ಇನ್ಸ್ಟಾಗ್ರಾಮ್ ಬಳಸಿ, ಕೊಹ್ಲಿ ಗಳಿಸಿದ್ದು ಬರೋಬ್ಬರಿ 300 ಕೋಟಿ; ಆದರೆ ತಿಂಗಳಿಗೆ ಒಟ್ಟು ಆದಾಯ ಎಷ್ಟು ಗೊತ್ತೇ??
ಕಿಂಗ್ ಕೋಹ್ಲಿ ಅವರು ಕ್ರಿಕೆಟ್ ಗ್ರೌಂಡ್ ನಲ್ಲಿ ಮಾತ್ರ ಕಿಂಗ್ ಅಲ್ಲ, ಹಣದ ವಿಚಾರದಲ್ಲಿ ಕೂಡ ಕಿಂಗ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ ಕೋಹ್ಲಿ ಅವರಿಗೆ 200 ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನು ಟ್ವಿಟರ್ ನಲ್ಲಿ 50 ಕೋಟಿ ಅಭಿಮಾನಿಗಳಿದ್ದಾರೆ. ಇವುಗಳ ಮೂಲಕವೇ ಕೋಹ್ಲಿ ಅವರು ಕೋಟಿ ಕೋಟಿ ಹಣ ಗಳಿಸುತ್ತಾರೆ ಎನ್ನುವುದು ನಿಮಗೆ ಶಾಕ್ ನೀಡುವಂತಹ ವಿಚಾರ ಆಗಿದೆ. ವಿರಾಟ್ ಕೋಹ್ಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಗೆ ಪಡೆಯುವ ಬೆಲೆ ಕೇಳಿದರೆ ತಲೆ ತಿರುಗುತ್ತದೆ.
ವಿರಾಟ್ ಕೋಹ್ಲಿ ಅವರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಬರೋಬ್ಬರಿ 8.69 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ಸ್ಟಾಗ್ರಾಮ್ ಇಂದ ಅತಿಹೆಚ್ಚು ಸಂಪಾದನೆ ಮಾಡುವ ಸೆಲೆಬ್ರಿಟಿಗಳಲ್ಲಿ ಕೋಹ್ಲಿ ಅವರು ಪ್ರಪಂಚದಲ್ಲೇ ಮೂರನೇ ಸ್ಥಾನ ಪಡೆಯುತ್ತಾರೆ. ಪೇಈ ಪಾರ್ಟ್ಸ್ನರ್ಶಿಪ್ ನಲ್ಲಿ ಒಂದು ಪೋಸ್ಟ್ ಗೆ 8.69 ಕೋಟಿ ಚಾರ್ಜ್ ಮಾಡುವ ಕೋಹ್ಲಿ ಅವರು, ಇದರಿಂದಲೇ ತಿಂಗಳಿಗ 30 ಕೋಟಿಗಿಂತ ಹೆಚ್ಚು ಹಣ ಗಳಿಸುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೋಹ್ಲಿ ಅವರು ಬರೋಬ್ಬರಿ 1450 ಪೋಸ್ಟ್ ಶೇರ್ ಮಾಡಿದ್ದಾರೆ. ಇದು ಇನ್ಸ್ಟಾಗ್ರಾಮ್ ಕಥೆಯಾದರೆ, ಟ್ವಿಟರ್ ನಲ್ಲೂ ಕೋಹ್ಲಿ ಅವರದ್ದೇ ಹವಾ.
ಟ್ವಿಟರ್ ನಲ್ಲಿ ಒಂದು ಪೋಸ್ಟ್ ಗೆ ಬರೋಬ್ಬರಿ 3.5ಕೋಟಿ ರೂಪಾಯಿ ಪಡೆಯುತ್ತಾರೆ ಕೋಹ್ಲಿ. ಕೋಹ್ಲಿ ಅವರಿಗೆ ಬಿಸಿಸಿಐ ಎ+ ಸೆಂಟ್ರಲ್ ಆಟಗಾರ ಎನ್ನುವ ಕಾರಣದಿಂದ ಅವರಿಗೆ ವರ್ಷಕ್ಕೆ 7 ಕೋಟಿ ಆದಾಯ ಬರುತ್ತದೆ. ಇನ್ನು ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಿಂದ ವರ್ಷಕ್ಕೆ 17 ಕೋಟಿ ಸಿಗುತ್ತದೆ. ಅಷ್ಟೇ ಅಲ್ಲದೆ, ಕೋಹ್ಲಿ ಅವರು ಅನೇಕ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಸಹ ಪಾಲ್ಗೊಳ್ಳುತ್ತಾರೆ. ಇವುಗಳಿಂದಲು ಕೋಟಿ ಕೋಟಿ ಹಣ ಗಳಿಸುತ್ತಾರೆ. ಸಾವಿರ ಕೋಟಿ ಆಸ್ತಿಯ ಒಡೆಯ ಆಗಿರುವ ಕೋಹ್ಲಿ ಅವರು ಇನ್ಸ್ಟಾಗ್ರಾಮ್ ಇಂದಲೇ ಒಂದು ವರ್ಷದಲ್ಲಿ ಬರೋಬ್ಬರಿ 300 ಕೋಟಿ ಗಳಿಸಿದ್ದಾರೆ.