Kannada News: ಅಪ್ಪು ಜೊತೆ ನಟಿಸಿದ್ದ ನಟಿ ಹನ್ಸಿಕಾ ತಾನೇ ನಿಂತು ಮದುವೆ ಮಾಡಿಸಿದ್ದ ಖ್ಯಾತ ನಟಿ ಸ್ನೇಹಿತೆಯ ಗಂಡನ ಜೊತೆ ಏನು ಮಾಡಿದ್ದಾಳೆ ಗೊತ್ತೇ??
Kannada News: ಭಾರತ ಚಿತ್ರರಂಗದ ಖ್ಯಾತ ನಟ ಹನ್ಸಿಕಾ ಮೋತ್ವಾಣಿ (Hansika Motwani) ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡುವ ಅಗತ್ಯವಿಲ್ಲ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಾಯಕಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಹನ್ಸಿಕಾ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ ಜೊತೆಗೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಅವರು ಹೆಚ್ಚಾಗಿ ನಟಿಸಿದ್ದು ತಮಿಳು ಸಿನಿಮಾಗಳಲ್ಲಿ. ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಇದೀಗ ಇವರು ಮದುವೆ ಆಗಲು ಸಿದ್ಧವಾಗಿದ್ದಾರೆ.
ಹನ್ಸಿಕಾ ಅವರು ಉದ್ಯಮಿ ಸೊಹೈಲ್ ಕತುರಿಯ (Sohail Kathuria) ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 4 ರಂದು ಇವರಿಬ್ಬರ ಮದುವೆ ನಡೆಯಲಿದೆ. ಇಲ್ಲಿ ಅಸಲಿ ವಿಷಯ ಏನೆಂದರೆ, ಸೊಹೈಲ್ ಅವರು ಮತ್ಯಾರು ಅಲ್ಲ, ಹನ್ಸಿಕಾ ಅವರ ಫ್ರೆಂಡ್ ಜೊತೆ ಮದುವೆ ಆಗಿದ್ದ ಹುಡುಗ, ಹನ್ಸಿಕಾ ಅವರ ಫ್ರೆಂಡ್ ರಿಂಕು ಅವರ ಜೊತೆಗೆ ಸೊಹೈಲ್ ಮದುವೆ ಆಗಿತ್ತು. ಸ್ವತಃ ಹನ್ಸಿಕಾ ಅವರೇ ನಿಂತು ಈ ಮದುವೆ ಮಾಡಿಸಿದ್ದರು, ಇಬ್ಬರ ಮದುವೆಯಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. ಆದರೆ ಈಗ ಅದೇ ಫ್ರೆಂಡ್ ಜೊತೆ ಮದುವೆಯಾಗಿದ್ದ ಹುಡುಗನನ್ನೇ ಹನ್ಸಿಕಾ ಅವರು ಮದುವೆಯಾಗುತ್ತಿದ್ದಾರೆ. ಇದನ್ನು ಓದಿ.. Cricket News: ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬಳಿಕ ಭಾರತಕ್ಕೆ ಸಿಕ್ತು ನೆಮ್ಮದಿಯ ಸುದ್ದಿ: ಅಭಿಮಾನಿಗಳು ಕೊಂಚ ನಿರಾಳ. ಏನಾಗಿದೆ ಗೊತ್ತೇ??

ರಿಂಕು (Rinku) ಮತ್ತು ಸೊಹೈಲ್ ನಡುವೆ ಎಲ್ಲವೂ ಚೆನ್ನಾಗಿರಲಿಲ್ಲ ಎನ್ನಲಾಗುತ್ತಿದೆ. ಹನ್ಸಿಕಾ ಅವರು ಸೊಹೈಲ್ ಅವರೊಡನೆ ಹೆಚ್ಚು ಆತ್ಮೀಯವಾರ ಕಾರಣ ರಿಂಕು ಅವರೊಡನೆ ಬಿರುಕು ಮೂಡಿ ಇಬ್ಬರ ನಡುವೆ ಜಗಳ ಮತ್ತು ಕೋಪ ಹೆಚ್ಚಾಗಿ, ಸೊಹೈಲ್ ಮತ್ತು ರಿಂಕು ಇಬ್ಬರು ಕೂಡ ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ಸೊಹೈಲ್ ಅವರೊಡನೆ ಇನ್ನು ಆತ್ಮೀಯರಾದ ಹನ್ಸಿಕಾ ಈಗ ಮದುವೆ ಆಗುತ್ತಿದ್ದಾರೆ. ಸೊಹೈಲ್ ಅವರು ಪ್ರೊಪೋಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿ, ತಮ್ಮ ಮದುವೆ ವಿಚಾರ ತಿಳಿಸಿದ್ದರು. ಆದರೆ ನೆಟ್ಟಿಗರ, ಸ್ನೇಹಿತೆಗೆ ಮೋಸ ಮಾಡಿ ಮದುವೆ ಆಗುತ್ತಿದ್ದಾರೆ ಎಂದು ಹನ್ಸಿಕಾ ಅವರ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಇದನ್ನು ಓದಿ.. Cricket News: ಸೆಮಿಫೈನಲ್ ಹೀನಾಯವಾಗಿ ಸೋತ ಭಾರತಕ್ಕೆ ಹೊಸ ಹಣೆಪಟ್ಟಿ ಕಟ್ಟಿದ ಮಾಜಿ ನಾಯಕ ಕಪಿಲ್ ದೇವ್. ಹೇಳಿದ್ದೇನು ಗೊತ್ತೇ?