ವಿಚ್ಚೇದನ ಪಡೆದರು ಕಡಿಮೆಯಾಗಿಲ್ಲ ಪ್ರೀತಿ: ಸಮಂತಾ ಗಾಗಿ ಪ್ರತಿ ದಿನವೂ ಆ ಕೆಲಸ ಮಾಡುತ್ತಿರುವ ನಾಗ ಚೈತನ್ಯ. ಏನು ಗೊತ್ತೇ??

29

Get real time updates directly on you device, subscribe now.

ನಾಗಚೈತನ್ಯ ಮತ್ತು ಸಮಂತಾ ಟಾಲಿವುಡ್ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದು ಹೆಸರು ಪಡೆದುಕೊಂಡವರು. ಈ ಜೋಡಿಯ ಅನ್ಯೋನ್ಯತೆ ಮತ್ತು ಪ್ರೀತಿ ನೋಡಿ ಆ ಕಾಲಕ್ಕೆ ಅಸೂಯೆ ಮೂಡಿತೋ ಏನೋ, ಈ ಜೋಡಿಯನ್ನು ಬಹಳ ಬೇಗ ಬೇರೆ ಬೇರೆ ಮಾಡಿಬಿಟ್ಟಿತು. ಮದುವೆಯಾದ ನಾಲ್ಕು ವರ್ಷಕ್ಕೆ ಈ ಜೋಡಿ ವಿಚ್ಛೇದನ ಪಡೆದು ಎಲ್ಲರಿಗು ಶಾಕ್ ನೀಡಿದರು, ಇವರಿಬ್ಬರು ವಿಚ್ಛೇದನ ಪಡೆಯಲು ಕಾರಣ ಏನು ಎನ್ನುವುದು ಇಂದಿಗೂ ಯಾರಿಗೂ ತಿಳಿದುಬಂದಿಲ್ಲ. ಇವರಿಬ್ಬರ ವಿಚ್ಛೇದನದ ಬಗ್ಗೆ ಹಲವು ಗಾಸಿಪ್ ಗಳು ಕೇಳಿ ಬಂದಿದ್ದರು ಸಹ, ಅಸಲಿ ಕಾರಣ ಏನು ಎನ್ನುವುದನ್ನು ನಾಗಚೈತನ್ಯ ಮತ್ತು ಸಮಂತಾ ಬಿಟ್ಟುಕೊಟ್ಟಿಲ್ಲ.

ಸಮಂತ ಅವರು ಆಗಾಗ ಚೈತನ್ಯ ಅವರ ಮೇಲಿನ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ ಆದರೆ ಚೈತನ್ಯ ಅವರು ಮಾತ್ರ, ಬಹಳ ಕೂಲ್ ಆಗಿದ್ದಾರೆ, ಸಮಂತಾ ಹ್ಯಾಪಿ ನಾನು ಹ್ಯಾಪಿ ಎಂದು ಹೇಳುತ್ತಾ ಕೂಲ್ ಆಗಿಯೇ ಎಲ್ಲಾ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸಮಂತಾ ಅವರು ಎಷ್ಟೇ ಕೋಪ ತೋರಿಸುತ್ತಿದ್ದರು ಸಹ, ಚೈತನ್ಯ ಅವರು ಮಾತ್ರ ಸಮಂತಾ ಅವರಿಗಾಗಿ ಸಾಕಷ್ಟು ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದೆ. ಈಗಲೂ ಕೂಡ ಚೈತನ್ಯ ಅವರು ಸಮಂತಾ ಅವರಿಗೆ ತುಂಬಾ ಇಷ್ಟ ಆಗಿರುವ ಅದೊಂದು ಕೆಲಸವನ್ನು ಮಾಡಿಕೊಂಡೆ ಹೋಗುತ್ತಿದ್ದಾರಂತೆ. ಆ ಕೆಲಸ ಏನು? ಸಮಂತಾ ಅವರಿಗಾಗಿ ಚೈತನ್ಯ ಏನು ಮಾಡುತ್ತಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಸಮಂತಾ ಅವರಿಗೆ ಗಿಡಗಳು ಮತ್ತು ಗ್ರೀನರಿ ಅಂದ್ರೆ ತುಂಬಾ ಇಷ್ಟ. ಚೈತನ್ಯ ಅವರ ಮನೆಯಲ್ಲಿ ಇದ್ದಾಗ ಸಮಂತಾ ಅವರು ಟೆರೇಸ್ ಗಾರ್ಡನಿಂಗ್ ಮಾಡುತ್ತಿದ್ದರು. ಈಗ ಸಮಂತಾ ಅವರು ಹೋದ ಬಳಿಕ ಚೈತನ್ಯ ಅವರು ಆ ಗಿಡಗಳನ್ನು ಕಾಪಾಡಿಕೊಂಡು ನೋಡಿಕೊಳ್ಳುತ್ತಿದ್ದಾರೆ. ತಪ್ಪಿಸದೆ ಗಿಡಗಳಿಗೆ ನೀರು ಹಾಕುತ್ತಾ, ಅವುಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾ, ಬೆಳೆಸುತ್ತಿದ್ದಾರಂತೆ. ಸಮಂತಾ ಅವರ ನೆನಪಿಗಾಗಿ ಅವುಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಏನೇ ಆದರು ಚೈತನ್ಯ ಅವರ ಸ್ವಭಾವ ಎಂಥದ್ದು ಎಂದು ಈ ಮೂಲಕ ತಿಳಿದುಬಂದಿದೆ.

Get real time updates directly on you device, subscribe now.