T20-world-cup: ವಿರಾಟ್ ಕೊಹ್ಲಿ ಗೆ ಮಹತ್ವದ ಕಾರ್ಯ ಒಪ್ಪಿಸಿದ ಯುವರಾಜ್ ಸಿಂಗ್. ಹುಟ್ಟುಹಬ್ಬದ ದಿನವೇ ಕೊಹ್ಲಿ ಗೆ ಹೇಳಿದ್ದೇನು ಗೊತ್ತೇ??
T20-world-cup: ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೋಹ್ಲಿ ಎಂದೇ ಖ್ಯಾತಿ ಪಡೆದಿರುವ ಲೆಜೆಂಡ್ ಆಟಗಾರ ವಿರಾಟ್ ಕೋಹ್ಲಿ (Virat Kohli) ಅವರು ಮೊನ್ನೆಯಷ್ಟೇ ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ನವೆಂಬರ್ 5ಕ್ಕೆ ವಿರಾಟ್ ಕೋಹ್ಲಿ ಅವರು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಆ ದಿನ ವಿರಾಟ್ ಅವರಿಗೆ ವಿಶ್ವದ ಹಲವು ಗಣ್ಯರಿಂದ ಹುಟ್ಟುಹಬ್ಬಕ್ಕೆ ಶುಭಾಶಯಗಳು ಹರಿದು ಬಂದಿದೆ. ಕ್ರಿಕೆಟ್ ಲೋಕದ ಬಹುತೇಕ ಎಲ್ಲಾ ಆಟಗಾರರು ವಿರಾಟ್ ಅವರಿಗೆ ವಿಶ್ ಮಾಡಿದ್ದು, ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರು ಸಹ ವಿರಾಟ್ ಅವರಿಗೆ ವಿಶ್ ಮಾಡಿ, ಒಂದು ಕೆಲಸದ ಜವಾಬ್ದಾರಿಯನ್ನು ಸಹ ನೀಡಿದ್ದಾರೆ.
ವಿರಾಟ್ ಕೋಹ್ಲಿ ಅವರು ಫಾರ್ಮ್ ನಲ್ಲಿಲ್ಲ ಎನ್ನುವ ಕಾರಣಕ್ಕೆ ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಟಿ20 ವರ್ಲ್ಡ್ ಕಪ್ ಇಂದ ವಿರಾಟ್ ಕೋಹ್ಲಿ ಅವರನ್ನು ಕೈಬಿಡುವುದು ಒಳ್ಳೆಯದು ಎನ್ನುವ ಅಭಿಪ್ರಾಯಗಳು ಸಹ ವ್ಯಕ್ತವಾಗಿದ್ದವು, ಆದರೆ ಟಿ20 ವರ್ಲ್ಡ್ ಕಪ್ ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕೋಹ್ಲಿ ಅವರು ಕಂಬ್ಯಾಕ್ ಮಾಡಿದರು, ಪಾಕಿಸ್ತಾನ್ ವಿರುದ್ಧ ಬರೋಬ್ಬರಿ 82 ರನ್ ಚಚ್ಚಿ, ಪಂದ್ಯ ಗೆಲ್ಲುವ ಮೂಲಕ, ತಾವು ಏನು ಎನ್ನುವುದನ್ನು ನಿರೂಪಿಸಿದರು. ಕಿಂಗ್ ಕೋಹ್ಲಿ ಎಂದು ವಿರಾಟ್ ಅವರನ್ನು ಕರೆಯುವುದು ಯಾಕೆ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಇದನ್ನು ಓದಿ.. T20 World Cup: ಕಠಿಣ ಕ್ರಮ: ರೋಹಿತ್ ನೋಡಲು ಮೈದಾನಕ್ಕೆ ಬಂದ ಅಭಿಮಾನಿಯೇ ಪಾಡು ಈಗ ಏನಾಗಿದೆ ಗೊತ್ತೇ??
ಮೊನ್ನೆ ವಿರಾಟ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, “ಆಗೋದಿಲ್ಲ ಎಂದು ಹೇಳಬಾರದು ಎನ್ನುವಂತಿರುವ ಲೆಜೆಂಡ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.. ಇಂದು ನೀವಿರುವ ಸ್ಥಾನ ನಿಮ್ಮ ಕಠಿಣ ಪರಿಶ್ರ, ಶ್ರದ್ಧೆ ಮತ್ತು ಆಟಿಟ್ಯೂಡ್ ನ ಫಲಿತಾಂಶ ಆಗಿದೆ. ಹೀಗೆ ಆಡಿ ಕಿಂಗ್ ಕೋಹ್ಲಿ.. ಮನೆಗೆ ಕಪ್ ತೆಗೆದುಕೊಂಡು ಬನ್ನಿ..” ಎಂದು ಯುವರಾಜ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ವಿರಾಟ್ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಎಲ್ಲರೂ ಆಸೆ ಪಡುತ್ತಿರುವ ಹಾಗೆ ಭಾರತ ತಂಡ ಈ ಸಾರಿ ಕಪ್ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. ಅಂದುಕೊಂಡಂತೆ ತಮಿಳಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಕನ್ನಡತಿ: ಸೊಂಟ ಬಳುಕಿಸಿದನ್ನು ನೋಡಿ ಎಲ್ಲರೂ ಒಮ್ಮೆಲೇ ಶಾಕ್.
Wishing a very Happy Birthday to the legend who believes in never say never!
Where you are today is a result of your sheer hard work, dedication and attitude.
Keep going #KingKohli 👑 bring home the cup 🏆
Lots of love @imVkohli ❤️💪🏻 pic.twitter.com/GgtQYCay3K
— Yuvraj Singh (@YUVSTRONG12) November 5, 2022