ಮಳೆಯ ಭೀತಿಯಲ್ಲಿ ಇದ್ದ ಭಾರತಕ್ಕೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ನಿಯಮದಲ್ಲಿ ಬಾರಿ ಬದಲಾವಣೆ ಏನು ಗೊತ್ತೇ??

83

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಭರದಿಂದ ಸಾಗುತ್ತಿದೆ. ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಿದ್ದು, ಇನ್ನೇನು ಫೈನಲ್ಸ್ ಮತ್ತು ಸೆಮಿಫೈನಲ್ಸ್ ನಡೆಯಲಿದೆ. ಪ್ರಸ್ತುತ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಗೆ ಆಯ್ಕೆಯಾಗಿದ್ದು, ಸೆಮಿಫೈನಲ್ಸ್ ಗೆ ಆಯ್ಕೆಯಾಗಲು ಇನ್ನು ಮೂರು ತಂಡಗಳು ಪೈಪೋಟಿ ನಡೆಸುತ್ತಿದೆ. ಪ್ರಸ್ತುತ ತಂಡದ ಫಲಿತಾಂಶಗಳನ್ನು ನೋಡಿದರೆ, ಭಾರತ ಮತ್ತು ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ನಲ್ಲಿ ಇರುವ ಭರವಸೆ ನೀಡಿದೆ. ಇದರ ಜೊತೆಗೆ ಇನ್ಯಾವ ತಂಡ ಆಯ್ಕೆಯಾಗಬಹುದು ಎನ್ನುವ ಕುತೂಹಲ ಶುರುವಾಗಿದೆ.

ಟಿ20 ವಿಶ್ವಕಪ್ ನಲ್ಲಿ ಪಂದ್ಯಗಳಿಗೆ ಒಂದು ರೀತಿ ಅಡೆತಡೆ ಆಗಿರುವುದು ಮಳೆ, ಈ ಸೀಸನ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಮಳೆ ಇರುವ ಕಾರಣ, ಹಲವು ಪಂದ್ಯಗಳು ರದ್ದಾದವು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯುವಾಗ ಹೀಗೆ ಮಳೆಯಾದರೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಐಸಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇಷ್ಟು ದಿನಗಳು ಪಂದ್ಯ ನಡೆಯುವಾಗ ಮಳೆ ಬಂದರೆ ಕೆಲವೊಮ್ಮೆ 10 ಓವರ್ ಗಿಂತ ಕಡಿಮೆ ಓವರ್ ಗಳಿಗೆ ಪಂದ್ಯ ಸೀಮಿತವಾಗುತ್ತಿತ್ತು, ಅಥವಾ ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ ನಡೆಸಲಾಗುತ್ತಿತ್ತು. ಆದರೆ ಈಗ ಫೈನಲ್ಸ್ ಮತ್ತು ಸೆಮಿಫೈನಲ್ ನಲ್ಲಿ ನಿಯಮದ ಬದಲಾವಣೆ ಆಗಿದೆ.

ಸೆಮಿಫೈನಲ್ಸ್ ಮತ್ತು ಫೈನಲ್ಸ್ ನಲ್ಲಿ ಪಂದ್ಯಗಳು ನಡೆಯುವಾಗ ಮಳೆಯಿಂದ ತೊಂದರೆ ಉಂಟಾದರೆ, ಎರಡು ತಂಡಗಳು ಕನಿಷ್ಠ 10 ಓವರ್ ಗಳ ಇನ್ನಿಂಗ್ಸ್ ಆಡಬೇಕು ಎಂದು ನಿಯಮವನ್ನು ಜಾರಿಗೆ ತರಲಾಗಿದೆ. ಇಲ್ಲದೆ ಹೋದರೆ, ಪಂದ್ಯಕ್ಕೆ ಫಲಿತಾಂಶ ನೀಡುವುದಿಲ್ಲ ಎಂದು ನಿಯಮ ತರಲಾಗಿದೆ. 10 ಓವರ್ ಪೂರೈಸಲಿಲ್ಲವಾದರೆ ಪಂದ್ಯದ ಫಲಿತಾಂಶ ಸಿಗುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಈಗ ಹೆಚ್ಚು ಮಳೆ ಬರುತ್ತಿರುವ ಕಾರಣ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಮೀಸಲು ದಿನಗಳನ್ನು ನೀಡಲಾಗಿದೆ. ಈ ಮೂಲಕ ಫಲಿತಾಂಶಗಳನ್ನು ಪಡೆಯುವ ಅವಕಾಶ ನೀಡಲಾಗಿದೆ. ಲೀಗ್ ಹಂತದಲ್ಲಿ 5 ಓವರ್ ಗಳ ಪಂದ್ಯವನ್ನಾಡಿ, ಫಲಿತಾಂಶ ಪಡೆಯಬಹುದಿತ್ತು. ಆದರೆ ಈಗ ಹಾಗಿಲ್ಲ.

Get real time updates directly on you device, subscribe now.