ಏನೇ ಮಾಡಿದರೂ ಜೇಬಿನಲ್ಲಿ ತಿಂಗಳ ಕೊನೆಯಾಗುವಷ್ಟರಲ್ಲಿ ದುಡ್ಡು ನಿಲ್ಲುತ್ತಿಲ್ಲವೇ?? ಹಾಗಿದ್ದರೆ ಈ ಸರಳ ಟ್ರಿಕ್ ಟ್ರೈ ಮಾಡಿ.
ಮಧ್ಯಮ ವರ್ಗದ ಕುಟುಂಬದಲ್ಲಿ ತಿಂಗಳ ಶುರುವಿನಲ್ಲಿ ಸಂಬಳ ಪಡೆಯುತ್ತಾರೆ, ತಿಂಗಳ ಕೊನೆಗೆ ಕೈಖಾಲಿಯಾಗುತ್ತದೆ. ಎಷ್ಟು ಹಣ ಯಾವುದಕ್ಕೆ ಖರ್ಚಾಯಿತು ಎಂದು ಅರ್ಥವಾಗುವುದೇ ಕಷ್ಟವಾಗುತ್ತದೆ. ಎಷ್ಟೇ ಹಣ ಬಂದರು ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗದೆ ಇರದು. ಈ ರೀತಿ ಆಗಲು ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಕಾರಣವಾಗಿರುತ್ತದೆ. ಅಂತಹ ತಪ್ಪುಗಳು ಯಾವುದು, ಏನು ಮಾಡಿದರೆ ಈ ಹಣ ಉಳಿಯುತ್ತದೆ ಎಂದು ತಿಳಿಸುತ್ತೇವೆ ನೋಡಿ..
*ಸಂಬಳ ಬಂದ ಬಳಿಕ ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡುತ್ತೀರಿ ಎಂದು ಲೆಕ್ಕ ಇಡಿ. 5 ರೂಪಾಯಿ ಅಥವಾ 500 ರೂಪಾಯಿ ಎಷ್ಟೇ ಹಣ ಖರ್ಚು ಮಾಡಿದರು, ಒಂದು ಕಡೆ ಡೈರಿಯಲ್ಲಿ ಬರೆದು ಇಡಿ.
*ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್ ಲೈನ್, ಯುಪಿಐ ಪೇಮೆಂಟ್ ಗಳು ಈಗ ಹೆಚ್ಚಾಗುತ್ತಿದೆ. ಆನ್ ಲೈನ್ ಶಾಪಿಂಗ್ ನಲ್ಲಿ ಅಗತ್ಯವಾದ ವಸ್ತುಗಿಂತ ಆಸೆಯಿಂದ ಶಾಪಿಂಗ್ ಮಾಡುವವರೇ ಹೆಚ್ಚಾಗುತ್ತಿದ್ದಾರೆ. ಹಾಗಾಗಿ ಆನ್ ಲೈನ್ ಶಾಪಿಂಗ್ ಅಪ್ ಬಳಕೆಯನ್ನು ಕಡಿಮೆ ಮಾಡಿ.
*ನಿಮಗೆ ಮನೆಯಿಂದ ಆಫೀಸ್ ಅಥವಾ ಬೇರೆ ಕಡೆಗೆ ಪ್ರಯಾಣದ ದೂರ ಕಡಿಮೆ ಇದ್ದರೆ, ಬೈಕ್, ಕಾರ್ ಅಥವಾ ಆಟೋದಲ್ಲಿ ಹೋಗುವುದಕ್ಕಿಂತ ವಾಕ್ ಮಾಡಿ, ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗೆಯೇ ಆಟೋ ಅಥವಾ ಪೆಟ್ರೋಲ್ ಹಣ ಸಹ ಉಳಿಯುತ್ತದೆ.
*ಪ್ರತಿದಿನ ದಿನಸಿ ಖರೀದಿ ಮಾಡುವುದಕ್ಕಿಂತ ತಿಂಗಳಿಗೆ ಒಂದು ಸಾರಿ ಹೋಲ್ ಸೇಲ್ ದರದಲ್ಲಿ ದಿನಸಿ ಖರೀದಿ ಮಾಡುವುದರಿಂದ, ಹಣ ಉಳಿತಾಯ ಆಗುತ್ತದೆ, ಜೊತೆಗೆ ಕಡಿಮೆ ಬೆಲೆಗೆ ದಿನಸಿ ಪದಾರ್ಥಗಳು ಸಿಗುತ್ತದೆ.
*ಆನ್ಲೈನ್ ಸೈಟ್ ಗಳಲ್ಲಿ ಸಾಂದರ್ಭಿಕ ಆಫರ್ ಗಳನ್ನು ನೋಡಿ ಖರೀದಿ ಮಾಡುವುದರಿಂದ ನಷ್ಟ ಆಗುವುದೇ ಹೆಚ್ಚು, ಅದರ ಬದಲಾಗಿ ಹಬ್ಬಗಳ ಸಮಯಕ್ಕಾಗಿ ಕಾದು, ರಿಯಾಯಿತಿ ದರದಲ್ಲಿ ವಸ್ತುಗಳನ್ನು ಪಡೆಯುವುದು ಉತ್ತಮವಾದ ಆಯ್ಕೆಯಾಗಿದೆ.
*ಸಿಗರೇಟ್ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಕೆಡುಕು ತರುವುದು ಮಾತ್ರವಲ್ಲದೆ, ನಿಮ್ಮ ಹಣವನ್ನು ಖಾಲಿ ಮಾಡುತ್ತದೆ. ಹಾಗಾಗಿ ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿ.
*ಯಾವಾಗಲಾದರು ಒಂದು ಸಾರಿ ಹೊರಗೆ ಊಟ ಮಾಡುವುದು ಪರವಾಗಿಲ್ಲ, ಆದರೆ ಆಗಾಗ ಹೊರಗೆ ಊಟ ಮಾಡುವುದು, ಅಥವಾ ಆರ್ಡರ್ ಮಾಡಿ ತಿನ್ನುವುದರಿಂದ ಹಣ ಹೆಚ್ಚು ಖರ್ಚಾಗುತ್ತದೆ. ಜೊತೆಗೆ ಆರೋಗ್ಯವು ಹದಗೆಡುತ್ತದೆ.