Cricket News: ಭಾರತದ ಗೆಲುವನ್ನು ನೋಡಿ ಅಫ್ರಿದಿ ಗೆ ಏನಾಗಿದೆ?? ಐಸಿಸಿ ಮೇಲೆ ಮಹಾ ಆರೋಪ ಮಾಡಿದ ಪಾಕ್ ಅಫ್ರಿದಿ. ಹೇಳಿದ್ದೇನು ಗೊತ್ತೇ??

17

Get real time updates directly on you device, subscribe now.

Cricket News: ಟಿ20 ವಿಶ್ವಕಪ್ (T20 World Cup) ಪಂದ್ಯಗಳು ಅದ್ಧೂರಿಯಾಗಿ ನಡೆಯುತ್ತಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಒಳ್ಳೆಯ ರನ್ ರೇಟ್ ಸಹ ಪಡೆದಿದೆ ಭಾರತ (Team India). ಬಲಿಷ್ಠ ತಂಡವಾದ ಬಾಂಗ್ಲಾದೇಶ್ ವಿರುದ್ಧ ಕೂಡ ಭಾರತ ತಂಡ ಗೆಲುವು ಸಾಧಿಸಿತು. ಭಾರತದ ಗೆಲುವಿನ ನಂತರ ಪಾಕಿಸ್ತಾನ್ ಮಾಜಿ ಆಟಗಾರ ಐಸಿಸಿ (ICC) ವಿರುದ್ಧ ಕೆಂಡಕಾರಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಭಾರತ (India vs Bangladesh) ತಂಡ 184 ರನ್ ಗಳ ಗುರಿಯನ್ನು ಬಾಂಗ್ಲಾದೇಶ್ ತಂಡಕ್ಕೆ ನೀಡಿತು. ಬಾಂಗ್ಲಾದೇಶ್ ತಂಡ ಉತ್ತಮ ಆರಂಭ ಪಡೆದುಕೊಂಡಿತು, 7ನೇ ಓವರ್ ಗೆ 66 ರನ್ ಗಳಿಸಿ ಮುನ್ನುಗ್ಗುವಾಗ, ಮಳೆ ಅಡ್ಡಿಯಾಯಿತು. ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ 16 ಓವರ್ ನಲ್ಲಿ 151 ರನ್ ಗಳಸಲು ಹೇಳಲಾಯಿತು. ಮಳೆ ನಂತರ ಎಚ್ಚೆತ್ತುಕೊಂಡ ಭಾರತ ತಂಡ ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಿ, 5 ರನ್ ಗಳ ಜಯ ಸಾಧಿಸಿತು. ಈ ಗೆಲುವಿನ ನಂತರ ಪಾಕಿಸ್ತಾನ್ ಮಾಜಿ ಆಟಗಾರ ಅಫ್ರಿದಿ (Afridi), ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ.. ಕ್ರಾಂತಿ ಸಿನಿಮಾ ಬಿಡುಗಡೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡರೆ ದರ್ಶನ್?? ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ??

“ಮೈದಾನದಲ್ಲಿ ನೀರು ಎಷ್ಟಿತ್ತು ಎಂದು ಎಲ್ಲರಿಗೂ ನೋಡಿದ್ದಾರೆ. ಐಸಿಸಿ ಭಾರತದ ಪರವಾಗಿ ನಿರ್ಧಾರ ತೆಗೆದುಕೊಂಡಿದೆ. ಭಾರತ ತಂಡ ಸೆಮಿಫೈನಲ್ಸ್ ತಲುಪಲೇಬೇಕು ಎಂದು ಈ ರೀತಿವ ಷಡ್ಯಂತ್ರ ಮಾಡಿದ ಹಾಗೆ ಕಾಣಿಸುತ್ತಿದೆ. ಭಾರತ ಪಾಕಿಸ್ತಾನ್ ಪಂದ್ಯ ನಡೆಯುವಾಗಲು ಇದೆ ಅಂಪೈರ್ ಗಳಿದ್ದರು, ಇವರಿಗೆ ಬೆಸ್ಟ್ ಅಂಪೈರ್ ಎಂದು ಬಿರುದ್ಧು ಕೊಡಬೇಕು.”ಎಂದು ಕಿಡಿಕಾರಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಬಾಂಗ್ಲಾದೇಶ್ ಕ್ಯಾಪ್ಟನ್ ಶಕೀಬ್ ಅಲ್ ಹಸನ್ (Shakib Al Hasan) ಮಾತನಾಡಿದ್ದರು, ಪಂದ್ಯ ಮುಗಿದ ಬಳಿಕ, ಮೈದಾನದಲ್ಲಿ ನೀರಿದ್ದರೆ ಅದು ಬೌಲಿಂಗ್ ಮಾಡುವ ತಂಡಕ್ಕೆ ಅನಾನುಕೂಲ ಆದರು ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು ಎಂದಿದ್ದರು ಶಕೀಬ್ ಅಲ್ ಹಸನ್. ಇದನ್ನು ಓದಿ.. ನಿಜಕ್ಕೂ ಕಾಂತಾರ 300 ಕೋಟಿ ಕಲೆಕ್ಷನ್ ಮಾಡಿದೆಯೇ? ಅದೆಲ್ಲ ಸುಳ್ಳಾ? ಅಸಲಿ ಲೆಕ್ಕಾಚಾರದ ಬಗ್ಗೆ ಮಾತನಾಡಿದ ರಿಷಬ್ ಹೇಳಿದ್ದೇನು ಗೊತ್ತೇ??

Get real time updates directly on you device, subscribe now.