T20 World Cup: ಕಠಿಣ ಕ್ರಮ: ರೋಹಿತ್ ನೋಡಲು ಮೈದಾನಕ್ಕೆ ಬಂದ ಅಭಿಮಾನಿಯೇ ಪಾಡು ಈಗ ಏನಾಗಿದೆ ಗೊತ್ತೇ??

58

Get real time updates directly on you device, subscribe now.

T20 World Cup: ನಿನ್ನೆ ನಡೆದ ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe) ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 71 ರನ್ ಗಳ ಜಯ ಸಾಧಿಸಿತು. ಬ್ಯಾಟಿಂಗ್ ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್.ರಾಹುಲ್ (K L Rahul) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ ಗೆಲುವು ಸಾಧಿಸಿತು. ಬೌಲಿಂಗ್ ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin), ಭುವನೇಶ್ವರ್ ಕುಮಾರ್ (Bhuvneshwar Kumar), ಮೊಹಮ್ಮದ್ ಶಮಿ (Mohammad Shami), ಹಾರ್ದಿಕ್ ಪಾಂಡ್ಯ (Hardik Pandya) ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಭಾರತ ತಂಡ ಗೆದ್ದು ಸೆಮಿಫೈನಲ್ಸ್ ತಲುಪಿದೆ. ಇಂಗ್ಲೆಂಡ್ ವಿರುದ್ಧ ಭಾರತ (India be England) ತಂಡ ಸೆಮಿಫೈನಲ್ಸ್ ಪಂದ್ಯ ಆಡಲಿದೆ.

ನಿನ್ನೆಯ ಪಂದ್ಯದಲ್ಲಿ ಭಾರತ ತಂಡ (Team India) ಉತ್ತಮವಾಗಿ ಪಂದ್ಯವನ್ನಾಡಿದ್ದರ ಜೊತೆಗೆ ಒಂದು ಘಟನೆ ನಡೆಯಿತು. ಅದೇನೆಂದರೆ, ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರ ಪುಟ್ಟ ಅಭಿಮಾನಿಯೊಬ್ಬ, ರೋಹಿತ್ ಶರ್ಮಾ ಅವರು ಫೀಲ್ಡಿಂಗ್ ಮಾಡುವಾಗ, ಮೈದಾನದ ಕಡೆಗೆ ಓಡಿ ಬಂದರು. ಪ್ರೇಕ್ಷಕರ ನಡುವೆ ಕುಳಿತಿದ್ದ ಹುಡುಗ, ಭಾರತದ ಧ್ವಜ ಹಿಡಿದು, ಮೈದಾನದ ಒಳಗೆ ನುಗ್ಗಿದ್ದು, ರೋಹಿತ್ ಶರ್ಮಾ ಅವರು ಫೀಲ್ಡಿಂಗ್ ಮಾಡುತ್ತಿದ್ದ ಕಡೆಗೆ ಓಡಿ ಹೋಗಿದ್ದಾರೆ. ಬಾಲಕ ಅವರ ಕಡೆಗೆ ಓಡಿ ಹೋಗುವಾಗ, ಮೈದಾನದ ಸಿಬ್ಬಂದಿಗಳು, ಬಾಲಕನನ್ನು ಹಿಡಿಯಲು ಆತನ ಹಿಂದೆಯೇ ಓಡಿದ್ದಾರೆ. ಇದನ್ನು ಓದಿ.. ಅಂದುಕೊಂಡಂತೆ ತಮಿಳಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಕನ್ನಡತಿ: ಸೊಂಟ ಬಳುಕಿಸಿದನ್ನು ನೋಡಿ ಎಲ್ಲರೂ ಒಮ್ಮೆಲೇ ಶಾಕ್.

ಹೀಗೆ ರೋಹಿತ್ ಶರ್ಮಾ ಅವರ ಹಿಂದೆ ಓಡಿದ ಬಾಲಕನನ್ನು ನೋಡಿ ರೋಹಿತ್ ಶರ್ಮಾ ಅವರು ಮೈದಾನದಿಂದ ಹೊರಗೆ ಹೋಗಬೇಕು ಎಂದು ಬಾಲಕನಲ್ಲಿ ಮನವಿ ಮಾಡಿಕೊಂಡರು. ಪುಟ್ಟ ಬಾಲಕ ಅಳುತ್ತಾ ಹೊರಗೆ ಹೋದನು. ಆದರೆ ಹೀಗೆ ಪಂದ್ಯ ನಡೆಯುವ ಮಧ್ಯದಲ್ಲಿ ಮೈದಾನದ ಒಳಗೆ ನುಗ್ಗಿದ್ದಕ್ಕೆ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನವರು ಈ ಬಾಲಕನ ಮೇಲೆ 6.5ಲಕ್ಷ ರೂಪಾಯಿಗಳ ಫೈನ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭಾರತ ತಂಡವು ನಿನ್ನೆಯ ಪಂದ್ಯದಲ್ಲಿ 71 ರನ್ ಗಳ ಭಾರಿ ಜಯ ಗಳಿಸಿದೆ. ಇದನ್ನು ಓದಿ.. ಮಳೆಯ ಭೀತಿಯಲ್ಲಿ ಇದ್ದ ಭಾರತಕ್ಕೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ನಿಯಮದಲ್ಲಿ ಬಾರಿ ಬದಲಾವಣೆ ಏನು ಗೊತ್ತೇ??

Get real time updates directly on you device, subscribe now.