ಲಕ್ಷ್ಮಿ ದೇವಿ ಮನೆಗೆ ಬರುವ ಮುನ್ನ ನೀಡುವ ಸೂಚನೆಗಳು ಯಾವ್ಯಾವು ಗೊತ್ತೆ?? ಕಡೆಗಣಿಸಬೇಡಿ, ಲಕ್ಷ್ಮಿ ದೇವಿಯ ಈ ಸಂಕೇತ ನೀಡಿದಾಗ.

137

Get real time updates directly on you device, subscribe now.

ಲಕ್ಷ್ಮೀದೇವಿ ನಮ್ಮ ಮನೆಗೆ ಪ್ರವೇಶ ಮಾಡುವ ಮುಂಚೆ ತಿಳಿಸಿಯೇ ಬರುತ್ತಾರೆ. ಲಕ್ಷ್ಮೀದೇವಿ ಮನೆಗೆ ಬರುವ ಮೊದಲು ನೀಡುವ ಕೆಲವು ಸೂಚನೆಗಳು ಇದೆ, ಈ ಸೂಚನೆಗಳು ನಮ್ಮ ಜೀವನದಲ್ಲಿ ಕಾಣಿಸಿದರೆ, ನಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾರೆ ಎಂದು ಅರ್ಥ. ಹಾಗಿದ್ದರೆ ಲಕ್ಷ್ಮೀದೇವಿ ನಮ್ಮ ಮನೆಗೆ ಬರುವ ಮೊದಲು ನೀಡುವ ಸೂಚನೆಗಳು ಯಾವ್ಯಾವು ಎಂದು ತಿಳಿಸುತ್ತೇವೆ ನೋಡಿ.. ಹಣ ಸಂಪಾದನೆ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ, ಆದರೆ ಕೆಲವರಿಗೆ ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಸಹ, ಅವರು ಹಣ ಉಳಿಸಲು ಆಗುವುದಿಲ್ಲ, ಆದಾಯವಾಗಿ ಬರುವ ಹಣ ಅದೇ ರೀತಿ ಖರ್ಚಾಗಿ ಬಿಡುತ್ತಾ ಇರುತ್ತದೆ. ಆದರೆ ಇನ್ನೂ ಕೆಲವು ಜನರು ಚೆನ್ನಾಗಿ ಸಂಪಾದನೆ ಮಾಡುತ್ತಾ ಇರುತ್ತಾರೆ. ಅವರು ಹೆಚ್ಚು ಕಷ್ಟಪಡುವುದು ಇಲ್ಲ, ಆದರೆ ಅವರ ಬಳಿ ಲಕ್ಷ್ಮೀದೇವಿ ಇರುತ್ತಾರೆ. ಇದು ಹೇಗೆ ಸಾಧ್ಯ ? ಈ ರೀತಿ ಆಗುವುದರ ಹಿಂದಿನ ಕಾರಣ ಮತ್ತು ರಹಸ್ಯವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ..

ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿ ತಮ್ಮ ಜೊತೆ ಇರಬೇಕು ಎಂದು ಹಲವು ಭಕ್ತರು ಪೂಜೆ ಪುನಸ್ಕಾರ ಮಾಡುತ್ತಾರೆ. ಲಕ್ಷ್ಮಿದೇವಿಯ ಆಶೀರ್ವಾದ ತಮ್ಮ ಮೇಲೆ ಸದಾ ಇರಬೇಕು ಎಂದು ಬಯಸುತ್ತಾರೆ. ಲಕ್ಷ್ಮೀದೇವಿ ತಮ್ಮನ್ನು ಸುಖ ಸಂಪತ್ತಿನಿಂದ ತುಂಬಿಸುತ್ತಾರೆ ಎಂದು ಲಕ್ಷ್ಮೀದೇವಿಯ ಅನುಗ್ರಹ ಹೊಂದಲು ಹಲವು ರೀತಿಯ ಪೂಜೆಗಳನ್ನು ಮಾಡಿಸುತ್ತಾರೆ. ಲಕ್ಷ್ಮಿದೇವಿ ಕೃಪೆ ಇದ್ದರೆ ಶಾಂತಿ ನೆಮ್ಮದಿ ಇರುತ್ತದೆ ಎಂದು ಲಕ್ಷ್ಮೀದೇವಿಯ ಕೃಪೆ ಪಡೆಯುವ ಸಲುವಾಗಿ, ಅನೇಕ ಧಾರ್ಮಿಕ ಕೆಲಸಗಳು ಪೂಜೆ ಪುನಸ್ಕಾರ ಆಚರಣೆಗಳನ್ನು ಮಾಡುತ್ತಾರೆ. ಆದರೆ ಲಕ್ಷ್ಮೀದೇವಿ ಯಾರದ್ದೇ ಮನೆಗೆ ಬರುವ ಮೊದಲು ಕೆಲವು ಸೂಚನೆಗಳನ್ನು ನೀಡಿ ಬರುತ್ತಾರೆ ಎನ್ನುವ ನಂಬಿಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ. ಶುಭ್ರವಾಗಿ, ಸಂತೋಷವಾಗಿ, ಯಾವುದೇ ತೊಂದರೆ ಇಲ್ಲದೆ ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಬರುತ್ತಾರೆ ಎಂದು ಅರ್ಥ. ಲಕ್ಷ್ಮೀದೇವಿ ಬರುವ ಮನೆಯಲ್ಲಿ ಶ್ರೇಯಸ್ಸು ಇರುತ್ತದೆ ಎನ್ನುವುದರಿಂದ ಬರುವ ಮೊದಲು ಶುಭ ಸೂಚನೆಗಳನ್ನೇ ನೀಡುತ್ತಾರೆ ಎಂದು ನಂಬಲಾಗಿದೆ.

ಲಕ್ಷ್ಮಿ ದೇವಿ ಎಂಥಹ ಮನೆಯಲ್ಲಿ ವಾಸಿಸುತ್ತಾರೆ ಎಂದು ಈ ಸಣ್ಣ ಕಥೆಯ ಮೂಲಕ ತಿಳಿಸುತ್ತೇವೆ.. ಒಂದು ಸಾರಿ ಲಕ್ಷ್ಮಿ ದೇವಿ ಒಬ್ಬ ವ್ಯಕ್ತಿಯ ಮೇಲೆ ಕೋಪಗೊಂಡು, ಈ ಮನೆಯಿಂದ ಹೊರಹೋಗುತ್ತಿದ್ದೇನೆ, ದರಿದ್ರ ದೇವಿಯು ನಿನ್ನ ಮನೆಗೆ ಬರಲಿದ್ದಾಳೆ, ನಾನು ನಿನಗೆ ಒಂದು ವರ ನೀಡಲು ಬಯಸುತ್ತೇನೆ ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿಯು ಲಕ್ಷ್ಮಿ ದೇವಿಗೆ ಹೀಗೆ ಹೇಳುತ್ತಾನೆ. “ಅಮ್ಮಾ, ನೀನು ಹೋಗದಂತೆ ತಡೆಯುವ ಶಕ್ತಿ ನನಗಿಲ್ಲ. ಅದೇ ರೀತಿ ದರಿದ್ರ ದೇವಿಯನ್ನು ತಡೆಯುವ ಶಕ್ತಿ ಕೂಡ ನನ್ನಲ್ಲಿಲ್ಲ. ನೀವಿಬ್ಬರು ಒಂದೇ ಕಡೆ ಇರುವುದಿಲ್ಲ. ಹಾಗಾಗಿ, ದರಿದ್ರ ದೇವರು ಬಂದಾಗ, ನಮ್ಮಲ್ಲಿರುವ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯ ನಮ್ಮ ಮನೆಯಲ್ಲಿ ಹಾಗೆಯೇ ಉಳಿಯಲಿ ಎಂದು ವರ ನೀಡುವಂತೆ ಕೇಳುತ್ತಾನೆ. ಆಗ ತಥಾಸ್ತು ಎಂದು ಹೇಳಿ ಲಕ್ಷ್ಮಿ ದೇವಿ ಆ ಹೊರಬರುತ್ತಾರೆ. ಕೆಲವು ದಿನಗಳ ನಂತರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಆ ವ್ಯಕ್ತಿಯ ಹೆಂಡತಿ ತನ್ನ ಕಿರಿ ಸೊಸೆಯ ಬಳಿ ಕರಿಬೇವಿಗೆ ಉಪ್ಪು, ಮೆಣಸು ಹಾಕಲು ಹೇಳಿ ದೇವಸ್ಥಾನಕ್ಕೆ ಹೋದರು. ಸ್ವಲ್ಪ ಹೊತ್ತಿನ ನಂತರ ಪುಟ್ಟ ಸೊಸೆ ಕರಿಬೇವಿಗೆ ಉಪ್ಪು, ಮೆಣಸು ಹಾಕಿ ಯಾವುದೋ ಕೆಲಸದಲ್ಲಿ ನಿರತಳಾಗುತ್ತಾಳೆ.

