ಬಿಗ್ ಬಾಸ್ ಮನೆಯಲ್ಲಿ ಗರಿಗೆದರಿದ ಲೆಕ್ಕಾಚಾರ. ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಮದ್ಯೆ ಕಾವ್ಯಶ್ರೀ ಬರಲು ಹಿಂದಿರುವ ಕಾರಣ ಏನು ಗೊತ್ತೇ?
ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಇಂದ ಜೋಡಿಹಕ್ಕಿಗಳಾಗಿ ಕಾಣಿಸಿಕೊಂಡ ಸಾನ್ಯಾ ಮತ್ತು ರೂಪೇಶ್ ಟಿವಿ ಸೀಸನ್ ನಲ್ಲಿ ಸಹ ಜೊತೆಯಾಗಿದ್ದಾರೆ. ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದುಕೊಳ್ಳುತ್ತಿದ್ದವರು, ಟಿವಿ ಸೀಸನ್ ನಲ್ಲಿ ಮೊದಲ ವಾರ ಬಿಗ್ ಬಾಸ್ ನೀಡಿದ ಜೋಡಿ ಟಾಸ್ಕ್ ಇಂದ ಬೇರೆಯಾಗಿದ್ದರು. ರೂಪೇಶ್ ತಮ್ಮ ಜೋಡಿಯಾಗಿ ಕಾವ್ಯಶ್ರೀ ಗೌಡ ಅವರನ್ನು ಆಯ್ಕೆಮಾಡಿಕೊಂಡಿದ್ದರು. ಇಬ್ಬರು ಬೆಲ್ಟ್ ಹಾಕಿ ಜೊತೆಯಾಗೆ ಇರಬೇಕಿದ್ದ ಕಾರಣ, ರೂಪೇಶ್ ಮತ್ತು ಕಾವ್ಯ ಸದಾ ಜೊತೆಯಾಗಿದ್ದರು. ಇತ್ತ ಸಾನ್ಯಾ ರೂಪೇಶ್ ತನಗೆ ಸಮಯ ಕೊಡುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದರು.
ಕಾವ್ಯಶ್ರೀ ಗೌಡ ಸಹ ಇವರಿಬ್ಬರ ನಡುವೆ ಬಂದು, ರೂಪೇಶ್ ಅವರಿಗೆ ನಾನು ನಿಮ್ಮ ಬೆಸ್ಟ್ ಫ್ರೆಂಡ್ ಎಂದೆಲ್ಲಾ ಹೇಳುತ್ತಿದ್ದರು. ಈ ಜೋಡಿ ಟಾಸ್ಕ್ ಇಂದ ಸಾನ್ಯಾ ಅಯ್ಯರ್ ಉರಿಕೊಂಡಿದ್ದು ಎಲ್ಲರಿಗು ಕಾಣಿಸಿತ್ತು. ಅಷ್ಟಕ್ಕು ಸಾನ್ಯಾ ರೂಪೇಶ್ ನಡುವೆ ಕಾವ್ಯಶ್ರೀ ಗೌಡ ಯಾಕೆ ಬಂದರು ಎನ್ನುವ ಕುತೂಹಲ ಸಹ ಎಲ್ಲರಿಗು ಇತ್ತು. ಅದಕ್ಕೆ ಉತ್ತರ ಸಿಕ್ಕಿದ್ದು, ಇದಕ್ಕೆಲ್ಲ ಕಾರಣ ಆರ್ಯವರ್ಧನ್ ಗುರುಜಿ ಎಂದು ವೀಕೆಂಡ್ ಎಪಿಸೋಡ್ ನಲ್ಲಿ ಗೊತ್ತಾಗಿದೆ. ಆರ್ಯವರ್ಧನ್ ಅವರು ತಮ್ಮ ಪಾರ್ಟ್ನರ್ ಆಗಿರುವ ದರ್ಶ್ ಅವರಿಗೆ, ಇಲ್ಲಿ ಎಲ್ಲರಿಗಿಂತ ಸುಂದರವಾಗಿರೋದು ನೀನು, ಹುಡುಗಿಯರ ಹಿಂದೆ ನೀನು ಹೋಗಬೇಡ, ಹುಡುಗಿಯರೆ ನಿನ್ನ ಹಿಂದೆ ಬರುತ್ತಾರೆ. ಒಬ್ಬ ಹುಡುಗಿಯನ್ನ ಕ್ಯಾಚ್ ಹಾಕೋ, ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಬಹುದು ಎಂದು ಸಲಹೆ ನೀಡಿದ್ದಾರೆ.
ಇನ್ನು ಕಾವ್ಯಶ್ರೀ ಗೌಡ ಅವರಿಗು ಸಹ, ಸಾನ್ಯಾ ರೂಪೇಶ್ ಜೊತೆಯಾಗಿ ಇರೋದಕ್ಕೆ ಬಿಡಬೇಡ. ಅವರಿಬ್ಬರ ಮಧ್ಯೆ ನೀನು ಇರು, ರೂಪೇಶ್ ನನ್ನು ಬಿಟ್ಟುಕೊಡಬೇಡ, ನೀನು ಅವರಿಬ್ಬರು ದೂರ ಇರುವ ಹಾಗೆ ನೋಡ್ಕೋ, ಆಗ ಚೆನ್ನಾಗಿರುತ್ತೆ, ಸಾನ್ಯಾಗೆ ಉರ್ಸು ಎಂದು ಹೇಳಿಕೊಟ್ಟಿದ್ದರು. ಈ ವಿಷಯವನ್ನು ಸ್ವತಃ ಕಾವ್ಯ ವೀಕೆಂಡ್ ಎಪಿಸೋಡ್ ನಲ್ಲಿ ತಿಳಿಸಿದ್ದು, ಮನೆಯ ಇತರ ಸ್ಪರ್ಧಿಗಳು ಆರ್ಯವರ್ಧನ್ ಅವರು ಹೇಳಿಕೊಟ್ಟಿರುವ ಮಾತುಗಳನ್ನು ಕೇಳಿ ಬಿದ್ದುಬಿದ್ದು ನಕ್ಕಿದ್ದಾರೆ, ಸಾನ್ಯಾ ಸಹ ಚಪ್ಪಾಳೆ ಹೊಡೆದು ಕಾವ್ಯ ಯಾಕೆ ಹೀಗೆ ಮಾಡುತ್ತಾಳೆ ಎಂದುಕೊಂಡಿದ್ದೇ, ಈಗ ಗೊತ್ತಾಯಿತು ಎಂದಿದ್ದಾರೆ ಸಾನ್ಯಾ.