟನೆ ಮಾಡಲು ಆಗೋದಿಲ್ಲ ಎಂದಿದ್ದರಂತೆ, ಆಗ ರಾಘವೇಂದ್ರ ಹುಣಸೂರು ಅವರು ಎಕ್ಸಾಂ ಮುಗಿಯೋದು ಯಾವಾಗ ಎಂದು ಕೇಳಿದ್ದರಂತೆ. ಇದನ್ನು ಓದಿ.. Kannada News: ಎಲ್ಲರೂ ಬಾಯ್ಬಿಟ್ಟು ನೋಡುವ ಹಾಗೆ ಫೋಟೋಶೂಟ್ ಮಾಡಿಸಿದ ಮುಂಗಾರು ಮಳೆ ನೇಹಾಶೆಟ್ಟಿ. ಹೇಗಿದೆ ಗೊತ್ತೇ ಫೋಟೋಶೂಟ್?

ಅದಕ್ಕೆ ಮೇಘಾ ಅವರು ಒಂದು ತಿಂಗಳು ಹೇಳಿದಾಗ, ಒಂದು ತಿಂಗಳು ಅವರಿಗೋಸ್ಕರ ಕಾದು, ಧಾರವಾಹಿಗೆ ಅವರೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದರಂತೆ. ಈ ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ, ಮೇಘಾ ಶೆಟ್ಟಿ ಅವರು ಚಿಕ್ಕವರಾಗಿದ್ದಾಗ, ಅವರ ತಂದೆ ಸಿನಿಮಾದಲ್ಲಿ ನಟಿಸಲು ಕರೆದುಕೊಂಡು ಹೋಗಿದ್ದರಂತೆ. ಅಲ್ಲಿ ಪಾರ್ಲೇಜಿ ಬಿಸ್ಕೆಟ್ ಕೊಟ್ಟ ತಕ್ಷಣ ಮೇಘಾ ಅವರು ನಟನೆ ಮಾಡದೆ ಅಲ್ಲಿಂದ ಓಡಿ ಬಂದಿದ್ದರಂತೆ. ಈಗಲೂ ತಮಗೆ ಪಾರ್ಲೇಜಿ ಬಿಸ್ಕೆಟ್ ಎಂದರೆ ತುಂಬಾ ಇಷ್ಟ ಎನ್ನುತ್ತಾರೆ ಮೇಘಾ ಶೆಟ್ಟಿ. ಚಿತ್ರರಂಗ ಮತ್ತು ಬಣ್ಣದ ಪ್ರಪಂಚದ ಬಗ್ಗೆ ಮೇಘಾ ಶೆಟ್ಟಿ ಅವರ ಅನುಭವದ ಎರಡು ಸ್ವಾರಸ್ಯಕರ ಘಟನೆಗಳು ಇವುಗಳಾಗಿದೆ. ಇದನ್ನು ಓದಿ.. Big News: ಟಿ 20 ICC Ranking ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿ ಭದ್ರಪಡಿಸಿಕೊಂಡ ಸೂರ್ಯ ಕುಮಾರ್ ಯಾದವ್.

Get real time updates directly on you device, subscribe now.