ಅಸಲಿಗೆ ತೆಲುಗಿನ ಖ್ಯಾತ ನಟ ಕೃಷ್ಣಾಂರಾಜು ರವರ ಕೊನೆಯ ಆಸೆ ಪ್ರಭಾಸ್ ಮದುವೆಯಲ್ಲ. ಮತ್ತೇನು ಅಂತೇ ಗೊತ್ತೇ?? ಇಂತಹ ಸಮಯದಲ್ಲಿ ಹೀಗಾ ಆಗೋದು
ಟಾಲಿವುಡ್ ನಲ್ಲಿ ರೆಬೆಲ್ ಸ್ಟಾರ್ ಎಂದು ಹೆಸರು ಮಾಡಿರುವ ನಟ ಕೃಷ್ಣಂ ರಾಜು ಅವರು ಅನಾರೋಗ್ಯದ ಕಾರಣದಿಂದ ನಿನ್ನೆ ಇಹಲೋಕ ತ್ಯಜಿಸಿದರು. ಚಿಲಕ ಗೋರಿಂಕ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಸುಮಾರು 187 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕೆರಿಯರ್ ಮುಗಿಯಿತು ಎನ್ನುವ ಹಾಗಿದ್ದ ಸಮಯದಲ್ಲಿ ಸಹೋದರನ ಮಗ ಪ್ರಭಾಸ್ ಅವರನ್ನು ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸಿದರು. ಈಶ್ವರ್ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಪ್ರಭಾಸ್, ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಾಹುಬಲಿ ಸಿನಿಮಾ ಯಶಸ್ಸಿನಿಂದ ದೊಡ್ಡಪ್ಪ ಅವರಿಗೆ ಹೆಮ್ಮೆ ತಂದರು ಪ್ರಭಾಸ್.
2009ರಲ್ಲಿ ಪ್ರಜಾರಾಜ್ಯಮ್ ಪಕ್ಷದಿಂದ, ರಾಜಮಂಡ್ರಿ ಕ್ಷೇತ್ರದಿಂದ ಎಂಪಿ ಎಲೆಕ್ಷನ್ ನಲ್ಲಿ ಸ್ಪರ್ಧಿಸಿ ಸೋಲು ಕಂಡ ಕೃಷ್ಣಮ್ ರಾಜು ಅವರು ಬಳಿಕ ಸಿನಿಮಾ ಮತ್ತು ರಾಜಕೀಯ ಎರಡರಿಂದಲು ದೂರ ಉಳಿದರು. ಆದರೆ ತಮ್ಮ ಗೋಪಿ ಕೃಷ್ಣ ಬ್ಯಾನರ್ ಮೂಲಕ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಆಸಕ್ತಿ ತೋರಿಸಿದರು. ಕೃಷ್ಣಮ್ ರಾಜು ಅವರು ಇನ್ನಿಲ್ಲವಾದ ಬಳಿಕ ಪ್ರಭಾಸ್ ಅವರ ಮದುವೆ ನೋಡುವುದೇ ಅವರ ಕೊನೆಯ ಆಸೆ ಆಗಿತ್ತು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಕೃಷ್ಣಮ್ ರಾಜು ಅವರ ಕೊನೆಯ ಆಸೆ ಅದಾಗಿರಲಿಲ್ಲ, ಬದಲಾಗಿ, ಪ್ರಭಾಸ್ ಅವರಿಗೆ ಮದುವೆಯಾಗಿ, ಅವರಿಗೆ ಒಂದು ಮಗು ಜನಿಸಿ, ಆ ಮಗುವಿನ ಜೊತೆಗೆ ನಟಿಸಿ ತೆರೆಹಂಚಿಕೊಳ್ಳಬೇಕು ಎನ್ನುವುದು ಕೃಷ್ಣಮ್ ರಾಜು ಅವರ ಕೊನೆಯಾಸೆ ಆಗಿತ್ತಂತೆ.
ಈ ಕೊನೆಯ ಆಸೆಯ ಬಗ್ಗೆ ಕೃಷ್ಣಮ್ ರಾಜು ಅವರು ಅವರ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಿದ್ದರಂತೆ. ಪ್ರಭಾಸ್ ಅವರ ಮದುವೆ ಬಗ್ಗೆ ಸಹ ಕೃಷ್ಣಮ್ ರಾಜು ಅವರು ಅನೇಕ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಸ್ ಅವರಿಗೆ ಒಳ್ಳೆಯ ಹುಡುಗಿಯನ್ನು ಹುಡುಕುವ ಪ್ರಯತ್ನದಲ್ಲಿ ಇರುವುದಾಗಿಯೂ, ಮದುವೆ ಬಗ್ಗೆ ಪ್ರಭಾಸ್ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿದ್ದರು. ಪ್ರಭಾಸ್ ಅವರ ಮದುವೆ ನೋಡಬೇಕು ಎನ್ನುವುದು ಕೃಷ್ಣಮ್ ರಾಜು ಅಬರ ಆಸೆ ಆಗಿತ್ತು. ಪ್ರಭಾಸ್ ಅವರಿಗಾಗಿ ಒಳ್ಳೆಯ ಹುಡುಗಿಯನ್ನು ಹುಡುಕುತ್ತಿದ್ದು, ಶೀಘ್ರದಲ್ಲೇ ಪ್ರಭಾಸ್ ಮದುವೆ ಬಗ್ಗೆ ಅಪ್ಡೇಟ್ ಕೊಡುತ್ತೇನೆ ಎಂದು ಸಹ ಹೇಳಿದ್ದರು. ಆದರೆ ಪ್ರಭಾಸ್ ಅವರಿಗೆ ಮದುವೆಯಾಗದೆ, ಅವರ ಮಗುವಿನ ಜೊತೆ ನಟಿಸುವ ಮೊದಲೇ, ಕೃಷ್ಣಮ್ ರಾಜು ಅವರು ಇಹಲೋಕ ತ್ಯಜಿಸಿದ್ದಾರೆ.