ಮೂವತ್ತು ವರ್ಷ ದಾಟಿದ ಮೇಲೆ ಮದುವೆ ಮಾಡಿಕೊಂಡರೆ ನಿಜಕ್ಕೂ ಏನಾಗುತ್ತದೆ ಗೊತ್ತೇ??
ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎನ್ನುವುದು ಬಹಳ ಮುಖ್ಯವಾದ ಘಟ್ಟ. ಕೆಲವರು ಬೇಗ ಕೆಲಸಕ್ಕೆ ಸೇರಿ ಮದುವೆಯಾಗುತ್ತಾರೆ, ಇನ್ನು ಕೆಲವರು ನಿಧಾನವಾಗಿ ಕೆಲಸಕ್ಕೆ ಸೇರಿ ಮದುವೆ ಆಗುತ್ತಾರೆ. ಮದುವೆ ಮಾಡಿಕೊಳ್ಳದೆ ಇರಬೇಕು ಎಂದುಕೊಳ್ಳುವವರು ಸಹ ಒಂದಲ್ಲಾ ಒಂದು ದಿನ ಮದುವೆ ಮಾಡಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ಮದುವೆ ಮಾಡಿಕೊಳ್ಳದೆ ಇದ್ದರೇನೇ ಬೆಟರ್ ಎಂದುಕೊಳ್ಳುವವರು ಖಂಡಿತವಾಗಿ ಭವಿಷ್ಯದಲ್ಲಿ ಬೇಸರ ಮಾಡಿಕೊಳ್ಳುತ್ತಾರೆ. ಏಕೆಂದರೆ ವಯಸ್ಸಾದ ಮೇಲೆ ನಮ್ಮನ್ನು ನೋಡಿಕೊಳ್ಳಲು ತಂದೆ ತಾಯಿ ಇರುವುದಿಲ್ಲ, ಗಂಡ ಹೆಂಡತಿ ಜೊತೆಯಾಗಿ ಒಬ್ಬರನ್ನೊಬ್ಬರು ನೋಡಿಕೊಳ್ಳಬೇಕು.
ಕೆಲವರು ಓದು ಮುಗಿದ ತಕ್ಷಣವೇ ಮದುವೆಯಾಗಿ, ಮದುವೆ ಬಳಿಕ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಾರೆ. ಇನ್ನು ಕೆಲವರು ಜೀವನದಲ್ಲಿ ಮೊದಲು ಸೆಟ್ಲ್ ಆಗಿ ನಂತರ ಮದುವೆ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಸ್ವಂತ ಮನೆ ಮಾಡಿಕೊಳ್ಳಬೇಕು, ಕಾರ್ ಕೊಂಡುಕೊಳ್ಳಬೇಕು ಎಂದು ಯೋಚಿಸಿ, ಅದೆಲ್ಲವನ್ನು ಸಂಪಾದಿಸಿ, 30 ವರ್ಷದ ನಂತರ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳು ಬರುತ್ತವೆ ಎಂದು ಕೆಲವರು ಹೇಳುತ್ತಾರೆ. 30 ವರ್ಷಗಳ ಬಳಿಕ ಜೀವನದಲ್ಲಿ ಎಲ್ಲಾ ವಿಚಾರದ ಬಗ್ಗೆ ಸ್ಪಷ್ಟತೆ ಬರುತ್ತದೆ. ಅಲ್ಲಿಯವರೆಗು ಕೆರಿಯರ್ ಮೇಲೆ ಗಮನ ಹರಿಸಿ ಹಣ ಸಂಪಾದನೆ ಮಾಡಬೇಕು ಎಂದುಕೊಳ್ಳುತ್ತಾರೆ. ಇದರಿಂದಾಗಿ ವೈವಾಹಿಕ ಜೀವನದ ಮೇಲೆ ಗಮನ ಹರಿಸಲು ಕಷ್ಟವಾಗಬಹುದು. ಆ ಸಮಯಕ್ಕೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಆಕರ್ಷಣೆ ಕಡಿಮೆ ಆಗಿ ಹೋಗುತ್ತದೆ ಎಂದು ಹೇಳುತ್ತಾರೆ. ಇದರಿಂದಾಗಿ ದಾಂಪತ್ಯ ಜೀವನ ಡಲ್ ಆಗಿ ಸಾಗುತ್ತದೆ ಎಂದು ಹೇಳುತ್ತಾರೆ.
ಗಂಡ ಹೆಂಡತಿಯರ ನಡುವೆ ಅನ್ಯೋನ್ಯತೆಗಿಂತ ಹೆಚ್ಚಾಗಿ ಬೇರೆ ವಿಷಯಗಳ ಮೇಲೆ ಗಮನ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಒಬ್ಬರಿಗೊಬ್ಬರು ಹೆಚ್ಚು ಸಮಯ ಕೊಡಲು ಆಗುವುದಿಲ್ಲ. ಇದರಿಂದಾಗಿ ಹೆಚ್ಚು ಜೊತೆಯಾಗಿ ಓಡಾಡುವ ಅವಕಾಶ ಸಿಗುವುದಿಲ್ಲ. ಜೊತೆಗೆ ಮಕ್ಕಳ ವಿಚಾರದಲ್ಲಿ ಸಮಾಜದ ಒತ್ತಡ ಹೆಚ್ಚಾಗುತ್ತದೆ. ಇಬ್ಬರ ಮೇಲಿನ ಒತ್ತಡದಿಂದ ನೆಮ್ಮದಿ ಇಲ್ಲದ ಹಾಗೆ ಆಗುತ್ತದೆ. ಜೊತೆಗೆ ಈಗಿನ ಜೆನೆರೇಷನ್ ನವರಿಗೆ 30 ವರ್ಷದ ಬಳಿಕ ಮಕ್ಕಳಾಗುವುದು ಸಹ ಕಷ್ಟ ಎಂದು ಹೇಳುತ್ತಾರೆ. ಪುರುಷರಿಗೆ ಹೆಚ್ಚು ಕೆಲಸ, ಅದರಿಂದ ಒತ್ತಡ, ನಿದ್ದೆ ಸರಿಯಾಗಿ ಮಾಡದಿರುವುದು, ರೇಡಿಯೇಷನ್, ಪ್ರೋಟೀನ್, ಸರಿಯಾಗಿ ಆಹಾರ ಸೇವಿಸದೇ ಇರುವುದು. ಇವುಗಳಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಮಕ್ಕಳಾಗುವುದು ಕಷ್ಟವಾಗುತ್ತದೆ ಎಂದು ಹೇಳುತ್ತಾರೆ.