ಎಲ್ಲಾ ಗಾಳಿ ಸುದ್ದಿಗಳ ನಡುವೆ ಕಷ್ಟದಲ್ಲಿ ಇರುವ ರವಿ ಚಂದ್ರನ್ ರವರ ಸಹಾಯಕ್ಕೆ ಬಂದ ಮೇಘನಾ ರಾಜ್ ಮಾಡಿದ್ದೇನು ಗೊತ್ತೇ??
ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಈಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ರವಿ ಬೋಪಣ್ಣ ಸಿನಿಮಾ ನಿರ್ಮಾಣ ಮಾಡಿದ ರವಿಚಂದ್ರನ್ ಅವರು, ಬಹಳಷ್ಟು ಹಣ ಕಳೆದುಕೊಂಡರು. ಸುದೀಪ್ ಮತ್ತು ಅವರ ಕಾಂಬಿನೇಶನ್ ನಲ್ಲಿ ಬಂದ ಮಾಣಿಕ್ಯ ಸಿನಿಮಾ ಸೂಪರ್ ಹಿಟ್ ಆಗಿದ್ದ ಕಾರಣ, ರವಿ ಬೋಪಣ್ಣ ಸಿನಿಮಾ ಕೂಡ ಅದೇ ರೀತಿ ಸೂಪರ್ ಹಿಟ್ ಆಗುತ್ತೆ ಎಂದುಕೊಂಡಿದ್ದರು ಕ್ರೇಜಿಸ್ಟಾರ್. ಆದರೆ ಸಿನಿಮಾ ಸೋಲನ್ನು ಕಂಡಿತು. ಸಿನಿಮಾಗಾಗಿ ಮಾಡಿದ್ದ ಸಾಲಗಳನ್ನು ತೀರಿಸಲು ಸಾಧ್ಯವಾಗದೆ ಹೋಯಿತು.
ಈ ಸಮಯದಲ್ಲಿ ರವಿಚಂದ್ರನ್ ಅವರು ತಮ್ಮ ತಂದೆ ತಾಯಿ ನೆನಪಾಗಿರುವ ರಾಜಾಜಿನಗರದ ಮನೆಯನ್ನೇ ಖಾಲಿ ಮಾಡಿ, ಬೇರೆ ಮನೆಗ ಹೋಗಿದ್ದಾರೆ. ರವಿಚಂದ್ರನ್ ಅವರು ತಮ್ಮ ಕಷ್ಟಗಳ ಬಗ್ಗೆ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದರು, ಜನರನ್ನು ಮೆಚ್ಚಿಸಲು ಸಾಧ್ಯವಾಗುತ್ತಿಲ್ಲ, ಮುಂದೆ ನನ್ನ ಸಿನಿಮಾಗೆ ಜನರು ಬರುವ ಹಾಗೆ ಮಾಡುತ್ತೇನೆ, ವಾಪಸ್ ಬಂದೆ ಬರುತ್ತೇನೆ ಎಂದು ಸಹ ಹೇಳಿದ್ದರು. ರವಿಚಂದ್ರನ್ ಅವರ ಈ ಮಾತುಗಳನ್ನು ಕೇಳಿ, ಚಿತ್ರರಂಗದ ಸಾಕಷ್ಟು ಗಣ್ಯರು ರವಿಚಂದ್ರನ್ ಅವರಿಗೆ ಸಹಾಯ ಮಾಡಿದರು. ಇದೀಗ ಮೇಘನಾ ರಾಜ್ ಅವರು ಸಹ ರವಿಚಂದ್ರನ್ ಅವರ ಸಹಾಯಕ್ಕೆ ಬಂದಿದ್ದಾರೆ. ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಅವರು ರವಿಚಂದ್ರನ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಎರಡು ಕುಟುಂಬದ ನಡುವೆ ಒಳ್ಳೆಯ ಆತ್ಮೀಯತೆ ಇರುವ ಕಾರಣ ಮೇಘನಾ ರಾಜ್ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಅಪ್ಪಾಜಿ ನೀವು ಬೇಸರ ಮಾಡಿಕೊಳ್ಲಬೇಡಿ, ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ, ನೀವು ಹೀಗಿದ್ದರೆ ನಮ್ಮಿಂದ ಸಹಿಸಲು ಹೇಳಿದ ಮೇಘನಾ ರಾಜ್ ಅವರು, ನನ್ನಿಂದ ಆಗುವ 1 ಕೋಟಿ ರೂಪಾಯಿಯನ್ನ ನಿಮಗೆ ಕೊಡುತ್ತೇನೆ ಎಂದರಂತೆ. ಆಗ ರವಿಚಂದ್ರನ್ ಅವರು ಬೇಡಮ್ಮ, ನನ್ನಿಂದ ಆಗುತ್ತದೆ ಎಲ್ಲವನ್ನು ಸರಿ ಮಾಡುತ್ತೇನೆ, ಮತ್ತೆ ನೂರು ದಿನ ಓಡುವಂಥ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಹಾಗೂ ಕೇಳದ ಮೇಘನಾ ರಾಜ್ ಅವರು ತಮ್ಮಿಂದ ಆಗುವ ಸಹಾಯ ಮಾಡಿದ್ದಾರಂತೆ. ಮೇಘನಾ ರಾಜ್ ಅವರು ಗುಣ ಎಂಥದ್ದು ಎಂದು ಈ ಘಟನೆ ಇಂದ ಗೊತ್ತಾಗುತ್ತದೆ.