ರಾಕೇಶ್ ಮೇಲೆ ಸೋನು ಗೆ ಫುಲ್ ಕುಚ್ ಕುಚ್: ಆದರೆ ಇವರಿಬ್ಬರ ಕುಚ್ ಕುಚ್ ಗೆ ಬೇಕಾದ ಗೆಳೆತನ ಉಂಟಾದದ್ದು ಎಲ್ಲಿ ಅಂತೇ ಗೊತ್ತೇ??
ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಭಾರಿ ಸುದ್ದಿಯಾದ ಸ್ಪರ್ಧಿಗಳಲ್ಲಿ ಒಬ್ಬರು ಸೋನು ಗೌಡ. ಫಿನಾಲೆ ವೀಕ್ ತಲುಪಿ, 5ನೇ ಸ್ಥಾನದಲ್ಲಿ ಮನೆಯಿಂದ ಹೊರಬಂದರು. ಟಿವಿ ಸೀಸನ್ ಗೆ ಹೋಗುವ ಸೋನು ಗೌಡ ಕನಸು ನನಸಾಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸೋನು ಇದ್ದಾಗ ಅವರು ಸ್ಮೋಕ್ ಮಾಡುವ ವಿಷಯ ಭಾರಿ ಚರ್ಚೆಗೆ ಒಳಗಾಗಿತ್ತು. ಸೋನು ಶ್ರೀನಿವಾಸ್ ಗೌಡ ಸ್ಮೋಕಿಂಗ್ ಮಾಡುತ್ತಾರೆ, ಸಿಗರೇಟ್ ಸೇದುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿತ್ತು. ಈ ವಿಚಾರದ ಬಗ್ಗೆ ಸ್ವತಃ ಸೋನು ಈಗ ಕ್ಲಾರಿಟಿ ನೀಡಿದ್ದಾರೆ..
ಸೋನು ಹೇಳಿರುವ ಪ್ರಕಾರ, ಅವರಿಗೆ ಸಿಗರೇಟ್ ಸೇದುವ ಅಭ್ಯಾಸ ಇಲ್ಲ, ಯಾವಾಗಲೋ ಒಂದು ಸಾರಿ ಸೇದುತ್ತಾರಂತೆ, ಪ್ರತಿದಿನ ಮಾಡುವುದಿಲ್ಲವಂತೆ. ಅಲ್ಲದೆ ಬಿಗ್ ಬಾಸ್ ಗೆ ಹೋಗುವ ಸಮಯದಲ್ಲಿ ತಮ್ಮ ಬ್ರ್ಯಾಂಡ್ ಯಾವುದು ಎಂದು ತಿಳಿಸಿ ಅದನ್ನೇ ಕಳಿಸಿಕೊಡಿ ಎಂದು ಮನವಿ ಸಹ ಮಾಡಿಕೊಂಡಿದ್ದರಂತೆ. ಅದೇ ರೀತಿ ಬಿಗ್ ಬಾಸ್ ಸೋನು ಅವರು ಇಷ್ಟಪಡುವ ಬ್ರ್ಯಾಂಡ್ ಅನ್ನೇ ಕಳಿಸಿಕೊಡುತ್ತಿದ್ದರಂತೆ. ರಾಕೇಶ್ ಅವರ ಬಳಿ ಸಿಗರೇಟ್ ಬೇಕು ಎಂದು ಸೋನು ಮೊದಲ ಸಲ ಕೇಳಿದಾಗ, ಸ್ವತಃ ರಾಕೇಶ್ ಕೂಡ ಶಾಕ್ ಆಗಿದ್ದರಂತೆ. ತನಗೆ ಯಾವುದನ್ನು ಮುಚ್ಚಿಡಲು ಇಷ್ಟವಿಲ್ಲ, ತಾನೇನು ಅಡಿಕ್ಟ್ ಅಲ್ಲ, ಅನ್ನಿಸಿದಾಗ ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಸೋನು ಗೌಡ ಹೇಳಿದ್ರಂತೆ.
ಸ್ಮೋಕಿಂಗ್ ಏರಿಯಾಗೆ ಹೋಗುವಾಗ ಕಂಪನಿ ಕೊಡುತ್ತಲೇ ರಾಕೇಶ್ ಜೊತೆಗೆ ಫ್ರೆಂಡ್ಶಿಪ್ ಬೆಳೆಯಿತು ಎನ್ನುತ್ತಾರೆ ಸೋನು. ಅಲ್ಲಿ ಹೆಚ್ಚಿನ ಸಮಯ ಕಳೆದು ಬಹಳ ಕ್ಲೋಸ್ ಆಗಿದ್ದು ಎಂದು ಹೇಳಿದ್ದಾರೆ. ಸ್ಮೋಕಿಂಗ್ ಆರೋಗ್ಯಕ್ಕೆ ಹಾನಿಕರ ಎನ್ನುವುದು ಸಹ ಸೋನುಗೆ ಗೊತ್ತಿದೆ, ಹಾಗಾಗಿ ತಾನು ಆ ಥರ ಅನ್ನಿಸಿದಾಗ ಮಾತ್ರ ತೆಗೆದುಕೊಳ್ಳುತ್ತೇನೆ ಯಾವಾಗಲೂ ಇಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ ಸೋನು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇಂಟರ್ವ್ಯೂ ಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ ಸೋನು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೊಸ ಕೆಲಸಗಳನ್ನು ಮಾಡಲು ಸೋನು ಅವರಿಗೆ ಆಸಕ್ತಿ ಇದೆ.