ಸಂಜು ಸ್ಯಾಮ್ಸನ್ ಗೆ ಕೊನೆಗೆ ಕುಲಾಯಿಸಿದ ಅದೃಷ್ಟ. ತಂಡದಲ್ಲಿ ಸ್ಥಾನ ಅಷ್ಟೇ ಅಲ್ಲ, ನಾಯಕತ್ವ ಕೂಡ ಗಿಫ್ಟ್. ಹೇಗಿದೆ ಗೊತ್ತೇ ಹೊಸ ಭಾರತ ತಂಡ??

24

Get real time updates directly on you device, subscribe now.

ಸಂಜು ಸ್ಯಾಮ್ಸನ್ ಭಾರತ ಪ್ರಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಪ್ರತಿಭೆ ಇದ್ದರು ಸಂಜು ಸ್ಯಾಮ್ಸನ್ ಅವರು ಈ ಬಾರಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಳಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಈಗ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಂದು ದೊಡ್ಡ ಅದೃಷ್ಟ ಹುಡುಕಿಕೊಂಡು ಬಂದಿದೆ. ಇದೀಗ ಸಂಜು ಸ್ಯಾಮ್ಸನ್ ಅವರನ್ನು ಭಾರಿ ಅದೃಷ್ಟ ಹುಡುಕಿಕೊಂಡು ಬಂದಿದೆ. ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆಗುವುದು ಮಾತ್ರವಲ್ಲದೆ, ನಾಯಕನ ಪಟ್ಟ ಸಹ ಸಂಜು ಸ್ಯಾಮ್ಸನ್ ಅವರಿಗೆ ಸಿಕ್ಕಿದೆ..

ಭಾರತದ ಆಯ್ಕೆ ಸಮಿತಿ, ಚೆನ್ನೈನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎ ವಿರುಧ್ದದ ಮೂರು ಪಂದ್ಯಗಳ ಮಾಸ್ಟರ್ ಕಾರ್ಡ್ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಸರಣಿ ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿ, ಅವರಿಗೆ ನಾಯಕತ್ವ ಸಹ ನೀಡಲಾಗಿದೆ. ಅಂಡರ್ 19 ತಂಡದಲ್ಲಿ ಹೆಸರು ಮಾಡಿರುವ ರಾಜ್ ಅಂಗದ್ ಬಾವಾ ಅವರನ್ನು ಸಹ ಆಯ್ಕೆ ಮಾಡಲಾಗಿದೆ. ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆಗಬೇಕು ಎನ್ನುವ ಹಂಬಲದಲ್ಲಿದ್ದ ಹಲವು ಆಟಗಾರರು ಈ ಸರಣಿಗೆ ಆಯ್ಕೆಯಾಗಿದ್ದಾರೆ.

ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ಅವರಿಗೆ ಸ್ಥಾನ ಸಿಕ್ಕಿದೆ. ಕೆ.ಎಸ್.ಭರತ್ ಅವರು ವಿಕೆಟ್ ಕೀಪರ್ ಆಗಿ ಸೆಲೆಕ್ಟ್ ಆಗಿದ್ದಾರೆ. ಸೆಪ್ಟೆಂಬರ್ 22, 23 ಮತ್ತು 25ರಂದು ಈ ಪಂದ್ಯಗಳು ನಡೆಯಲಿದ್ದು, ಮೂರು ಪಂದ್ಯಗಳು ಸಹ ಚೆನ್ನೈನ ಚಿದಂಬರಂ ಸ್ಟೇಡಿಯಂ ನಲ್ಲೇ ನಡೆಯಲಿದೆ.

Get real time updates directly on you device, subscribe now.