Cricket News: ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬಳಿಕ ಭಾರತಕ್ಕೆ ಸಿಕ್ತು ನೆಮ್ಮದಿಯ ಸುದ್ದಿ: ಅಭಿಮಾನಿಗಳು ಕೊಂಚ ನಿರಾಳ. ಏನಾಗಿದೆ ಗೊತ್ತೇ??

86

Get real time updates directly on you device, subscribe now.

Cricket News: ನಾಳೆ ಭಾನುವಾರ ನವೆಂಬರ್ 13ರಂದು ಟಿ20 ವಿಶ್ವಕಪ್ ನ ಫಿನಾಲೆ (T20 World Cup 2022 Finale) ನಡೆಯಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ್ (England vs Pakistan) ತಂಡ ಸೆಣಸಾಟ ನಡೆಸಲಿದ್ದು, ಗೆದ್ದ ತಂಡ ವಿಶ್ವಕಪ್ ಚಾಂಪಿಯನ್ಸ್ ಆಗಲಿದ್ದಾರೆ. ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ, ಭಾರತ ತಂಡ (Team India) ಈ ಫಿನಾಲೆ ಪಂದ್ಯವನ್ನು ಆಡಬೇಕಿತ್ತು, ಆದರೆ ಸೆಮಿಫೈನಲ್ಸ್ ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಸೂಪರ್ 12 ಹಂತದ 5 ಪಂದ್ಯಗಳಲ್ಲಿ, 4 ಪಂದ್ಯ ಗೆದ್ದು ಉತ್ತಮ ಪ್ರದರ್ಶನ ನೀಡಿತ್ತು ಭಾರತ ತಂಡ. ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು.

ಸೌತ್ ಆಫ್ರಿಕಾ (South Africa) ವಿರುದ್ಧ ನಡೆದ ಒಂದು ಪಂದ್ಯವನ್ನು ಬಿಟ್ಟು ಬೇರೆ ಎಲ್ಲಾ ಪಂದ್ಯದಲ್ಲೂ ಭಾರತ ತಂಡ ಅತ್ಯುತಮ ಪ್ರದರ್ಶನ ನೀಡಿತ್ತು. ಆದರೆ ಬಹುಮುಖ್ಯವಾದ ಸೆಮಿಫೈನಲ್ಸ್ ಪಂದ್ಯದ ಸಮಯದಲ್ಲೇ ಭಾರತ ತಂಡವು ಮುಗ್ಗರಿಸಿ ಬಿದ್ದಿತು, ಇಂಗ್ಲೆಂಡ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಕೂಡ, ಬೌಲಿಂಗ್ ನಲ್ಲಿ ಕಳಪೆಯಾಗಿ, ಮ್ಯಾಚ್ ಸೋಲುವ ಹಾಗಾಯಿತು. ಸೆಮಿಫೈನಲ್ಸ್ ನಲ್ಲಿ ಸೋತು ಭಾರತ ತಂಡ ಕಪ್ ಗೆಲ್ಲಲು ಸಾಧ್ಯವಾಗದಿದ್ದರು ಕೂಡ ಬಹುಮಾನವಾಗಿ ದೊಡ್ಡ ಮೊತ್ತದ ಹಣ ಪಡೆಯಲಿದೆ. ಈಗಾಗಲೇ ಐಸಿಸಿ (ICC) ಪ್ರೈಜ್ ಮನಿ ಬಗ್ಗೆ ಘೋಷಣೆ ಮಾಡಿತ್ತು. ಭಾರತ ತಂಡ ಮತ್ತು ನ್ಯೂಜಿಲೆಂಡ್ ಎರಡು ತಂಡಗಳಿಗೂ ಕೂಡ 3.27 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಇದನ್ನು ಓದಿ.. Cricket News: ಸೆಮಿಫೈನಲ್ ಹೀನಾಯವಾಗಿ ಸೋತ ಭಾರತಕ್ಕೆ ಹೊಸ ಹಣೆಪಟ್ಟಿ ಕಟ್ಟಿದ ಮಾಜಿ ನಾಯಕ ಕಪಿಲ್ ದೇವ್. ಹೇಳಿದ್ದೇನು ಗೊತ್ತೇ?

ಇನ್ನು ವಿಶ್ವಕಪ್ ಗೆಲ್ಲುವ ತಂಡಕ್ಕೆ ಬರೋಬ್ಬರಿ 13.05 ಕೋಟಿ ರೂಪಾಯಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್ ಅಪ್ ಆಗುವ ತಂಡಕ್ಕೆ 6.53 ಕೋಟಿ ರೂಪಾಯಿ ಹಣ ಸಿಗಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುವ ಫಿನಾಲೆ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಲಿದ್ದಾರೆ. ನಮ್ಮ ಭಾರತ ತಂಡ ಉತ್ತಮ ಪ್ರದರ್ಶನ ನೀಡದೆ, ತನ್ನ ತಪ್ಪನ್ನು ತಾನು ತಿದ್ದುಕೊಂಡು, 2024ರಲ್ಲಿ ನಡೆಯುವ ಮುಂದಿನ ವಿಶ್ವಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿ, ಕಪ್ ಗೆಲ್ಲುತ್ತದೆಯೇ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಅತ್ತ ರೂಪೇಶ್ ಶೆಟ್ಟಿಗಾಗಿ ಅಳುತ್ತಿರುವ ಸಾನ್ಯ.! ತನ್ನ ಹೆತ್ತ ತಾಯಿಯ ಬಗ್ಗೆ ಆಡಿದ ಮಾತು ನೋಡಿ. ಏನು ಹೇಳಿದ್ದಾರೆ ಗೊತ್ತೇ??

Get real time updates directly on you device, subscribe now.