ಮದುವೆ ವೇದಿಕೆಯಲ್ಲಿಯೇ ಭರ್ಜರಿ ಡಾನ್ಸ್ ಮಾಡಿದ್ದ ಹೆಣ್ಣು. ಶಾಕ್ ಆದ ವರ. ಹೇಗಿದೆ ಗೊತ್ತೇ ವೈರಲ್ ಡಾನ್ಸ್ ವಿಡಿಯೋ. ಪಾಪ ಹುಡುಗನ ಪಾಡು.
ಬುಲೆಟ್ ಬಂಡಿ ಸಾಂಗ್ ಹೊರಬಂದಿದ್ದೆ ತಡ, ಯಾವುದೇ ಸಮಾರಂಭ ಇವೆಂಟ್ ಗಳು, ಎಲ್ಲಾ ಕಡೆ ಇದೇ ಹಾಡು ಕೇಳಿಬರುತ್ತಿದೆ. ಇನ್ನು ಸ್ವಲ್ಪ ದಿನ ಈ ಹಾಡು ಕೇಳಿದರೆ ಬೋರ್ ಆಗುವುದು ಖಂಡಿತ. ಆದರೆ ಎಲ್ಲಾ ಜನರಿಗೂ ಬುಲೆಟ್ ಬಂಡಿ ಹಾಡು ಬಹಳ ಇಷ್ಟವಾಗಿದೆ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ತೆಲುಗು ರಾಜ್ಯದಲ್ಲಿ ಒಂದು ಕಾಲದಲ್ಲಿ ಜಾನಪದ ಹಾಡುಗಳು ಬಹಳ ಫೇಮಸ್ ಆಗಿದ್ದವು, ಯಾವುದೇ ಸಮಾರಂಭ ಇದ್ದರು, ಜಾನಪದ ಹಾಡುಗಳನ್ನು ಹಾಕುತ್ತಿದ್ದರು. ಆದರೆ ಈಗ ಜನರಿಗೆ ಬುಲೆಟ್ ಬಂಡಿ ಹಾಡು ಬಹಳ ಇಷ್ಟವಾಗಿದೆ. ಯಾರ ಮನೆಯಲ್ಲಿ ಶುಭ ಸಮಾರಂಭ ಇದ್ದರು ಈ ಹಾಡು ಕೇಳಿಬರುತ್ತಿದೆ. ಈಗಿನ ಕಾಲದಲ್ಲಿ ಎಲ್ಲರೂ ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಮಾಡುತ್ತಿದ್ದಾರೆ.
ಕೆಲವರು ಸಂಗೀತ ಹಾಕಿಸಿದರು, ಹೆಚ್ಚಿನ ಹಣ ಇರುವವರು ಡಿಜೆ ಸೌಂಡ್ಸ್ ಹಾಕಿಸಿ ಮದುವೆ ಸಮಾರಂಭದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಹುಡುಗಿಯರು ತಮಗೆ ಇಷ್ಟ ಆದವರನ್ನು ಇಂಪ್ರೆಸ್ ಮಾಡುವ ಸಲುವಾಗಿ ಬುಲೆಟ್ ಬಂಡಿ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿದ್ದೇವೆ. ಇನ್ನು ಮದುವೆಯ ಬಾರಾತ್ ಸಮಯದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರ ಕುಟುಂಬದವರು ಸಂತೋಷವಾಗಿ ಡ್ಯಾನ್ ಮಾಡುತ್ತಾ ಎಂಜಾಯ್ ಮಾಡುವುದನ್ನು ನೋಡಿದ್ದೇವೆ. ಆದರೆ ಈಗ ಮದುವೆ ಆಗುವ ವಧು ವರರು ಕೂಡ ಯಾರದ್ದೇ ಭಯ ಇಲ್ಲದೆ, ತಮ್ಮ ಸ್ವಇಚ್ಛೆಯಿಂದ ಮದುವೆಯಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡುತ್ತಿದ್ದೇವೆ. ಇತ್ತೀಚೆಗೆ ಒಂದು ಮದುವೆಯಲ್ಲಿ, ಮದುವೆಯ ಶಾಸ್ತ್ರಗಳು ಮುಗಿದ ನಂತರ..

ಮಧುಮಗಳು ಮಧುಮಗನಿಗೆ ನಿಜಕ್ಕೂ ಶಾಕ್ ನೀಡಿದಳು. ಬುಲೆಟ್ ಬಂಡಿ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾ, ವರನು ಇಂಪ್ರೆಸ್ ಆಗುವ ಹಾಗೆ ಮಾಡಿದಳು. ಒಂದು ಕಡೆ ಮಧುಮಗ ಮುಜುಗರ ಪಡುತ್ತಿದ್ದರೆ, ಇತ್ತ ಮಧುಮಗಳು ಆತನ ಕೈ ಹಿಡಿದು, ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡಿದ್ದಾಳೆ. ಮಧುಮಗ ಡ್ಯಾನ್ಸ್ ಮಾಡಲು ಮುಜುಗರಕ್ಕೆ ಒಳಲಾಗುತ್ತಿದ್ದರೆ, ಹುಡುಗಿ ಮಾತ್ರ ಅದರ ಬಗ್ಗೆ ಹೆಚ್ಚು ಗಮನ ನೀಡದೆ, ತನ್ನ ಪಾಡಿಗೆ ತಾನು ಎಂಜಾಯ್ ಮಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಈಗಿನ ಹುಡುಗರು ಹುಡುಗಿಯರ ಹಾಗೆ ಮತ್ತು ಹುಡುಗಿಯರು ಹುಡುಗರ ಹಾಗೆ ವರ್ತಿಸುತ್ತಾರೆ, ಇದಕ್ಕೆ ಉದಾಹರಣೆಯಾಗಿ ವಿಡಿಯೋ ಈಗ ವೈರಲ್ ಆಗಿದ್ದು, ನೀವು ಸಹ ನೋಡಿ..