ಕಾಂತಾರ ಸಿನಿಮಾ ಮಾಡುವ ಮುನ್ನ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಹೋಗಿದ್ದು ಯಾಕೆ?? ಅಲ್ಲಿಗೆ ಹೋಗಲೇಬೇಕಾದದ್ದು ಯಾಕೆ ಗೊತ್ತೇ??
ರಿಷಬ್ ಶೆಟ್ಟಿ ಅವರು ಎಂಥಹ ಕಲಾವಿದ ಎಂದು ಈಗಾಗಲೇ ಕನ್ನಡ ಚಿತ್ರರಂಗ ಕಂಡಿದೆ. ಹೀರೋ, ಬೆಲ್ ಬಾಟಮ್, ಗರುಡ ಗಮನ ವೃಷಭ ವಾಹನ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ, ಹಾಗು ಕಿರಿಕ್ ಪಾರ್ಟಿ ಅಂತಹ ಸಿನಿಮಾಡ ನಿರ್ದೇಶಕನಾಗಿ ರಿಷಬ್ ಯಶಸ್ಸು ಪಡೆದಿದ್ದಾರೆ. ಇದೀಗ ಕಾಂತಾರ ಸಿನಿಮಾ ಮೂಲಕ ಮತ್ತೊಂದು ವಿಭಿನ್ನವಾದ ಮತ್ತು ಅದ್ಭುತವಾದ ಕಥೆಯ ಮೂಲಕ ಕನ್ನಡ ಸಿನಿಪ್ರಿಯರ ಎದುರು ಬಂದಿದ್ದಾರೆ ರಿಷಬ್. ಕಾಂತಾರ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಅದ್ಭುತವಾಗಿ ಯಶಸ್ಸು ಕಾಣುತ್ತಿದೆ.
ಸಿನಿಮಾ ನೋಡಿದ ಸಿನಿಪ್ರಿಯರು ಇಂಥದ್ದೊಂದು ಸಿನಿಮಾವನ್ನು ಇದುವರೆಗು ನೋಡಿಲ್ಲ ಎನ್ನುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕರಾವಳಿ ಭಾಗದ ಭೂತ ಕೋಲ, ದೈವಾರಾಧನೆ, ದೈವ ನರ್ತನೆ ಇವುಗಳ ಬಗ್ಗೆ ತೋರಿಸಲಾಗಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಸಹ ದೈವ ನರ್ತನ ಮಾಡಿರುವುದು ಬಹಳ ವಿಶೇಷವಾಗಿದೆ. ಕಾಂತಾರ ಸಿನಿಮಾ ಬಗ್ಗೆ ಹಲವು ರೋಚಕ ವಿಚಾರಗಳಿವೆ, ಅವುಗಳಲ್ಲಿ ಒಂದು ವಿಚಾರ ಏನೆಂದರೆ, ಕಾಂತಾರ ಸಿನಿಮಾ ಚಿತ್ರೀಕರಣ ಶುರು ಆಗುವುದಕ್ಕಿಂತ ಮೊದಲು ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಂದಿದ್ದರು, ಅಷ್ಟಕ್ಕೂ ರಿಷಬ್ ಅವರು ಈ ರೀತಿ ಮಾಡಿದ್ದು ಯಾಕೆ? ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದು ಯಾಕೆ? ತಿಳಿಸುತ್ತೇವೆ ನೋಡಿ..
ಧರ್ಮಸ್ಥಳಕ್ಕೆ ಹೋಗಿಬಂದಿದ್ದರ ಹಿಂದಿನ ಕಾರಣವನ್ನು ಸ್ವತಃ ರಿಷಬ್ ಅವರೇ ಕಾಂತಾರ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ತಿಳಿಸಿದ್ದಾರೆ. ರಿಷಬ್ ಅವರು ದೈವ ನರ್ತಕನ ಪಾತ್ರ ಮಾಡಬೇಕಿದ್ದ ಕಾರಣ, ಅದನ್ನು ಒಂದು ಪ್ರದೇಶದ ಜನ ಮಾತ್ರ ಮಾಡಲಿದ್ದು, ಅವರ ಬಳಿ ಹೋಗಿ ಸಿನಿಮಾದಲ್ಲಿ ಹೇಗೆ ಮಾಡಬೇಕು ಏನನ್ನು ಪಾಲನೆ ಮಾಡಬೇಕು ಎಂದು ಕೇಳಿಕೊಂಡರಂತೆ, ಆಗ ಅವರು, ಏನು ಆಗೋದಿಲ್ಲ ಧರ್ಮಸ್ಥಳಕ್ಕೆ ಹೋಗಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಮಾಡಿಕೊಂಡು ಬಾ, ಇದೆಲ್ಲದರ ಮೂಲ ಇರುವುದು ಅಲ್ಲಿ ಎಲ್ಲಾ ಒಳ್ಳೆದಾಗುತ್ತೆ ಎಂದಿದ್ದರಂತೆ. ಅದೇ ರೀತಿ ರಿಷಬ್ ಅವರು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ, ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿ ಈ ರೀತಿ ಕಥೆ ಇರುವ ಸಿನಿಮಾ ಮಾಡುತ್ತಿರುವುದಾಗಿ ಹೇಳಿದಾಗ ವೀರೇಂದ್ರ ಹೆಗ್ಡೆ ಅವರು ಸಹ, ಏನು ಆಗೋದಿಲ್ಲ ಇಲ್ಲಿಗೆ ಬಂದು ಹೋಗಿದ್ಯಲ್ಲ ಎಲ್ಲವೂ ಒಳ್ಳೆಯದಾಗುತ್ತೆ ಎಂದು ಹೇಳಿದ್ದರಂತೆ. ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ರಿಷಬ್.