SIIMA ಅವಾರ್ಡ್ಸ್ ನಲ್ಲಿ ದರ್ಶನ್ ರವರದ್ದೇ ಹವಾ, ಎಲ್ಲ ಕ್ಯಾಮೆರಾಗಳು ಇವರ ಮೇಲೆ: ಹೇಗಿದೆ ಗೊತ್ತೇ ಖಡಕ್ ವಿಡಿಯೋ. SIIMA ದಲ್ಲಿ ದರ್ಶನ್ ಕಂಡದ್ದು ಹೀಗೆ.

20

Get real time updates directly on you device, subscribe now.

ಡಿಬಾಸ್ ದರ್ಶನ್ ಅಂದ್ರೆ ಎಲ್ಲಿಲ್ಲದ ಕ್ರೇಜ್ ಅಭಿಮಾನಿಗಳಲ್ಲಿ ಇದೆ. ದರ್ಶನ್ ಅವರಿಗೆ ಇರುವಂತ ಮಾಸ್ ಫ್ಯಾನ್ ಬೇಸ್ ಬೇರೆ ನಟರಿಗೆ ಇದೆ ಎಂದು ಹೇಳುವುದು ಕಷ್ಟ. ದರ್ಶನ್ ಅವರ ಪರಿಸ್ಥಿತಿ ಹೇಗಿದ್ದರು ಸಹ ಯಾವಾಗಲೂ ಅವರ ಜೊತೆಗಿರುವುದು ಅಭಿಮಾನಿಗಳು. ಪ್ರತಿ ಬಾರಿ, ಯಾವುದೇ ಸಂದರ್ಭದಲ್ಲಿ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ದರ್ಶನ್ ಅವರು ಯಾವಾಗಲೇ ಸಾರ್ವಜನಿಕವಾಗಿ ಕಾಣಿಸಿಕೊಂಡರು ಅದು ಪ್ರೂವ್ ಆಗಿದೆ.

ಈ ಸಾರಿ ದರ್ಶನ್ ಅವರು ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಾಗಲೂ ಅದನ್ನು ನೋಡಿದ್ದೇವೆ. ದರ್ಶನ್ ಅವರು ಸಾಮಾನ್ಯವಾಗಿ ಯಾವುದೇ ಅವಾರ್ಡ್ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವುದಿಲ್ಲ. ಅವುಗಳಿಂದ ದೂರವೇ ಇರುತ್ತಿದ್ದರು. ಸಂದರ್ಶನ ಒಂದರಲ್ಲಿ ಅದರ ಬಗ್ಗೆ ಕೇಳಿದಾಗ, ಕನ್ನಡ ಕಲಾವಿದರು ಹಿಂದಿನ ಸಾಲಿನಲ್ಲಿ ಕೂರುತ್ತಾರೆ, ಕನ್ನಡದವರಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಹಾಗೆ ಆದಾಗ ಬರುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಈ ವರ್ಷ ಬೆಂಗಳೂರಿನಲ್ಲಿ ನಡೆಯಿತು, ಇಡೀ ಕಾರ್ಯಕ್ರಮವನ್ನು ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ದರ್ಶನ್ ಅವರು ಬಹಳ ಸ್ಟೈಲಿಶ್ ಆಗಿ ಬ್ಲ್ಯಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡರು. ಡಿಬಾಸ್ ದರ್ಶನ್ ಅವರು ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳ, ಬೆಂಗಳೂರು ಅರಮನೆ ಮೈದಾನಕ್ಕೆ ಬರುತ್ತಿದ್ದ ಹಾಗೆ, ನೂರಾರು ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಕಾದಿದ್ದರು. ದರ್ಶನ್ ಅವರು ಬರುತ್ತಿದ್ದ ಹಾಗೆಯೇ, ಕೂಗಾಟ ಚೀರಾಟ ಎಲ್ಲವೂ ಜೋರಾಗಿತ್ತು ಎಂದರೆ ತಪ್ಪಾಗುವುದಿಲ್ಲ. ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಹ ದರ್ಶನ್ ಅವರು ರಾಜನ ಹಾಗೆ ಕಾಣಿಸಿಕೊಂಡರು. ದರ್ಶನ್ ಅವರು ಬಂದಿದ್ದು ಒಂದು ಪ್ರತಿಷ್ಠೆಯ ರೀತಿ ಇತ್ತು, ಎಲ್ಲಾ ಕ್ಯಾಮರಾಗಳು ಅವರ ಮೇಲೆಯೇ ಇತ್ತು. ದರ್ಶನ್ ಅವರ ಹವಾ, ಖಡಕ್ ಲುಕ್ಸ್ ಗಳು ಹೇಗಿದ್ದವು ಎಂದು ನೀವು ಕೂಡ ವಿಡಿಯೋ ದಲ್ಲಿ ನೋಡಿ..

Get real time updates directly on you device, subscribe now.