ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡ ಸಮಂತಾ: ಸುದ್ದಿ ಕೇಳಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಎರಡನೇ ಪ್ರೀತಿ ಆಗೇ ಹೋಯ್ತಾ??
ನಟಿ ಸಮಂತಾ ರುತ್ ಪ್ರಭು ಅವರು ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಒಂಟಿಯಾಗಿದ್ದಾರೆ. ಸಮಂತಾ ಅವರು ಈಗ ಕೆರಿಯರ್ ಮೇಲೆ ಹೆಚ್ಚು ಗಮನ ಕೊಡುತ್ತಿದ್ದಾರೆ, ಒಂದರ ಮೇಲೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಷ್ಟು ದಿನಗಳ ಕಾಲ ಸೋಷಿಯಲ್ ಮೀಡಿಯಾ ಇಂದ ದೂರ ಉಳಿದಿದ್ದ ಸಮಂತಾ ಅವರು, ಇದೀಗ ಒಟ್ಟೊಟ್ಟಿಗೆ ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋ ತಮ್ಮ ಮುದ್ದಿನ ಶ್ವಾನದ ಜೊತೆಗಿರುವ ಫೋಟೋ ಶೇರ್ ಮಾಡಿದ್ದು, ಮತ್ತೊಂದು ಫೋಟೋದಲ್ಲಿ ತಮ್ಮ ಮುಖ ತೋರಿಸದೆ, ಟೀಶರ್ಟ್ ಮೇಲೆ ಇರುವ ಬರಹ ಕಾಣಿಸುವ ಹಾಗೆ ಪೋಸ್ಟ್ ಮಾಡಿದ್ದಾರೆ.
ಆ ಟೀಶರ್ಟ್ ಮೇಲೆ ಬರೆದಿರುವುದನ್ನು ನೋಡಿದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಸಮಂತಾ ಅವರು ಹಾಕಿದ್ದ ಟೀಶರ್ಟ್ ಮೇಲೆ , “ಯು ವಿಲ್ ನೆವರ್ ವಾಕ್ ಅಲೋನ್..”ಎಂದು ಬರೆದಿತ್ತು. ಅದನ್ನು ನೋಡಿದ ಅಭಿಮಾನಿಗಳು, ಸಮಂತಾ ಅವರು ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಎಂದು ಚರ್ಚೆ ಮಾಡುತ್ತಿದ್ದಾರೆ. ಚೈತನ್ಯ ಅವರ ನಂತರ ಮತ್ಯಾರನ್ನು ಪ್ರೀತಿ ಮಾಡುವುದಿಲ್ಲ, ಇನ್ಯಾರ್ಸ್ ಜೊತೆಗೂ ಮದುವೆ ಆಗುವುದಿಲ್ಲ ಎಂದು ಸಮಂತಾ ಅವರು ನಿರ್ಧಾರ ಮಾಡಿದ ಹಾಗೆ ತೋರುತ್ತಿತ್ತು, ಇದೆಲ್ಲದರ ನಡುವೆ ಸದ್ಗುರು ಅವರು ಸಮಂತಾ ಅವರಿಗೆ ಎರಡನೇ ಮದುವೆ ಆಗಲು ಒಂದು ಸಲಹೆ ಸಹ ನೀಡಿದ್ದರು. ಅದೇ ರೀತಿ ಈಗ ಸಮಂತಾ ಅವರು ಸದ್ಗುರು ಅವರು ನೀಡಿದ ಸಲಹೆಯನ್ನು ಸ್ವೀಕರಿಸಿದ್ದಾರಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಒಟ್ಟಿನಲ್ಲಿ ಸಮಂತಾ ಅವರ ಈ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಎಂದು ಅನ್ನಿಸುತ್ತಿದೆ. ವಿಚ್ಛೇದನದ ನಂತರ ಸಮಂತಾ ಅವರು ಮದುವೆಯ ಬಗ್ಗೆ ಮಾತನಾಡಿದಾಗಲೆಲ್ಲಾ, ತಮಗೆ ಆಸಕ್ತಿ ಇಲ್ಲ ಎನ್ನುವ ಹಾಗೆಯೇ ಇರುತ್ತಿದ್ದರು, ಆದರೆ ಈಗ ಅವರಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾನ ಎನ್ನುವ ಪ್ರಶ್ನೆ ಶುರುವಾಗಿದೆ. ಸಮಂತಾ ಅವರು ಕೆಲ ಸಮಯ ಸೋಷಿಯಲ್ ಮೀಡಿಯಾ ಇಂದ ದೂರವಿದ್ದಾಗ ಅವರಿಗೆ ಚರ್ಮದ ಸಮಸ್ಯೆ ಇದೆ ಎನ್ನುವ ವಿಚಾರ ವೈರಲ್ ಆಗಿತ್ತು, ಅದೇ ರೀತಿ ಸಮಂತಾ ಅವರು ಕೆಲವು ದಿನಗಳಿಂದ ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿಲ್ಲ, ಹಾಗಾಗಿ ಅಭಿಮಾನಿಗಳು ಸಮಂತಾ ಅವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ.