ನಿಮ್ಮ ಯಕೃತ್ತಿನ ಪ್ರತಿಯೊಂದು ಕೋಶವನ್ನು ಸ್ವಚ್ಛವಾಗಿ ಇಡಲು ಹಾಗೂ ಉತ್ಸಾಹ ಹೆಚ್ಚಿಸಿ, ಆರೋಗ್ಯವಾಗಿಡಲು ಏನು ಮಾಡಬೇಕು ಗೊತ್ತೇ??
ಯಕೃತ್ತು ನಮ್ಮ ದೇಹದಲ್ಲಿನ ಬಹಳ ಮುಖ್ಯವಾದ ಅಂಗಗಳಲ್ಲಿ ಒಂದು. ಯಕೃತ್ತು ದೇಹದಿಂದ ಬೇಡವಾಗಿರುವುದನ್ನು ಮತ್ತು ಆಹಾರದಿಂದ ಉತ್ಪತ್ತಿಯಾಗುವ ಫ್ರೀ ರಾಡಿಕಲ್ ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಫ್ರೀ ರಾಡಿಕಲ್ ಗಳ್ಚ್ ಆಟೋಇಮ್ಯೂನ್ ಅಸ್ವಸ್ಥತೆಗಳು ಅಥವಾ ದೀರ್ಘಕಾಲದ ಕಾಯಿಲೆಗಳಿಗೆ ಮುಖ್ಯ ಕಾರಣ ಆಗಿರುತ್ತದೆ. ಈಗ ನಮ್ಮ ಪೀಳಿಗೆಯಲ್ಲಿ ಫ್ರೀ ರಾಡಿಕಲ್ ಗಳು ದೀರ್ಘಕಾಲದ ಖಾಯಿಲೆಗಳು ಮತ್ತು ಕ್ಯಾನ್ಸರ್ ಗಳನ್ನ ಉಂಟುಮಾಡುತ್ತಿವೆ. ಯಕೃತ್ತಿಗೆ ಮಾತ್ರ ಅಂತಹ ವಸ್ತುಗಳನ್ನು ಸ್ವಚ್ಛಗೊಳಿಸುವ ಶಕ್ತಿ ಇದೆ.
ಏಪ್ರಿಕಾಟ್ ಹಣ್ಣನ್ನು ತಿಂದಾಗ ಅದರಲ್ಲಿ ಕ್ಲೋರೋಜೆನಿಕ್ ಎಂಬ ರಾಸಾಯನಿಕ ಅಂಶವು ತುಂಬಾ ಹೆಚ್ಚಾಗಿರುತ್ತದೆ. ಈ ಕ್ಲೋರೊಜೆನಿಕ್ ಅಂಶವು ಯಕೃತ್ತಿನಲ್ಲಿ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ಅರ್ಥ ಡ್ರೈ ಆಫ್ರಿಕಾಟ್ ತಿನ್ನುವುದರಿಂದ, 60 ರಿಂದ 70% ಫ್ರೀ ರಾಡಿಕಲ್ ಗಳನ್ನು ಸ್ವಚ್ಛಗೊಳಿಸಬಹುದು. 2017 ರಲ್ಲಿ, ಈಜ್ ಆಂಗ್ಲಿಯಾ ವಿಶ್ವವಿದ್ಯಾಲಯ ತಿಳಿಸಿರುವ ಮಾಹಿತಿ ಪ್ರಕಾರ, 237 ಜನರನ್ನು ವಿಶೇಷವಾಗಿ ಪರೀಕ್ಷಿಸಲಾಯಿತು, ಒಣ ಏಪ್ರಿಕಾಟ್ ಯಕೃತ್ತಿಗೆ ತುಂಬಾ ಒಳ್ಳೆಯದು ಎಂದು ಗೊತ್ತಾಗಿದೆ. ಇದರಲ್ಲಿ ಉತ್ತಮ ರುಚಿ, ಹಾಗೂ ಸುಲಭವಾಗಿ ಸಿಗುತ್ತದೆ. ಅಲ್ಲದೆ ಅವುಗಳ ಬೆಲೆಯು ಕಡಿಮೆ ಇರುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಪ್ರತಿದಿನ ಸೇವಿಸಿದರೆ ಲಿವರ್ ಗೆ ತುಂಬಾ ಒಳ್ಳೆಯದು.
ಅದೇ ರೀತಿ ಫ್ಯಾಟಿ ಲಿವರ್ ಸಮಸ್ಯೆ ಇರುವವರು ಈ ಹಣ್ಣು ಸೇವಿಸುವುದರಿಂದ ಲಿವರ್ ಸೆರೋಸಿನ್ ಮತ್ತು ಲಿವರ್ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವುಗಳಿಂದ ಸಿಗುವ ಮತ್ತೊಂದು ಪ್ರಯೋಜನ ಏನೆಂದರೆ ಆಕ್ಸಿಡೇಟಿವ್ ಒತ್ತಡವನ್ನು 67% ರಷ್ಟು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿ ಜೀವಕೋಶಗಳು ಆಮ್ಲಜನಕದ ಜೊತೆಗೆ ಪ್ರತಿಕ್ರಿಯೇ ನೀಡುತ್ತದೆ ಹಾಗೂ ಹಾನಿಗೊಳಗಾಗುತ್ತವೆ. ಆದ್ದರಿಂದ, ಆಕ್ಸಿಡೇಟಿವ್ ಹೆಚ್ಚಿನ ಮಟ್ಟದ ಹಾನಿಗೆ ಕಾರಣವಾಗುತ್ತದೆ. ಏಪ್ರಿಕಾಟ್ ನಲ್ಲಿ 240 ಕಿಲೋ ಕ್ಯಾಲೋರಿ ಕಬ್ಬಿಣ ಇರುತ್ತದೆ. ಅಲ್ಲದೆ 63 ಗ್ರಾಂ ಕಾರ್ಬೋಹೈಡ್ರೇಟ್, 6 ಗ್ರಾಂ ಫ್ಯಾಟ್, 7.3 ಗ್ರಾಂ ಫೈಬರ್ ಮತ್ತು ವಿಟಮಿನ್ ಕೆ ಕೂಡ ಅಧಿಕವಾಗಿ ಸಿಗುತ್ತದೆ. ಇವುಗಳು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಜಯಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ನಿಯಮಿತವಾಗಿ ಇಂತಹ ಒಣ ಏಪ್ರಿಕಾಟ್ ಗಳನ್ನು ತೆಗೆದುಕೊಳ್ಳುವ ಅಭ್ಯಾಸವನ್ನು ಶುರುಮಾಡಿ. ಈ ಹಣ್ಣನ್ನು ವಯಸ್ಸಿನ ಸಮಸ್ಯೆ ಇಲ್ಲದೆ ಎಲ್ಲರೂ ಸೇವಿಸಬಹುದು. ಏಪ್ರಿಕಾಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.