ಸ್ವಲ್ಪ ಸಮಯದ ನಂತರ ಹಿರಿ ಸೊಸೆ ಬಂದು ಮೇಲೋಗರಕ್ಕೆ ಉಪ್ಪು ಹಾಕಿದ್ದಾರೋ ಇಲ್ಲವೋ ಎಂದು ಅನುಮಾನಿಸಿ ಕರಿಬೇವಿಗೆ ಖಾರ, ಉಪ್ಪು ಹಾಕುತ್ತಾಳೆ. ನಂತರ ಅತ್ತೆ ಬಂದು ಸೊಸೆಯರು ಉಪ್ಪು ಹಾಕಿದ್ದರೋ ಇಲ್ಲವೋ ಎಂದು ತಾನು ಕೂಡ ಉಪ್ಪು ಹಾಕುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಸಾಂಬಾರ್ ತುಂಬಾ ಖಾರವಾಗಿದೆ ಎಂದು ಅರಿತ ಆ ವ್ಯಕ್ತಿ ದರಿದ್ರ ದೇವತೆ ಮನೆಗೆ ಪ್ರವೇಶಿಸಿದ್ದಾಳೆಂದು ಅರ್ಥಮಾಡಿಕೊಳ್ಳುತ್ತಾನೆ. ಅವನು ಏನು ಮಾತನಾಡದೆ ಊಟ ಮಾಡುತ್ತಾನೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿಯ ಹಿರಿಯ ಮಗನೂ ಊಟದ ಸಮಯದಲ್ಲಿ ಉಪ್ಪು ಜಾಸ್ತಿಯಿರುವುದನ್ನು ಅರಿತು ತಂದೆ ತಿಂದಿದ್ದಾರೆಯೇ ಎಂದು ಹೆಂಡತಿಯನ್ನು ಕೇಳಿದನು, ತಿಂದಿದ್ದಾರೆ ಎಂದು ಹೆಂಡತಿ ಉತ್ತರಿಸುತ್ತಾಳೆ. ಅಪ್ಪ ಏನನ್ನೂ ಹೇಳದೆ ತಿಂದು ಹೊರಟಾಗ ನಾನೇಕೆ ಮಾತನಾಡಲಿ, ಎಂದು ಆತನು ಏನೂ ಹೇಳದೆ ತಿಂದು ಹೊರಟು ಹೋಗುತ್ತಾರೆ. ಆ ಮನೆಯಲ್ಲಿ ಎಲ್ಲರೂ ಊಟ ಮಾಡುತ್ತಾರೆ, ಆದರೆ ಅಡುಗೆ ಬಗ್ಗೆ ಮಾತನಾಡುವುದಿಲ್ಲ. ಆ ದಿನ ಸಾಯಂಕಾಲ ದರಿದ್ರ ದೇವಿಯು ಆ ವ್ಯಕ್ತಿಯ ಬಳಿಗೆ ಬಂದು ನಾನು ಇಲ್ಲಿ ಇರಲಾರೆ ಎಂದು ಹೇಳಿ ಹೊರಟು ಹೋಗುತ್ತಾರೆ.

