ಮಗನ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ನಾಗಾರ್ಜುನ: ಮಾಜಿ ಸೊಸೆ ಬಗ್ಗೆ ಹೇಳಿದ್ದೇನು ಗೊತ್ತೇ?? ಇಷ್ಟು ದಿನ ಸೈಲೆಂಟ್, ಈಗ??

40

Get real time updates directly on you device, subscribe now.

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಟಾಲಿವುಡ್ ನಲ್ಲಿ ಕ್ಯೂಟ್ ಕಪಲ್ ಎಂದೇ ಹೆಸರು ಪಡೆದಿದ್ದರು. ಇಬ್ಬರು ಬೇರೆ ಆಗುತ್ತಿರುವ ವಿಚಾರ ತಿಳಿಸಿದಾಗ ಎಲ್ಲಾ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಶಾಕ್ ಆಗಿದ್ದು ನಿಜ. ಇವರಿಬ್ಬರು ಕೆಲ ಸಮಯ ಪ್ರೀತಿಸಿ, ವರ್ಷಗಳ ಕಾಲ ಡೇಟಿಂಗ್ ಮಾಡಿ, ನಂತರ ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾದರು. ಆದರೆ ಇದ್ದಕ್ಕಿದ್ದ ಹಾಗೆ ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ನಿಜಕ್ಕೂ ಇವರಿಬ್ಬರ ಮಧ್ಯೆ ನಡೆದಿದ್ದೇನು ಎಂದು ಇಂದಿಗೂ ಸರಿಯಾಗಿ ತಿಳಿದುಬಂದಿಲ್ಲ.

ಚೈತನ್ಯ ಮತ್ತು ಸಮಂತಾ ಜೋಡಿ ಬೇರೆಯಾಗಿ ಒಂದು ವರ್ಷ ಕಳೆಯುತ್ತಿದ್ದರು ಸಹ ಇಂದಿಗೂ ಈ ಜೋಡಿಯ ಬಗ್ಗೆ ಒಂದಲ್ಲ ಒಂದು ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ವಿಚ್ಛೇದನದ ಬಗ್ಗೆ ಸಮಂತಾ ಮತ್ತು ಚೈತನ್ಯ ಇಬ್ಬರು ಸಹ ಇದರ ಬಗ್ಗೆ ಪ್ರಶ್ನೆಗಳನ್ನು ಎದುರಿಸಿ, ಅವುಗಳಿಗೆ ಕೆಲವೊಮ್ಮೆ ಉತ್ತರ ನೀಡಿ, ಕೆಲವೊಮ್ಮೆ ಪ್ರಶ್ನೆಯನ್ನು ನಿರ್ಲ್ಯಕ್ಷಿಸಿ ಸಾಗುತ್ತಿದ್ದಾರೆ. ಚೈತನ್ಯ ಅವರ ತಂದೆ ನಾಗಚೈತನ್ಯ ಅವರಿಗೂ ಸಹ ಇವರಿಬ್ಬರ ವಿಚ್ಛೇದನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ನಾಗಾರ್ಜುನ ಅವರು ಸಹ ಮಗ ಸೊಸೆ ವಿಚ್ಛೇದನದ ಬಗ್ಗೆ ಸ್ಪಂದಿಸಿರಲಿಲ್ಲ.

ಇತ್ತೀಚೆಗೆ ಬ್ರಹ್ಮಾಸ್ತ್ರ ಸಿನಿಮಾ ಪ್ರೊಮೋಷನ್ ಸಮಯದಲ್ಲಿ ನಾಗಾರ್ಜುನ ಅವರಿಗೆ ಮತ್ತೊಮ್ಮೆ ಪ್ರಶ್ನೆ ಕೇಳಲಾಯಿತು, ಚೈತನ್ಯ ಅವರ ಪ್ರೊಫೆಷನಲ್ ಲೈಫ್ ಗಿಂತ ಪರ್ಸನಲ್ ಲೈಫ್ ಬಗ್ಗೆ ಜಾಸ್ತಿ ಚರ್ಚೆ ಆಗುತ್ತಿರುವುದು ತಂದೆಯಾಗಿ ನಿಮ್ಮನ್ನು ಚಿಂತೆಗೆ ಗುರಿ ಮಾಡಿದ್ಯಾ ಎಂದು ನಿರೂಪಕರು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿರುವ ನಾಗಾರ್ಜುನ ಅವರು, “ನಾಗಚೈತನ್ಯ ಸಂತೋಷವಾಗಿದ್ದಾನೆ ನನಗೆ ಅಷ್ಟೇ ಸಾಕು. ಜೀವನದಲ್ಲಿ ಇದು ಒಂದು ಅನುಭವ. ವಿಚ್ಛೇದನ ಎನ್ನುವುದು ದುರದೃಷ್ಟಕರ ಆದರೆ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಕುಳಿತುಕೊಳ್ಳೋಕೆ ಆಗೋದಿಲ್ಲ. ಅದು ನಡೆಯಿತು, ಜೀವನದಿಂದ ಹೊರಹೋಯಿತು. ಯಾರದ್ದೇ ಜೀವನದಲ್ಲಿ ಈ ರೀತಿ ನಡೆದರೆ, ಅದರಿಂದ ಹೊರಬರಬೇಕು..” ಎಂದಿದ್ದಾರೆ. ನಾಗಾರ್ಜುನ ಅವರ ಈ ಕಮೆಂಟ್ಸ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Get real time updates directly on you device, subscribe now.