ಯಾವುದೇ ಚಿತ್ರೀಕರಣ ಇಲ್ಲದೆ ಇದ್ದರೂ ಕೂಡ ಇದ್ದಕ್ಕಿದ್ದ ಹಾಗೆ ವಿದೇಶಕ್ಕೆ ಹಾರಿದ ದರ್ಶನ್. ಕಾರಣ ಕೇಳಿ ಶಾಕ್ ಆದ ಚಿತ್ರ ರಂಗ.

53

Get real time updates directly on you device, subscribe now.

ನಟ ದರ್ಶನ್ ಅವರು ಕಳೆದ ವೀಕೆಂಡ್ ನಲ್ಲಿ ನಡೆದ ಸೈಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ಹಲವು ವರ್ಷಗಳ ನಂತರ ದರ್ಶನ್ ಅವರನ್ನು ಪ್ರಶಸ್ತಿ ಸಮಾರಂಭದಲ್ಲಿ ನೋಡಲು ಅಭಿಮಾನಿಗಳು ಬಹಳ ಎಕ್ಸೈಟ್ ಆಗಿದ್ದರು. ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್ ಅವರೊಡನೆ ಕಾಣಿಸಿಕೊಂಡರು ಡಿಬಾಸ್. ಸೈಮಾ ಕಾರ್ಯಕ್ರಮ ಇದ್ದಕ್ಕಿದ್ದ ಹಾಗೆ ಡಿಬಾಸ್ ಫಾರಿನ್ ಫ್ಲೈಟ್ ಹತ್ತಿದ್ದು, ವಿದೇಶಕ್ಕೆ ಹಾರಿರುವ ಸುದ್ದಿ ಈಗ ವೈರಲ್ ಆಗುತ್ತಿದೆ.

ಏರ್ ಪೋರ್ಟ್ ನಲ್ಲಿ ದರ್ಶನ್ ಅವರು ಕಾಣಿಸಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ದರ್ಶನ್ ಅವರು ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕಾಗಿ ಪೋಲೆಂಡ್ ಗೆ ಹೋಗಿಬಂದಿದ್ದರು. ಕ್ರಾಂತಿ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ಅಲ್ಲಿ ಚಿತ್ರೀಕರಣ ಮಾಡಲಾಯಿತು, ಕ್ರಾಂತಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈ ನಡೆಯುತ್ತಿದ್ದು, ಡಿ56 ಸಿನಿಮಾದ ಒಂದು ಶೆಡ್ಯೂಲ್ ಚಿತ್ರೀಕರಣ ಸಹ ರಾಕ್ ಲೈನ್ ಸ್ಟುಡಿಯೋದಲ್ಲಿ ಮುಗಿದಿದೆ, ನಟಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ದರ್ಶನ್ ಅವರೊಡನೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಇದೆಲ್ಲದರ ಬಳಿಕ ಈಗ ದರ್ಶನ್ ಅವರು ಕೆಲವು ಸ್ನೇಹಿತರ ಜೊತೆಗೆ ವಿದೇಶಕ್ಕೆ ಟ್ರಿಪ್ ಹೋಗಿದ್ದಾರೆ, ಈ ಹಿಂದೆ ದರ್ಶನ್ ಅವರು ಕೀನ್ಯಾ ದೇಶಕ್ಕೆ ವೈಲ್ಡ್ ಲೈಫ್ ಫೋಟೋಗ್ರಾಫಿ ಸಲುವಾಗಿ ಸ್ನೇಹಿತರ ಜೊತೆಗೆ ಟ್ರಿಪ್ ಹೋಗಿದ್ದರು, ಉತ್ತರ ಭಾರತದಲ್ಲಿ ಸಹ ಡಿಬಾಸ್ ಅವರು ಸ್ನೇಹಿತರ ಜೊತೆಗೆ ಸುತ್ತಾಡಿ ಬಂದಿದ್ದರು. ಇದೀಗ ಮತ್ತೊಮ್ಮೆ ಇದೇ ಕಾರಣಕ್ಕೆ ಹೋಗಿರಬಹುದಾ ಎನ್ನುವ ಚರ್ಚೆ ಅಭಿಮಾನಿಗಳ ನಡುವೆ ಶುರುವಾಗಿದ್ದು, ಈ ವಿದೇಶ ಟ್ರಿಪ್ ನ ಹೆಚ್ಚು ಫೋಟೋಗಳು ಅಥವಾ ಮಾಹಿತಿಗಾಗಿ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

Get real time updates directly on you device, subscribe now.