ಕ್ರಾಂತಿ ಸಿನಿಮಾ ಬಿಡುಗಡೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡರೆ ದರ್ಶನ್?? ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ??
ಡಿಬಾಸ್ ದರ್ಶನ್ ಅವರ ಸಿನಿಮಾ ಅಂದ್ರೆ ಅಭಿಮಾನಿಗಳಲ್ಲಿ ಇರುವ ಕ್ರೇಜ್ ಬಗ್ಗೆ ಹೇಳುವುದೇ ಬೇಡ. ಸಿನಿಮಾ ಬೆಗೆಗಿನ ಒಂದೊಂದು ಅಪ್ಡೇಟ್ ಗಳನ್ನು ಕೂಡ ದೊಡ್ಡದಾಗಿ ಸೆಲೆಬ್ರೇಟ್ ಮಾಡುತ್ತಾರೆ ಅಭಿಮಾನಿಗಳು. ಒಂದುವರೆ ವರ್ಷದಿಂದ ದರ್ಶನ್ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಇತ್ತೀಚೆಗೆ ಕ್ರಾಂತಿ ಸಿನಿಮಾ ತಂಡ ಪ್ರೆಸ್ ಮೀಟ್ ಮಾಡಿ, ಜನವರಿ 26ರಂದು ಸಿನಿಮಾ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜನವರಿ 26ರಂದು ಬಿಡುಗಡೆ ಆಗುವುದು ಪಕ್ಕಾ ಎನ್ನಲಾಗಿದೆ.
ನವೆಂಬರ್ 1ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಜನವರಿ 26ರಂದು ಬಿಡುಗಡೆ ಆಗುತ್ತದೆ. ದರ್ಶನ್ ಅವರ ಸಿನಿಮಾ ಎಂದರೆ ಅಭಿಮಾನಿಗಳು ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡಬೇಕು ಎಂದು ಕಾಯುತ್ತಿರುತ್ತಾರೆ, ಆದರೆ ಯಾಕೋ ದರ್ಶನ್ ಅವರು ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ಸೋಲು ಒಪ್ಪಿಕೊಂಡ ಹಾಗೆ ಅಭಿಮಾನಿಗಳಿಗೆ ಭಾಸವಾಗುತ್ತಿದೆ. ಅದು ಯಾಕೆ ಅಂದ್ರೆ, ಕ್ರಾಂತಿ ಸಿನಿಮಾದಲ್ಲಿ ಒಳ್ಳೆಯ ಸಬ್ಜೆಕ್ಟ್ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಅಕ್ಷರ ಕ್ರಾಂತಿ ಕನ್ನಡ ಸರ್ಕಾರಿ ಶಾಲೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಸಹ ಇದೆ.

ಆದರೆ ದರ್ಶನ್ ಅವರು ಪ್ರೆಸ್ ಮೀಟ್ ನಲ್ಲಿ ಮಾತನಾಡುವಾಗ, ನಾವು ದೊಡ್ಡ ಸಿನಿಮಾ ಮಾಡಿದ್ದೀವಿ, ಎಲ್ಲಾ ದಾಖಲೆಗಳನ್ನ ಈ ಸಿನಿಮಾ ಬ್ರೇಕ್ ಮಾಡುತ್ತೆ ಅಂತ ನಾನು ಹೇಳೋದಿಲ್ಲ, ಒಂದೊಳ್ಳೆ ಸಿನಿಮಾ ಮಾಡಿದ್ದೀವಿ ನಿಮಗೆಲ್ಲಾ ಈ ಸಿನಿಮಾ ಇಷ್ಟ ಆಗುತ್ತದೆ ಎಂದು ಹೇಳಿದ್ದಾರೆ. ಡಿಬಾಸ್ ಹೇಳಿರುವ ಈ ಮಾತುಗಳಿಂದ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ, ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ದರ್ಶನ್ ಅವರು ಸೋಲೊಪ್ಪಿಕೊಂಡಿದ್ದಾರೆ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆ ಆದಮೇಲೆ ಯಾವೆಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ.