ಸ್ವರ್ಗ ಸೇರಿದ ಮೇಲೂ ಅಪ್ಪುವನ್ನು ಹುಡುಕಿಕೊಂಡು ಬಂದ ಅತ್ಯುತ್ತಮ ನಟ ಪ್ರಶಸ್ತಿ. ಸೈಮಾ ಅವಾರ್ಡ್ಸ್ ನಲ್ಲಿ ಅಪ್ಪು ಧರ್ಬಾರ್.

39

Get real time updates directly on you device, subscribe now.

ಸೈಮಾ ಅವಾರ್ಡ್ಸ್, ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಇದು ದಕ್ಷಿಣ ಭಾರತ ಚಿತ್ರರಂಗದಲ್ಲಿ ನೀಡುವ ಬಹಳ ಗೌರವಾನ್ವಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2012ರಲ್ಲಿ ಶುರುವಾದ ಸೈಮಾ ಅವಾರ್ಡ್ಸ್ ಗೆ ಈ ವರ್ಷ 10ನೇ ವರ್ಷದ ಸಂಭ್ರಮ, ಈ ಶುಭ ವರ್ಷದ ಸಂಭ್ರಮವನ್ನು ಸೈಮಾ ಅವಾರ್ಡ್ಸ್ ಬೆಂಗಳೂರಿನಲ್ಲಿ ನಡೆಸಿದೆಮ್ ಸೆಪ್ಟೆಂಬರ್ 10 ಮತ್ತು 11ರಂದು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆದಿದೆ. ಸೆಪ್ಟೆಂಬರ್ 10ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಅವಾರ್ಡ್ಸ್ ನೀಡಲಾಯಿತು.

ನಿನ್ನೆಯ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಸೈಮಾ ವಿಶೇಷವಾದ ಗೌರವ ಸಲ್ಲಿಸಿತು, ಅಪ್ಪು ಅವರು ಇರುವ ಸಮಯದಲ್ಲಿ ಐದು ಸೈಮಾ ಅವಾರ್ಡ್ಸ್ ಗೆದ್ದಿದ್ದರು. ಈಗ ಅವರು ಇಲ್ಲದೆ ಇರುವ ಸಮಯದಲ್ಲು ಸೈಮಾ ಅವಾರ್ಡ್ಸ್ ನಲ್ಲಿ ಅಪ್ಪು ಅವರದ್ದೇ ದರ್ಬಾರ್. ಅಪ್ಪು ಅವರಿಗೆ ಈ ವರ್ಷ ಸಹ ಅವಾರ್ಡ್ ಸಿಕ್ಕಿದೆ. 2021 ರಲ್ಲಿ ತೆರೆಕಂಡ ಯುವರತ್ನ ಸಿನಿಮಾಗಾಗಿ ಅಪ್ಪು ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಅಪ್ಪು ಅವರ ಅನುಪಸ್ಥಿತಿಯಲ್ಲಿ ನಟ ಡಾಲಿ ಧನಂಜಯ್ ಅವರು ಅವಾರ್ಡ್ ಸ್ವೀಕರಿಸಿದ್ದಾರೆ.

ಧನಂಜಯ್ ಅವರೊಡನೆ ಯುವರತ್ನ ತಂಡ ಹಾಗೂ ಕನ್ನಡ ಚಿತ್ರರಂಗದ ನಟನಟಿಯರು ಅವಾರ್ಡ್ ಸ್ವೀಕರಿಸಿದರು. ಇನ್ನು ನಿನ್ನೆಯ ಕಾರ್ಯಕ್ರಮಕ್ಕೆ ಶಿವಣ್ಣ, ಗೀತಕ್ಕ, ಶಿವಣ್ಣ ಅವರ ಸಹೋದರಿ ಪೂರ್ಣಿಮಾ ಸಹ ಬಂದಿದ್ದರು. ಅಪ್ಪು ಅವರನ್ನು ವಿಶೇಷವಾಗಿ ಸ್ಮರಿಸಲಯಿತು ಜೊತೆಗೆ ಉಷಾ ಉತ್ತಪ್ಪ ಅವರು ಅವರು ಸಹ ಅಪ್ಪು ಅವರ ಹಾಡನ್ನು ಹಾಡಿದ್ದಾರೆ. ಶಿವಣ್ಣ ಅವರು ಅಪ್ಪು ಅವರನ್ನು ನೆನೆದು ವೇದಿಕೆಯ ಮೇಲೆ ಭಾವುಕರಾದರು. ಅಪ್ಪು ಅವರು ಇಲ್ಲದೆ ಹೋದರು ಅವರ ನೆನಪುಗಳು ಎಲ್ಲರಲ್ಲಿ ಹಾಗೆಯೇ ಇದೆ.

Get real time updates directly on you device, subscribe now.