ಶಾಲೆಯ ಬಾತ್ ರೂಮ್ ನಲ್ಲಿ ಜನಿಸಿತು ಮಗು: ಪೊದೆಯಲ್ಲಿ ಮೃತ ದೇಹ: ಪೋಲೀಸರ ತನಿಖೆಯಿಂದ ಬಯಾಲಾದ ಶಾಕ್ ರಹಸ್ಯ ಏನು ಗೊತ್ತೇ??
ತಮಿಳುನಾಡಿನ ಕಡಲೂರು ಜಿಲ್ಲೆಯ ಭುವನಗಿರಿ ಎಂಬ ಊರಿನ ಸರ್ಕಾರಿ ಶಾಲೆಯ ಬಳಿಯ ಪೊದೆಗಳಲ್ಲಿ ಕೆಲವು ವಿದ್ಯಾರ್ಥಿಗಳು ಮಗುವಿನ ಶವ ನೋಡಿದ್ದಾರೆ. ತಕ್ಷಣವೇ ಈ ವಿಷಯವನ್ನು ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಆಗಮನದಿಂದ ಅಸಲಿ ಸತ್ಯ ಹೊರಬಿದ್ದಿದೆ.ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಶವವನ್ನು ಹೊರತೆಗೆದಿದ್ದಾರೆ.
ಆಗ ಮಗುವಿನ ಕರುಳುಬಳ್ಳಿ ಸರಿಯಾಗಿ ಕತ್ತರಿಸದಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಶಾಲಾ ಆವರಣದಲ್ಲಿಯೇ ಮಗುವಿಗೆ ಜನ್ಮ ನೀಡಿರುವುದು ಪೊಲೀಸರಿಗೆ ತಿಳಿದುಬಂದಿದೆ.ತಕ್ಷಣ ಶಾಲೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಅಸಲಿ ವಿಷಯ ಏನು ಎನ್ನುವುದು ಹೊರಬಿದ್ದಿದೆ. 11ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಬಾಲಕಿಯನ್ನು ವಿಚಾರಣೆಗೆ ಆಕೆ ನಿಜ ವಿಚಾರವನ್ನು ಪೊಲೀಸರ ಬಳಿ ಹೇಳಿದ್ದಾಳೆ.
ಶಾಲೆಯ ಬಾತ್ ರೂಂನಲ್ಲಿ ಮಗುವಿಗೆ ಜನ್ಮ ನೀಡಿ, ಮಗುವನ್ನು ಶಾಲೆಯ ಪಕ್ಕದ ಪೊದೆಯಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾಳೆ. ಅದೇ ಊರಿನ ಬೇರೆ ಖಾಸಗಿ ಶಾಲೆಯಲ್ಲಿ ಓದುತ್ತಿರುವ 10ನೇ ತರಗತಿಯ ಹುಡುಗನಿಂದಾಗಿ ತಾನು ಗರ್ಭಿಣಿಯಾಗಿದ್ದೆ ಎಂದು ಆಕೆ ಹೇಳಿದ್ದಾಳೆ. ಘಟನೆಗೆ ಕಾರಣರಾದ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.