ಪ್ರೀತಿಸಿ ಮದುವೆಯಾದ ಹೆಂಡತಿ ಮಹಾಲಕ್ಷ್ಮಿಗಾಗಿ ಬಂಗಾರದ ಗಂಟನ್ನೇ ಕೊಟ್ಟ ನಿರ್ಮಾಪಕ: ರವೀಂದರ್ ಕೊಟ್ಟಿದ್ದು ಅದೆಷ್ಟು ಚಿನ್ನ ಗೊತ್ತೇ??
ತಮಿಳು ಚಿತ್ರರಂಗದ ಪ್ರೊಡ್ಯುಸರ್ ರವಿಂದರ್ ಚಂದ್ರಶೇಖರ್ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಮದುವೆ ವಿಷಯ ಭಾಈ ಚರ್ಚೆಯಾಗುತ್ತಿದೆ. ಇವರಿಬ್ಬರು ಪ್ರೀತಿಸಿ ಮದುವೆಯಾದರು, ಆಡ್ಸ್ರೆ ಈ ಜೋಡಿಯ ಮದುವೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಯಿತು. ಈಗಲೂ ಸಹ ಪ್ರತಿದಿನ ಈ ಜೋಡಿಯ ಬಗ್ಗೆ ಒಂದಲ್ಲ ಒಂದು ವಿಷಯಗಳು ಕೇಳಿಬರುತ್ತಲೇ ಇದೆ. ರವಿಂದರ್ ಹಾಗೂ ಮಹಾಲಕ್ಷ್ಮಿ ಇತ್ತೀಚೆಗೆ ಹನಿಮೂನ್ ಗೆ ಸಹ ಹೋಗಿಬಂದರು.
ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಹ ಆಕ್ಟಿವ್ ಆಗಿದ್ದು ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರು ಸುಂದರ ಕ್ಷಣಗಳ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಈ ಜೋಡಿ ಲೈವ್ ಬಂದಿತ್ತು, ಆಗ ಮಹಾಲಕ್ಷ್ಮಿ ಅವರು ಯಾರು ತಮ್ಮ ಪತಿಯನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇನ್ನು ಈಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಅದು ರವಿಂದರ್ ಅವರು ಮಹಾಲಕ್ಷ್ಮಿ ಅವರಿಗೆ ಕೊಟ್ಟಿರುವ ಗಿಫ್ಟ್ ಗಳ ಬಗ್ಗೆ ಚೆರ್ಚೆಯಾಗುತ್ತಿದೆ.

ಮಹಾಲಕ್ಷ್ಮಿ ಅವರನ್ನು ರವಿಂದರ್ ಅವರು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿ ಮಾಡುತ್ತಾರೆ. ಹಾಗಾಗಿ ಮದುವೆ ಸಮಯದಲ್ಲಿ ಅವರು ಪತ್ನಿ ಮಹಾಲಕ್ಷ್ಮಿ ಅವರಿಗೆ ಬರೋಬ್ಬರಿ ಒಂದೂವರೆ ಕೆಜಿ ಚಿನ್ನದ ಆಭರಣಗಳನ್ನು ಗಿಫ್ಟ್ ಆಗಿ ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲದೆ, ನೂರಾರು ಸೀರೆಗಳನ್ನು ಸಹ ಗಿಫ್ಟ್ ಆಗಿ ನೀಡಿದ್ದಾರಂತೆ. ಅವುಗಳಲ್ಲಿ ಕೆಲವು ಆಭರಣಗಳನ್ನು ಮಾತ್ರ ಮಹಾಲಕ್ಷ್ಮಿ ಅವರು ಮದುವೆಯ ದಿನ ಧರಿಸಿದ್ದರಂತೆ. ಇಷ್ಟೆಲ್ಲಾ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಗೊತ್ತಾದ ಬಳಿಕ, ಟ್ರೋಲ್ ಮಾಡಿದವರೆ ಶಾಕ್ ಆಗಿದ್ದಾರೆ.