ಆ ಒಬ್ಬ ಸ್ಟಾರ್ ನಟನಿಗಾಗಿ SIIMA ಅವಾರ್ಡ್ಸ್ ಬೆಂಗಳೂರಿನಲ್ಲಿ ನಡೆಯಿತು. ಆ ಕನ್ನಡದ ಸ್ಟಾರ್ ನಟ ಯಾರು ಗೊತ್ತೇ??
ಈ ವರ್ಷ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಪ್ರತಿ ವರ್ಷ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದದ್ದು ವಿಶೇಷ. ಇಡೀ ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಕಲಾವಿದರು ಸಹ ಬೆಂಗಳೂರಿಗೆ ಆಗಮಿಸಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲಾ ತಾರೆಯರು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದರು, ಫೋಟೋಗಳಿಗೆ ಪೋಸ್ ನೀಡಿ ಎಂಜಾಯ್ ಮಾಡಿದರು.
ಇದೀಗ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಒಂದು ಕಾರಣ, ಕನ್ನಡದ ಬಿಗ್ ಬಜೆಟ್ ಸಿನಿಮಾಗಳು ಈಗ ಭಾರಿ ಸದ್ದು ಮಾಡುತ್ತಿವೆ, ಯಶಸ್ಸು ಕಾಣುತ್ತಿವೆ, ಭಾರತ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದೆ. ಈ ಹೊಸ ಹವಾ ಶುರುವಾಗಿದ್ದು, ಕೆಜಿಎಫ್ ಸಿನಿಮಾ ಇಂದ ಎಂದರೆ ತಪ್ಪಾಗುವುದಿಲ್ಲ. ಹಾಗೆಯೇ ಸೈಮಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಬೇಕು ಎಂದು ಯಶ್ ಅವರು ಕೇಳಿಕೊಂಡಿದ್ದರಂತೆ. ಬೆಂಗಳೂರಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಎಂದು ಹೇಳಿದ್ದರಂತೆ ನಟ ಯಶ್.
ಸೈಮಾ ಬೆಂಗಳೂರಿಗೆ ಬರಲು ಅದೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಸೈಮಾ ಕಾರ್ಯಕ್ರಮ ನಿರೂಪಣೆ ಮಾಡಿದ ಅಖುಲ್ ಬಾಲಾಜಿ ಅವರು ಸಹ ಈ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಸೈಮಾ ಕಾರ್ಯಕ್ರಮ ನಡೆಸಬೇಕು ಎಂದು ಯಶ್ ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಮ್ಮ ಊರಿನಲ್ಲಿ ಈ ಪ್ರತಿಷ್ಠಿತ ಕಾರ್ಯಾಕ್ರಮ ನಡೆದದ್ದು, ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ ಆಗಿದೆ. ಸೈಮಾ ಕಾರ್ಯಕ್ರಮದಲ್ಲಿ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಅವರೊಡನೆ ಕಾಣಿಸಿಕೊಂಡರು. ನಟ ಕಮಲ್ ಹಾಸನ್, ರಣವೀರ್ ಸಿಂಗ್ ಹಾಗೂ ಯಶ್ ವಿಶೇಷ ಅತಿಥಿ ಆಗಿದ್ದರು. ಈ ಮೂವರನ್ನು ವೇದಿಕೆಯ ಮೇಲೆ ಒಟ್ಟಾಗಿ ನೋಡಿ ಸಿನಿಪ್ರಿಯರು ಹಾಗೂ ಚಿತ್ರರಂಗದ ಗಣ್ಯರು ಸಂತೋಷಪಟ್ಟಿದ್ದಾರೆ.