ಉಪ್ಪು ಬೆರೆಸಿದ ತಿಂಡಿ ತಿಂದರೂ ನಿಮ್ಮ ನಡುವೆ ಜಗಳ ಆಗಲಿಲ್ಲ, ನೀವು ಪ್ರೀತಿಯಲ್ಲಿ ಒಂದಾಗಿದ್ದೀರಿ. ನಾನು ಅಂತಹ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿ ದರಿದ್ರ ದೇವತೆ ಹೊರಟು ಹೋಗುತ್ತಾರೆ. ದರಿದ್ರ ದೇವತೆ ಹೋದ ನಂತರ, ಅವರ ಮನೆ ಮತ್ತೆ ಲಕ್ಷ್ಮಿ ದೇವಿಯ ವಾಸಸ್ಥಾನವಾಗುತ್ತದೆ. ಹಾಗಾಗಿ ನಮ್ಮ ಪುರಾಣಗಳು, ಶಾಸ್ತ್ರಗಳು ಮತ್ತು ಈಗ ನೀವು ಕೇಳಿರುವ ಕಥೆ ಹೇಳುವ ಪ್ರಕಾರ ಪ್ರೀತಿ ಮತ್ತು ಶಾಂತಿಯು ತುಂಬಿರುವ ಮನೆ ಲಕ್ಷ್ಮಿಯ ಮನೆಯಾಗಿದೆ. ಆದ್ದರಿಂದ ಯಾವಾಗಲೂ ಪ್ರೀತಿಯಿಂದಿರಿ. ಲಕ್ಷ್ಮಿ ದೇವಿ ಮನೆಗೆ ಬರುತ್ತಿರುವ ಲಕ್ಷಣಗಳೇನು ಎಂಬುದನ್ನು ಈಗ ತಿಳಿಸುತ್ತೇವೆ.. ಮನೆಯಲ್ಲಿ ಕಪ್ಪು ಇರುವೆಗಳು ಏಕಾಏಕಿ ಗುಂಪು ಗುಂಪಾಗಿ ಏನಾದರೂ ತಿನ್ನಲು ಆರಂಭಿಸಿದರೆ ಅದು ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಹಕ್ಕಿ ಗೂಡು ಕಟ್ಟುವುದು ಕೂಡ ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಕಾಣಿಸಿಕೊಳ್ಳುವುದು ಕೂಡ ಲಕ್ಷ್ಮಿ ದೇವಿಯ ಆಗಮನದ ಸಂಕೇತ ಎಂದು ನಮ್ಮ ಪುರಾಣದಲ್ಲಿ ಹಿರಿಯರು ಹೇಳುತ್ತಾರೆ. ದೀಪಾವಳಿಯ ದಿನ ತುಳಸಿ ಗಿಡದ ಸುತ್ತಲೂ ಹಲ್ಲಿಯನ್ನು ನೋಡುವುದು ಶುಭ ಸಂಕೇತವೆಂದು ಹೇಳಲಾಗುತ್ತದೆ ಮತ್ತು ತುಳಸಿ ಗಿಡದ ಸುತ್ತಲೂ ಅನೇಕ ಹಲ್ಲಿಗಳನ್ನು ಒಂದೇ ಸಮಯದಲ್ಲಿ ನೋಡುವುದು ಲಕ್ಷ್ಮೀದೇವಿ ಆಗಮನದ ಸಂಕೇತ ಎಂದು ಹೇಳಲಾಗುತ್ತದೆ. ತುಳಸಿ ಗಿಡದ ಬಳಿ ಒಂದೇ ಒಂದು ಹಲ್ಲಿ ಕಂಡರೆ ಆರ್ಥಿಕ ಲಾಭವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದಲ್ಲದೆ, ನಿಮ್ಮ ಬಲಗೈ ನಿರಂತರವಾಗಿ, ಇಚ್ಚಿನ್ಗ್ ಆಗುತ್ತಿದ್ದರೆ, ಇದು ಕೂಡ ಹಣದ ಉತ್ತಮ ಸಂಕೇತವಾಗಿದೆ ಎಂದು ನಂಬಲಾಗಿದೆ. ಮಲಗುವಾಗ ಕನಸಿನಲ್ಲಿ ಪೊರಕೆ, ಗೂಬೆ, ಆನೆ, ಮುಂಗುಸಿ, ಶಂಖ, ಹಲ್ಲಿ, ಹಾವು, ಗುಲಾಬಿ ಮುಂತಾದವುಗಳನ್ನು ಕಂಡರೆ. ಇದನ್ನು ಸಂಪತ್ತಿನ ಸಂಕೇತ ಎಂದೂ ಪರಿಗಣಿಸಲಾಗುತ್ತದೆ. ಅದೇ ರೀತಿ ಲಕ್ಷ್ಮಿ ದೇವಿ ಬರುವ ಮನೆಯು ಶಾಂತ ಮತ್ತು ಸ್ವಚ್ಛವಾಗಿರಬೇಕು.

Get real time updates directly on you device, subscribe now.