ನಡೆಯುತ್ತಿದ್ದ ಫ್ಯಾನ್ಸ್ ವಾರ್ ಗೆ ಬಿಟ್ಟು ಬ್ರೇಕ್: ಅಲ್ಲು ಅರ್ಜುನ್ ಫ್ಯಾನ್ಸ್ ಹಾಗೂ ಪ್ರಭಾಸ್ ಫ್ಯಾನ್ಸ್ ನಡುವೆ ನಡೆದದ್ದು ಏನು ಗೊತ್ತೇ??

18

Get real time updates directly on you device, subscribe now.

ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಗುರುತಿಸಿಕೊಂಡಿರುವ ತೆಲುಗು ಚಿತ್ರರಂಗದ ಇಬ್ಬರು ಖ್ಯಾತ ನಟರು ಅಲ್ಲು ಅರ್ಜುನ್ ಹಾಗೂ ಪ್ರಭಾಸ್. ಬಾಹುಬಲಿ ಸಿನಿಮಾ ಇಂದ ಪ್ರಭಾಸ್ ಅವರು ಹಾಗೂ ಪುಷ್ಪ ಸಿನಿಮಾ ಇಂದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಗಳು ಎನ್ನಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಸ್ನೇಹ ಚೆನ್ನಾಗಿಯೇ ಇದ್ದರು, ಈ ಇಬ್ಬರು ನಟರ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ಗಳು ನಡೆಯುತ್ತಲೇ ಇದ್ದವು, ಟ್ರೋಲ್ ಗಳು ಸಹ ಹೆಚ್ಚಾಗಿ ನಡೆಯುತ್ತಿದ್ದವು.

ಆದರೆ ಈಗ ಈ ಫ್ಯಾನ್ ವಾರ್ ಗಳು ಅಂತ್ಯಕಂಡಿದೆ. ಇಬ್ಬರು ನಟರ ಅಭಿಮಾನಿಗಳು, ಅವರಿಬ್ಬರ ಸ್ನೇಹ ಟ್ರೋಲ್ ಹಾಗೂ ಫ್ಯಾನ್ ವಾರ್ ಗಳಿಗೆ ಮಿಗಿಲಾದದ್ದು, ಇನ್ನುಮುಂದೆ ಟ್ರೋಲ್ ಅಥವಾ ಫ್ಯಾನ್ ವಾರ್ ಗಳು ಬೇಡವೇ ಬೇಡ ಎಂದು ನಿರ್ಧಾರ ಮಾಡಿದ್ದಾರೆ. ಅಭಿಮಾನಿಗಳು ಈ ನಿರ್ಧಾರ ಮಾಡುವುದಕ್ಕೆ ಕಾರಣ ಅದೊಂದು ಘಟನೆ ಆಗಿದೆ. ಇತ್ತೀಚೆಗೆ ಪ್ರಭಾಸ್ ಅವರ ದೊಡ್ಡಪ್ಪ ಖ್ಯಾತ ನಟ ಕೃಷ್ಣಂರಾಜು ಅವರು ವಿಧಿವಶರಾದರು, ಅವರ ಅಂತಿಮ ದರ್ಶನ ಪಡೆಯಲು ಟಾಲಿವುಡ್ ಸ್ಟಾರ್ ನಟರು ಬಂದಿದ್ದರು. ಅಲ್ಲು ಅರ್ಜುನ್ ಅವರು ಸಹ ಆಗಮಿಸಿ, ಪ್ರಭಾಸ್ ಅವರನ್ನು ಸಂತೈಸಿದ್ದಾರೆ.

ಪ್ರಭಾಸ್ ಅವರನ್ನು ಅಲ್ಲು ಅರ್ಜುನ್ ಅವರು ಅಪ್ಪಿಕೊಂಡು ಸಮಾಧಾನ ಮಾಡುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಹ ಇದನ್ನು ನೋಡಿ ಭಾವುಕರಾಗಿದ್ದಾರೆ. ಇನ್ನುಮುಂದೆ ಈ ಟ್ರೋಲ್ ಗಳು ಬೇಡ, ತೆಲುಗು ಚಿತ್ರರಂಗದಲ್ಲಿ ಎಲ್ಲರೂ ಒಂದು ಎನ್ನುವ ಹಾಗೆ ನೋಡೋಣ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಫ್ಯಾನ್ ಶುರುವಾಗೋದಕ್ಕೆ ಕಾರಣ ಒಂದು ಪತ್ರಿಕೆಯ ಮುಖಪುಟದಲ್ಲಿ ಬಂದ ಒಂದು ಫೋಟೋ ಆಗಿತ್ತು, ಅಲ್ಲಿಂದ ಫ್ಯಾನ್ ವಾರ್ ಮುಂದುವರೆದಿತ್ತು, ಆದರೆ ಈಗ ಎಲ್ಲವೂ ಅಂತ್ಯ ಕಂಡಿರುವುದು ಒಳ್ಳೆಯ ವಿಚಾರ ಆಗಿದೆ.

Get real time updates directly on you device, subscribe now.