ಇಂತಹ ಶಿಕ್ಷಕಿ ಕೂಡ ಇರ್ತಾರ?? ಎಲ್ಲರೂ ಶಾಲೆಯಲ್ಲಿ ಪಾಠ ಮಾಡಿದರೆ, ಇವತ್ತು ಪಾಠದ ಜೊತೆ ಏನು ಮಾಡುತ್ತಾರೆ ಗೊತ್ತೇ??
ಪ್ರತಿಯೊಂದು ಮಗುವಿನ ಜೀವನದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು, ಜೀವನ ರೂಪಿಸಿಕೊಳ್ಳಲು ಗುರುವಿನಿಂದ ಮಾತ್ರ ಸಾಧ್ಯ ಎನ್ನುವ ಮಾತಿದೆ. ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾತ್ರ ಮಾಡಿ ಹೋಗುತ್ತಾರೆ. ಇನ್ನು ಕೆಲವು ಶಿಕ್ಷಕರು ಸಂಬಳಕ್ಕಾಗಿ ಪಾಠ ಮಾಡುವ ಜೊತೆಗೆ, ಇನ್ನು ಕೆಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ, ಅಂತಹ ಒಬ್ಬ ಶಿಕ್ಷಕಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಆ ಶಿಕ್ಷಕಿಯ ಹೆಸರು ನಮ್ರತಾ ಆನಂದ್. ಇವರು ಪಾಟ್ನಾ ಜಿಲ್ಲೆಯ, ಸಿಪಾರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪರಿಸರ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಪಾಠ ಮಾಡುವ ಶಿಕ್ಷಕಿ ಆಗಿದ್ದಾರೆ. ಪ್ರತಿದಿನ ತಮ್ಮ ಕೆಲಸ ಮುಗಿದ ಬಳಿಕ, ಕೊಳಗೇರಿ ಮಕ್ಕಳಿಗೆ, ತೃತೀಯ ಲಿಂಗಿ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಾರೆ.
2007 ರಲ್ಲಿ ಇವರಿಗೆ ಸರ್ಕಾರಿ ಕೆಲಸ ಸಿಕ್ಕಿತು, ಅದರ ಬಳಿಕ ಇವರು ಮಾಡುವ ಸಾಮಾಜಿಕ ಕೆಲಸಗಳು ಕಡಿಮೆ ಆಗಲಿಲ್ಲ, ಸಮಾಜ ಸೇವೆ ಮತ್ತು ಪಾಠ ಮಾಡುವುದು ನನ್ನ ಪ್ಯಾಷನ್ ಎಂದು ಹೇಳುತ್ತಾರೆ ನಮ್ರತಾ. ಪಿ.ಎಚ್.ಡಿ ಮಾಡಿರುವ ನಮ್ರತಾ ಅವರು, ಕಷ್ಟದಲ್ಲಿರುವ ಮಕ್ಕಳಿಗೆ ಪಾಠ ಮಾಡಲು 4 ರಿಂದ 5 ಕೇಂದ್ರಗಳನ್ನು ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಭಾರತೀಯ ವಿಕಾಸ್ ಪರಿಷತ್ ಸಹ ಇವರು ಮಾಡುತ್ತಿರುವ ಕೆಲಸಗಳಿಗೆ ಸಪೋರ್ಟ್ ಮಾಡುತ್ತಿದೆ. ಇದರ ಸಹಯೋಗದಿಂದ ವಿಕಲಾಂಗರಿಗೆ ಕ್ಯಾಲಿಪರ್ ಗಳು, ತ್ರಿಚಕ್ರ ವಾಹನ, ಕೃತಕ ಕಾಲುಗಳನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲದೆ ಕೋವಿಡ್ 19 ಸಮಯದಲ್ಲಿ, ತೃತೀಯ ಲಿಂಗಿಗಳಿಗೆ ಉಚಿತವಾಗಿ ಪಡಿತರ ಸಿಗುವ ಹಾಗೆ ಮಾಡಿದರು, ಅದರಿಂದ ಅವರಿಗೆ ಚಳಿಗಾಲದಲ್ಲಿ ಹೊದಿಕೆಗಳನ್ನು ಸಹ ನೀಡಲಾಯಿತು.
2020ರಲ್ಲಿ ಪುಲ್ಜಾರಿಯಲ್ಲಿ ಸಂಸ್ಕಾರ ಶಾಲೆಯನ್ನು ಸ್ಥಾಪನೆ ಮಾಡಿದರು, ಈ ಜಾಗವನ್ನು ಮಿಥಿಲೇಶ್ ಸಿಂಗ್ ಅವರು ನೀಡಿದ್ದು, ಈ ಶಾಲೆಯಲ್ಲಿ ಕಷ್ಟದಲ್ಲಿರುವ ಕೊಳಗೇರಿ ಮಕ್ಕಳಿಗೆ ಉಚಿತವಾಗಿ ತರಬೇತಿ ಮತ್ತು ಶಿಕ್ಷಣ ನೀಡಲಾಗುತ್ತದೆ. ಸಂಗೀತ, ನೇಯ್ಗೆ, ಹೊಲಿಗೆ ಇಂಥದ್ದನ್ನು ಕಲಿತುಕೊಳ್ಳಬಹುದು. ಇಲ್ಲಿ ಕಲಿತ ಮಕ್ಕಳು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಹೆಂಗಸರಿಗೆ ಟೈಲರಿಂಗ್, ಬ್ಯೂಟಿಶಿಯನ್ ಕೋರ್ಸ್ ಗಳನ್ನು ಸಹ ಹೇಳಿಕೊಡುತ್ತಿದ್ದು, ಇದರ ಫಲಾನುಭವಿಗಳು ಒಳ್ಳೆಯ ಆದಾಯ ಗಳಿಸುತ್ತಾ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ. ನಮ್ರತಾ ಅವರ ತಂದೆ ಜಿಲ್ಲಾ ನ್ಯಾವಧಿಶರಾಗಿದ್ದಾರೆ. ಇವರಿಗೆ ಶಾಲಾ ಸಂಯೋಜಕಿಯಾಗಿ ಕೆಲಸ ಸಿಕ್ಕ ಬಳಿಕ, 2014 ರಿಂದ 2018ರವರೆಗೂ 15 ಶಾಲೆಗಳಲ್ಲಿ 2500 ಮಕ್ಕಳ ಜೊತೆಗೆ ಕೆಲಸ ಮಾಡಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಭೇಟಿ ಪಢಾವ್ ಭೇಟಿ ಬಚಾವ್, ಜಲ್ ಜೀವನ್ ಹರಿಯಾಲಿ ಮಿಷನ್ ಸೇರಿದಂತೆ ಸಾಕಷ್ಟು ಯೋಜನೆಗಳಲ್ಲಿ ಭಾಗವಹಿಸಿದ್ದಾರೆ.