ನಿನ್ನೆಯ ಪಂದ್ಯದಲ್ಲಿ ಕೊಹ್ಲಿ, ಸೂರ್ಯ ಬಿಡಿ, ರೋಹಿತ್ ಕೂಡ ಬರೆದರೂ ವಿಶ್ವದಾಖಲೆ. ಏನು ಗೊತ್ತೇ?? ಸಾಧನೆ ಮಾಡಿದ ಮೊದಲ ಕ್ರಿಕೆಟಿಗ
ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಅವರು ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 400 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಆಟಗಾರ ಎನ್ನಿಸಿಕೊಂಡಿದ್ದಾರೆ ರೋಹಿತ್ ಶರ್ಮಾ. ಎಂಎಸ್ ಧೋನಿ, ದಿನೇಶ್ ಕಾರ್ತಿಕ್, ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅವರು ಮಾತ್ರ 350 ಕ್ಕಿಂತ ಹೆಚ್ಚು ಟಿ20 ಪಂದ್ಯಗಳನ್ನಾಡಿರುವ ಆಟಗಾರರಾಗಿದ್ದಾರೆ. ರೋಹಿತ್ ಅವರು ಪುರುಷರ ಕ್ರಿಕೆಟ್ ನಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದ ಬ್ಯಾಟ್ಸ್ಮನ್ ಎಂದು ದಾಖಲೆ ಬರೆದಿದ್ದಾರೆ. ಪಾಕಿಸ್ತಾನ್ ಆಟಗಾರ ಶೋಯೆಬ್ ಅಕ್ತರ್ ಅವರಿಗಿಂತ 16 ಪಂದ್ಯಗಳನ್ನು ಹೆಚ್ಚಾಗಿ ಆಡಿದ್ದಾರೆ ರೋಹಿತ್. ಈ ತಿಂಗಳು ಶುರುವಾಗಲಿರುವ ಟಿ20 ವರ್ಲ್ಡ್ ಕಪ್ ನಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಅವರು ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಅತಿಹೆಚ್ಚು ಟಿ20 ಪಂದ್ಯಗಳನ್ನಾಡಿದ ಭಾರತದ ಆಟಗಾರರು ಯಾರು ಎಂದು ನೋಡುವುದಾದರೆ, ರೋಹಿತ್ ಶರ್ಮಾ 400, ದಿನೇಶ್ ಕಾರ್ತಿಕ್ 368, ಎಂಎಸ್ ಧೋನಿ 361, ವಿರಾಟ್ ಕೋಹ್ಲಿ 353 ಪಂದ್ಯಗಳನ್ನಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ಯಾಪ್ಟನ್ ಕೀರನ್ ಪೋಲಾರ್ಡ್ ಅವರಃ 614 ಟಿ20 ಪಂದ್ಯಗಳನ್ನಾಡಿ, ಅತಿಹೆಚ್ಚು ಟಿ20 ಪಂದ್ಯಗಳನ್ನಾಡಿರುವ ಆಟಗಾರ ಎನ್ನಿಸಿಕೊಂಡಿದ್ದಾರೆ. ಡ್ವೇನ್ ಬ್ರಾವೋ ಅವರು 556 ಪಂದ್ಯಗಳನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ್ ಆಲ್ ರೌಂಡರ್ ಶೋಯೆಬ್ ಅಕ್ತರ್ ಅವದು 481 ಪಂದ್ಯಗಳನ್ನಾಡಿ, ಏಷಿಯಾದಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನ್ನುವ ಖ್ಯಾತಿ ಹೊಂದಿದ್ದಾರೆ.
ಇಷ್ಟೇ ಅಲ್ಲದೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿ ಇನ್ನಷ್ಟು ದಾಖಲೆಗಳಿವೆ, 178 ಸಿಕ್ಸರ್ ಗಳನ್ನು ಭಾರಿಸಿ, ಮಾರ್ಟಿನ್ ಗಪ್ಟಿಲ್ ಅವರ ಹೆಸರಿನಲ್ಲಿರುವ ದಾಖಲೆ ಮುರಿದಿದ್ದಾರೆ. ಐಪಿಎಲ್ ನಲ್ಲಿ ಸಹ ರೋಹಿತ್ ಶರ್ಮಾ ಅವರು 227 ಪಂದ್ಯಗಳನ್ನಾಡಿದ್ದು, 5800 ಕ್ಕಿಂತ ಹೆಚ್ಚು ರನ್ಸ್ ಗಳಿಸಿದ್ದಾರೆ, ಮುಂಬೈ ತಂಡದ ಕ್ಯಾಪ್ಟನ್ ಆಗಿ, 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ರೋಹಿತ್, ಇದು ಕೂಡ ಒಂದು ದಾಖಲೆಯಾಗಿದೆ. ನಿನ್ನೆ ನಡೆದ ಇಂಡಿಯಾ ವರ್ಸಸ್ ಸೌತ್ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 43 ರನ್ ಗಳಿಸಿದರು. ಮುಂಬರುವ ಪಂದ್ಯಗಳಲ್ಲಿ ಇನ್ನು ಎಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.