ಇನ್ನು 18 ಕೂಡ ದಾಟದ ಅಳಿಯನ ಮೇಲೆ ಅತ್ತೆಗೆ ಫುಲ್ ಲವ್: ಆತನನ್ನು ನಂಬಿಕೊಂಡು ಕೊನೆಗೆ 35 ರ ಆಂಟಿ ಏನು ಮಾಡಿದ್ದಾರೆ ಗೊತ್ತೇ??
ಪ್ರೀತಿ ಪ್ರೇಮ ಎನ್ನುವ ವಿಷಯಕ್ಕೆ ಬಂದರೆ ನಾವು ಊಹೆ ಮಾಡಲಾರದ ಘಟನೆಗಳು ಸಾಕಷ್ಟು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಇತ್ತೀಚೆಗೆ ಜೈಪುರದಲ್ಲಿ ನಡೆದಿದೆ. ಸೋದರತ್ತೆ ಹಾಗೂ ಅಳಿಯನ ನಡುವೆ ಲವ್ ಆಗಿದ್ದು, ಇಬ್ಬರು ಒಟ್ಟಿಗೆ ಜೀವನ ಮಾಡಬೇಕು ಎಂದು ನಿರ್ಧರಿಸಿದ್ದು, ಅದರಿಂದಾಗಿ ಏನೆಲ್ಲಾ ಆಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯ ಆಗುವುದು ಖಂಡಿತ. ಒಂದೇ ಕುಟುಂಬದಲ್ಲಿ ಹೀಗೂ ನಡೆಯುತ್ತಾ ಎಂದು ಅನ್ನಿಸದೆ ಇರದು. ಈ ಘಟನೆ ನಡೆದಿರುವುದು ರಾಜಸ್ಥಾನದ ಚುರು ಜಿಲ್ಲೆಯ, ಸದರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಪೂನಂ ಎನ್ನುವ ಮಹಿಳೆಯ ಗಂಡ ಪೊಲೀಸರ ಬಳಿ ಬಂದು ದೂರು ನೀಡಿದ್ದಾನೆ.
10 ವರ್ಷಗಳ ಹಿಂದೆ ಪೂನಂ ಜೊತೆಯಲ್ಲಿ ಆತನಿಗೆ ಮದುವೆ ಆಗಿದ್ದು, ಅವರಿಬ್ಬರಿಗೆ ಎರಡು ಮಕ್ಕಳು ಸಹ ಇದೆ., ಈಗ ಸ್ವಲ್ಪ ದಿನಗಳಿಂದ ಸೋದರಳಿಯ ಮನೆಗೆ ಬರಲು ಶುರು ಮಾಡಿದ್ದು, ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿದೆ, ಅದು ಎಷ್ಟರ ಮಟ್ಟಿಗೆ ಇದೆ ಎಂದರೆ, ಒಂದು ದಿನ ಪೂನಂ ಗಂಡನ ಬಳಿ ಬಂದು, ತಾನು ಗಂಡನಿಂದ ದೂರವಾಗಿ, ಸೋದರಳಿಯನ ಜೊತೆಗೆ ಇರುವುದಾಗಿ ತಿಳಿಸಿದ್ದಾಳೆ, ತನಗೆ ಗಂಡನ ಜೊತೆಗಿರಲು ಇಷ್ಟವಿಲ್ಲ ಎಂದಿದ್ದಾಳೆ. ಅವರಿಬ್ಬರ ಕುಟುಂಬದವರು ಮದುವೆ ಆಗದಂತೆ ತಿಳಿಸಿ ಹೇಳಲು ಪ್ರಯತ್ನಿಸಿದರು ಸಹ ಪೂನಂ ಯಾರ ಮಾತನ್ನು ಕೇಳುತ್ತಿಲ್ಲ, ಗಂಡನ ಜೊತೆಗೆ ಹೋಗಲು ಆಕೆ ನಿರಾಕರಿಸಿದ್ದಾಳೆ.
ಸೋದರಳಿಯನ ಜೊತೆಗೆ ಇರುತ್ತೇನೆ ಎಂದು ಆಕೆ ಮಾಡಿರುವ ನಿರ್ಧಾರದಿಂದ ಗಂಡ ಬೇಸತ್ತು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪತ್ನಿ ತನಗೆ ವಿಚ್ಛೇದನ ನೀಡಿಲ್ಲ, ಸೋದರಳಿಯನ ಜೊತೆಗೆ ಮದುವೆಯಾಗಿ ಇರುತ್ತೇನೆ ಎಂದು ಹೇಳುತ್ತಿದ್ದಾಳೆ. ಸೋದರಳಿಯ ಇನ್ನು ಅಪ್ರಾಪ್ತ, ಅವನಿಗೆ ಕೇವಲ 17 ವರ್ಷ, ಪೂನಂಗೆ 35 ವರ್ಷ. ಇದು ಸರಿಯಲ್ಲ, ಸಮಾಜದ ದೃಷ್ಟಿಯಲ್ಲಿ ಸಹ ಇದು ಸರಿ ಇಲ್ಲ ಎಂದು ಪೊಲೀಸರ ಬಳಿ ಪೂನಂ ಪತಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಈಗ ಪೊಲೀಸರು ವಿಚಾರಣೆ ಶುರುಮಾಡುತ್ತಿದ್ದಾರೆ.