ಮದುವೆಯಾದ 8 ವರ್ಷಗಳ ಮೇಲೆ ಬಯಲಾಯ್ತು ಕಹಿ ಸತ್ಯ: ಹೆಂಡತಿಗೆ ಇಷ್ಟು ದಿನ ಗಂಡನ ಬಗ್ಗೆ ಕಂಡು ಹಿಡಿಯಲು ಸಾಧ್ಯವೇ ಆಗಿಲ್ಲ.
ಕೆಲವೊಮ್ಮೆ ನಾವು ಅಂದುಕೊಳ್ಳಲು ಸಾಧ್ಯವಾಗದಂತಹ ಕೆಲವು ಘಟನೆಗಳು ನಡೆದಿರುತ್ತದೆ. ಅಂತಹ ಘಟನೆಗಳನ್ನು ಕೇಳಿದಾಗ ನಾವು ಆಶ್ಚರ್ಯ ಪಡುವುದು ಖಂಡಿತ. ಅದರಲ್ಲೂ ಮದುವೆ ವಿಚಾರದಲ್ಲಿ ವಧು ಹಾಗೂ ವರರ ನಡುವೆ ಅಸಂಭವ ಘಟನೆಗಳು ನಡೆಯುತ್ತವೆ. ಇದೀಗ ಇಂಥದ್ದೇ ಒಂದು ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿದೆ. ಹುಟ್ಟುವಾಗ ಮಹಿಳೆಯಾಗಿ ಹುಟ್ಟಿ, ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿ, 2014ರಲ್ಲಿ ಮಹಿಳೆಯೊಬ್ಬರ ಜೊತೆಗೆ ಮದುವೆಯಾಗಿದ್ದು, ಮದುವೆಯಾಗಿದ್ದು, 8 ವರ್ಷಗಳ ಬಳಿಕ ವಿಷಯ ಗೊತ್ತಾಗಿ ಅವರ ಹೆಂಡತಿ ಪೊಲೀಸರಲ್ಲಿ ದೂರು ನೀಡಿದ್ದಾರೆ..
ಸಯಾಜಿಗಂಜ್ ನಗರದಲ್ಲಿ ವಾಸ ಮಾಡುತ್ತಿರುವ ಮಹಿಳೆ ಒಬ್ಬರು ತಮ್ಮ ಗಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸಹ ಈ ವಿಚಾರದ ಬಗ್ಗೆ ದೂರು ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಮಹಿಳೆಯಾಗಿ ಹುಟ್ಟಿ ಲಿಂಗಪರಿವರ್ತನೆ ಮಾಡಿಸಿಕೊಂಡ ನಂತರ 2014ರಲ್ಲಿ ನನ್ನ ಜೊತೆ ಮದುವೆ ಮಾಡಿಕೊಂಡರು, ಮದುವೆ ನಡೆದಾಗ ನನಗೆ ಈ ವಿಷಯ ಗೊತ್ತಿರಲಿಲ್ಲ. ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವ ವಿಚಾರ 8 ವರ್ಷಗಳ ನಂತರವೇ ಗೊತ್ತಾಯಿತು, ಇಷ್ಟು ವರ್ಷಗಳ ಕಾಲ ನನಗೆ ಮೋಸ ಮಾಡಿದ್ದಾರೆ ಎಂದು ಆ ಮಹಿಳೆ ಕಂಪ್ಲೇಂಟ್ ನೀಡಿದ್ದಾರೆ.
ಇನ್ನು ಈ ಮಹಿಳೆಯನ್ನು ಮದುವೆ ಆಗಿರುವ ವಿರಾಜ್ ವರ್ಧನ್ ದೆಹಲಿಯಲ್ಲಿದ್ದಾರೆ, ಅವರು ಹೇಳಿರುವ ಪ್ರಕಾರ, ಮದುವೆ ಸಮಯದಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡಿರುವ ವಿಚಾರವನ್ನು ಆಕೆಗೆ ಹೇಳಿದ್ದು, ಒಪ್ಪಿಗೆಯಿಂದಲೇ ಮದುವೆ ಆಗಿದ್ದು, ಆಕೆಗೆ ಈಗಾಗಲೇ ಒಂದು ಮಗು ಇದೆ, ಆ ಮಗುವನ್ನು ನನ್ನ ಮಗು ಎಂದು ಅಧಿಕೃತವಾಗಿ ಸ್ವೀಕರಿಸಿದ್ದೇನೆ ಎಂದಿದ್ದಾರೆ ವಿರಾಜ್ ವರ್ಧನ್. ಮಹಿಳೆ ನೀಡಿರುವ ದೂರಿನ ಅನುಸಾರ, ವಿರಾಜ್ ವರ್ಧನ್ ರನ್ನು ದೆಹಲಿಯಿಂದ ಗುಜರಾತ್ ಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರಿಗೂ ಆನ್ ಲೈನ್ ಮೂಲಕ ಪರಿಚಯವಾಗಿದ್ದು, ಕುಟುಂಬದವರ ಎದುರು ಮದುವೆ ನಡೆದಿತ್ತು ಎನ್ನಲಾಗಿದೆ.