ಬುದ್ಧ ವಿಗ್ರಹವನ್ನು ಮನೆಯ ಅದೊಂದು ಜಾಗದಲ್ಲಿ ಇಟ್ಟು ನೋಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಎಲ್ಲಿ ಇಡಬೇಕು ಗೊತ್ತೇ??
ಮನೆಯ ಮುಂಬಾಗಿಲಿನ ಬಳಿ ಬುದ್ಧನ ವಿಗ್ರಹ ಇಟ್ಟರೆ, ಮನೆಗೆ ಬರುವ ನೆಗಟಿವ್ ಎನರ್ಜಿಯನ್ನು ತಡೆಯುತ್ತದೆ ಎಂದು ನಂಬಿಕೆ ಇದೆ. ಅಷ್ಟೇ ಅಲ್ಲದೆ, ಬುದ್ಧನ ವಿಗ್ರಹವನ್ನು ಅಲ್ಲಿ ಇಡುವುದರಿಂದ ಧನ್ಯವಾಗುತ್ತದೆ ಹಾಗೂ ಸುಂದರವಾಗಿ ಸಹ ಕಾಣುತ್ತದೆ. ಬುದ್ಧನ ವಿಗ್ರಹವನ್ನು ಮುಂಬಾಗಿಲಿನಿಂದ ಮೂರರಿಂದ ನಾಲ್ಕು ಅಡಿ ದೂರದಲ್ಲಿ ಇಡಬೇಕು. ಬುದ್ಧನ ಪ್ರತಿಮೆಯನ್ನು ನೆಲದ ಮೇಲೆ ಇಡಬಾರದು, ವಾಸ್ತು ಶಾಸ್ತ್ರದ ಪ್ರಕಾರ ಬುದ್ಧನ ವಿಗ್ರಹ ಮೂರ್ತಿಯನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳ್ಳೆಯದು, ಇದರಿಂದ ಮನೆ ಶಾಂತಿಯುತವಾಗಿರುತ್ತದೆ. ಬುದ್ಧನ ವಿಗ್ರಹವನ್ನು ಸ್ವಚ್ಛವಾಗಿರುವ ಟೇಬಲ್ ಅಥವಾ ಶೆಲ್ಫ್ ಮೇಲೆ ಇರಿಸಿ. ಬುದ್ಧನ ಮೂರ್ತಿಯನ್ನು ಲಿವಿಂಗ್ ರೂಮ್ ನಲ್ಲಿ ಇಟ್ಟರೆ ಶಾಂತಿ ಇರುತ್ತದೆ.
ಬುದ್ಧನ ಪ್ರತಿಮೆಯನ್ನು ನಿಮ್ಮ ಮನೆಯ ಗಾರ್ಡನ್ ನಲ್ಲಿ ಇಡಬಹುದು, ಬುದ್ಧ ಧ್ಯಾನ ಮಾಡುತ್ತಿರುವ ಪ್ರತಿಮೆ ಇಡಬೇಕು, ಗಾರ್ಡನ್ ನಲ್ಲಿ ಪಕ್ಕಕ್ಕೆ ಇರಿಸಿ, ಇದರಿಂದ ನಿಮಗೆ ಒಳ್ಳೆಯ. ಭಾವನೆ ಬರುತ್ತದೆ. ಬುದ್ಧನ ವಿಗ್ರಹ ಇಡುವಾಗ ಒಳ್ಳೆಯ ಪರಿಮಳ ಬರುವ ಮೇಣದ ಬತ್ತಿ ಹಚ್ಚಬಹುದು, ದೀಪ ಬೆಳಗಿಸಬಹುದು, ಇದು ಶಾಂತವಾಗಿರುತ್ತದೆ. ಪೂಜೆ ಕೋಣೆಯಲ್ಲಿ ಬುದ್ಧನ ಮೂರ್ತಿ ಇಟ್ಟರೆ, ಮನೆಯಲ್ಲಿ ಧನಾತ್ಮಕ ಭಾವನೆ ಹೆಚ್ಚಾಗುತ್ತದೆ. ಧ್ಯಾನ ಮಾಡುವ ಕಡೆ ಬುದ್ಧನ ಪ್ರತಿಮೆ ಇಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇಟ್ಟರೆ, ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ, ಶಾಂತಿ ನೆಲೆಸಿರುತ್ತದೆ. ಬುದ್ಧನ ವಿಗ್ರಹಗಳಲ್ಲಿ ಅನೇಕ ವಿಧವಿದೆ.
ನಿಮ್ಮ ಮಕ್ಕಳಿಗೆ ಓದಿನ ಕಡೆಗೆ ಆಸಕ್ತಿಯ ಹೆಚ್ಚಬೇಕು ಎಂದು ಬಯಸಿದರೆ ಅವರ ರೂಮ್ ನಲ್ಲಿ ಒಂದು ಸಣ್ಣ ಬುದ್ಧನ ತಲೆಯ ಭಾಗ ಇರುವ ಮೂರ್ತಿ ಇಡಿ, ಇದರಿಂದ ಓದುವ ಕಡೆಗೆ ಏಕಾಗ್ರತೆ ಹೆಚ್ಚುತ್ತದೆ. ಬುದ್ಧನ ಪ್ರತಿಮೆ ಅಥವಾ ಲಾಫಿಂಗ್ ಬುದ್ಧನನ್ನು ಪುಸ್ತಕದ ಕಪಾಟಿನಲ್ಲಿ ಅಥವಾ ಗಾಜಿನ ಕಪಾಟಿನಲ್ಲಿ ಇಡಬಹುದು. ಆದರೆ ಲಾಫಿಂಗ್ ಬುದ್ಧನ ಪ್ರತಿಮೆ ಸಂತೋಷ ತರುತ್ತದೆ ಮತ್ತು ಶಾಂತತೆಯನ್ನು ಕೂಡ ತರುತ್ತದೆ. ಆದ್ದರಿಂದ ಅವುಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದು. ಆದರೆ ಪುಸ್ತಕಗಳನ್ನು ಶೆಲ್ಫ್ ನಲ್ಲಿ ಇರಿಸುವಾಗ, ಬುದ್ಧನ ಪ್ರತಿಮೆ ಪೂರ್ವಕ್ಕೆ ಮುಖ ಮಾಡುವಂತೆ ನೋಡಿಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ಬುದ್ಧನ ಮೂರ್ತಿಗಳನ್ನು ಈ ರೀತಿ ಇಡುವುದರಿಂದ ಮನೆಯಲ್ಲಿ ಇರುವಸ್ವರೂ ನೆಮ್ಮದಿಯಿಂದ ಬಾಳುತ್ತಾರೆ ಹಾಗು ಅವರ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.