ತನ್ನ ದೊಡ್ಡಪ್ಪ ಕೃಷ್ಣಾಂ ರಾಜು ಸತ್ತಾಗ ಪ್ರಭಾಸ್ ತೆಗೆದುಕೊಂಡರು ನಿರ್ಧಾರ: ಕೃಷ್ಣಾಂ ರಾಜು ಹೆಂಡತಿ ಕೈಯೆತ್ತಿ ಮುಗಿದಿದ್ದು ಯಾಕೆ ಗೊತ್ತೇ??

48

Get real time updates directly on you device, subscribe now.

ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಬಹಳ ನೋವು ತರುವ ಘಟನೆಯೊಂದು ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಗಚಿಬೌಲಿಯಲ್ಲಿರುವ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ಕೃಷ್ಣಂರಾಜು ಅವರು ಕಳೆದ ಭಾನುವಾರ ಮೃತರಾದರು. ಕೃಷ್ಣಂರಾಜು ಅವರ ಅಂತ್ಯಕ್ರಿಯೆ ಮೊಯಿನಾಬಾದ್ ನಲ್ಲಿರುವ ಕನಕಮಾಮಿಡಿ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ಕೃಷ್ಣಂರಾಜು ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಕುಟುಂಬದವರು ಹಾಗೂ ಚಿತ್ರರಂಗಕ್ಕೆ ಬಹಳ ಕಷ್ಟವಾಗಿದೆ. ಕೆಲವರು ಕೃಷ್ಣಂರಾಜು ಅವರು ಹಾಗೂ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಜೊತೆಗಿರುವ ಸುಂದರವಾದ ಹಳೆಯ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ, ಇನ್ನು ಕೆಲವರು
ಕೃಷ್ಣಂರಾಜು ಅವರ ಕೌಟುಂಬಿಕ ಜೀವನದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಕೃಷ್ಣಂರಾಜು ಅವರ ಅಗಲಿಕೆ ನಟ ಪ್ರಭಾಸ್ ಅವರಿಗೆ ತುಂಬಲಾಗದ ನಷ್ಟವಾಗಿದೆ, ದೊಡ್ಡಪ್ಪನನ್ನು ತುಂಬಾ ಪ್ರೀತಿಸುತ್ತಿದ್ದ ಪ್ರಭಾಸ್ ಅವರು ಈಗ ಅವರಿಲ್ಲದೆ ಬಹಳ ನೋವಿನಲಿದ್ದಾರೆ. ಕೃಷ್ಣಂರಾಜು ಅವರು ಮೃತರಾಗಿ 6 ದಿನಗಳು ಕಳೆದುಹೋಗಿದ್ದರು ಸಹ, ಪ್ರಭಾಸ್ ಅವರಿಗೆ ಇನ್ನು ಆ ನೋವಿನಿಂದ ಹೊರಬರಲು ಸಾಧ್ಯವಾಗಿಲ್ಲ. ಈ ನೋವಿನಲ್ಲಿ ನಟ ಪ್ರಭಾಸ್ ಅವರು ಒಂದು ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಕೇಳಿ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರಭಾಸ್ ಅವರು ಇನ್ನು ಮೂರು ತಿಂಗಳುಗಳ ಕಾಲ ಚಿತ್ರೀಕರಣಗಳಿಗೆ ಬ್ರೇಕ್ ಹಾಕಿ, ಮುಂದೂಡಿದ್ದಾರಂತೆ. ಪ್ರಶಾಂತ್ ನೀಲ್, ಮಾರುತಿ ಹಾಗೂ ನಾಗ್ ಅಶ್ವಿನ್ ಅವರ ಮೂರು ಸಿನಿಮಾಗಳಿಗೂ ಸಧ್ಯಕ್ಕೆ ಚಿತ್ರೀಕರಣ ಮಾಡಲು ಆಗುವುದಿಲ್ಲ ಎಂದು ನೋ ಹೇಳಿದ್ದಾರಂತೆ ನಟ ಪ್ರಭಾಸ್.

ಪ್ರಭಾಸ್ ಅವರು ಮೂರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಮೂರು ತಿಂಗಳುಗಳ ಕಾಲ ಈ ಮೂರು ಬಿಗ್ ಬಜೆಟ್ ಸಿನಿಮಾಗಳನ್ನು ನಿಲ್ಲಿಸಿಬಿಟ್ಟರೆ, ನಿರ್ಮಾಪಕರಿಗೆ ನಷ್ಟ ಆಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಪ್ರಭಾಸ್ ಅವರ ಮೇಲೆ ಕೃಷ್ಣಂರಾಜು ಅವರ ಕುಟುಂಬದ ಜವಾಬ್ದಾರಿ ಇರುವುದರಿಂದ ಅವರ ಮಕ್ಕಳು, ಪ್ರಭಾಸ್ ಅವರ ಸಹೋದರಿಯರ ಜೀವನದ ಬಗ್ಗೆ ಮುಂದಿನ ಯೋಜನೆಗಳು ಅವುಗಳನ್ನೆಲ್ಲವನ್ನು ಮೂರು ತಿಂಗಳುಗಳಲ್ಲಿ ಹೊಂದಿಸಬೇಕು ಎಂದುಕೊಂಡಿದ್ದಾರೆ ನಟ ಪ್ರಭಾಸ್. ಪ್ರಭಾಸ್ ಅವರ ಈ ನಿರ್ಧಾರ ಕೇಳಿದ ಕೃಷ್ಣಂರಾಜು ಅವರ ಪತ್ನಿ ಶ್ಯಾಮಲಾದೇವಿ ಅವರು, “ನನ್ನ ಹೊಟ್ಟೆಯಲ್ಲಿ ಹುಟ್ಟದಿದ್ದರು ನೀನು ನನ್ನ ಮಗ..” ಎಂದು ಹೇಳಿ ಭಾವುಕರಾಗಿದ್ದಾರೆ.

Get real time updates directly on you device, subscribe now.